»   »  'ರಾಜ್' ಫೋಬಿಯಾ; ಚಿತ್ರೋದ್ಯಮದಲ್ಲಿ ತಲ್ಲಣ

'ರಾಜ್' ಫೋಬಿಯಾ; ಚಿತ್ರೋದ್ಯಮದಲ್ಲಿ ತಲ್ಲಣ

Subscribe to Filmibeat Kannada

ಪುನೀತ್ ನಟನೆಯ ಅದ್ದೂರಿ ಚಿತ್ರ 'ರಾಜ್ ದ ಶೋಮ್ಯಾನ್' ಬಿಡುಗಡೆಗೆ ದಿನ ಸಮೀಪಿಸುತ್ತಿದೆ. 'ರಾಜ್' ಚಿತ್ರಕ್ಕೆ ಹೆದರಿಕೊಂಡ ಇತರೆ ಕನ್ನಡದ ಚಿತ್ರಗಳು ಹೇಗಾದರೂ ಮಾಡಿ ಜುಲೈನಲ್ಲೇ ತೆರೆಕಾಣಲು ಅವಸರ ತೋರುತ್ತಿವೆ. ರಾಜ್ ಅಬ್ಬರಕ್ಕೆ ಡಜನ್ ಗಟ್ಟಲೆ ಚಿತ್ರಗಳು ಬಿಡುಗಡೆಗಾಗಿ ತವಕಿಸುತ್ತಿವೆ.

ಜುಲೈ 17ರಂದು ನಿರ್ದೇಶಕ ಹೇಮಂತ್ ಹೆಗಡೆಯ 'ಹೌಸ್ ಫುಲ್' ತೆರೆಕಾಣಲಿದೆ. ನಾಮುಂದು ತಾಮುಂದು ಎಂದು ಬಿಡುಗಡೆಯಾಗಲು ಹೊಸ ಚಿತ್ರಗಳ ನಡುವೆ ತೀವ್ರ ಸ್ಪರ್ಧೆಯೇ ಏರ್ಪಟ್ಟಿದೆ. ಇದರ ನೇರ ಪರಿಣಾಮ ನಮ್ಮಂತವರ ಮೇಲೆ ಉಂಟಾಗಿದೆ. ಈ ವರ್ಷದ ಅತಿದೊಡ್ಡ ಬಜೆಟ್ ನ'ರಾಜ್' ಚಿತ್ರದ ಬಗ್ಗೆ ಪ್ರೇಕ್ಷಕರ ಭಯಪಡುವ ಅಗತ್ಯವಿಲ್ಲ ಎನ್ನುತ್ತಾರೆ ಹೇಮಂತ್ ಹೆಗಡೆ.

ಇದೇ ರೀತಿಯ ಅಭಿಪ್ರಾಯವನ್ನೂ ಚಿತ್ರೋದ್ಯಮದ ಹಲವರು ವ್ಯಕ್ತಪಡಿಸಿದ್ದಾರೆ. ''ಈಗೇನು ನಡೆಯುತ್ತಿದೆ ಅದು ಸಂಪೂರ್ಣ ಅನಾರೋಗ್ಯ ಕರಬೆಳವಣಿಗೆ. ತಮ್ಮ್ಮ ತಮ್ಮ ಚಿತ್ರಗಳನ್ನು ಎಲ್ಲರೂ ಒಟ್ಟಿಗೆ ಬಿಡುಗಡೆ ಮಾಡಲು ಹೊರಟಿದ್ದಾರೆ. ಇದರಿಂದ ಚಿತ್ರಮಂದಿರಗಳ ಸಮಸ್ಯೆ ಉದ್ಭವಿಸುತ್ತದೆ ''ಎನ್ನುತ್ತಾರೆ ವಿಜಯಲಕ್ಷ್ಮಿ ಸಿಂಗ್. ಹಾಗೆಯೇ ಅವರ 'ಮಳೆ ಬರಲಿ ಮಂಜು ಇರಲಿ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಹೆಸರು ಹೇಳಲು ಇಚ್ಛಿಸದ ಚಿತ್ರೋದ್ಯಮದ ಮತ್ತೊಬ್ಬ್ಬರು , ರಾಜ್ ಬಿಡುಗಡೆ ನಂತರ ಚಿತ್ರಮಂದಿರ ಸಿಗುವುದು ಕಷ್ಟ. ಹಾಗಾಗಿ ನಮ್ಮ ಚಿತ್ರವನ್ನು ರಾಜ್ ಬಿಡುಗಡೆಗೂ ಮುನ್ನ ತೆರೆಗೆ ತರುತ್ತಿದ್ದೇವೆ ಎನ್ನುತ್ತಾರೆ. ಜುಲೈ 17ರಂದು ನವರಸ ನಾಯಕ ಜಗ್ಗೇಶ್ ಎಚ್ಚರಗೊಂಡು 'ಎದ್ದೇಳು ಮಂಜುನಾಥ 'ರೂಪದಲ್ಲಿ ದರ್ಶನ ನೀಡಲಿದ್ದಾನೆ. ಒಟ್ಟಿನಲ್ಲಿ ರಾಜ್ ಚಿತ್ರ ಕನ್ನಡ ಚಿತ್ರದೋದ್ಯಮದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada