»   » ಬಿಕಿನಿ ಅಲ್ಲ ಅದು ವಿಕ್ಟೋರಿಯಾ ಸೀಕ್ರೆಟ್ ಸ್ವಿಮ್‌ಸ್ಯೂಟ್

ಬಿಕಿನಿ ಅಲ್ಲ ಅದು ವಿಕ್ಟೋರಿಯಾ ಸೀಕ್ರೆಟ್ ಸ್ವಿಮ್‌ಸ್ಯೂಟ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಹಾಟ್ ಬೆಡಗಿಯಾಗಿ ಹೊರಹೊಮ್ಮಿರುವ ತಾರೆ ರಾಗಿಣಿ ದ್ವಿವೇದಿ. 'ಕಳ್ಳ ಮಳ್ಳ ಸುಳ್ಳ' ಚಿತ್ರದಲ್ಲಿ "ತುಪ್ಪ ಬೇಕೆ ತುಪ್ಪ" ಎಂದು ರೋಚಕವಾಗಿ ನೃತ್ಯ ಮಾಡಿ ಪಡ್ಡೆಗಳ ಮೂಗಿಗೆ ತುಪ್ಪ ಸವರಿ ಅವರನ್ನು ಹುಚ್ಚೆಬ್ಬಿಸಿದ್ದರು. ಅದಾದ ಬಳಿಕ ರಾಗಿಣಿ ಮತ್ತೊಂದು ಐಟಂ ಹಾಡಿನಲ್ಲಿ ಮಾಡಲಿದ್ದಾರೆ ಎಂಬ ಸುದ್ದಿಯಿದೆ.

ಈ ಸುದ್ದಿ ಹೊರಬಿದ್ದದ್ದೇ ತಡ ಕೆಲವರು ರಾಗಿಣಿಗೆ ಫೋನ್ ಮಾಡಿ ತಾವು ಬಿಕಿನಿ ದೃಶ್ಯಗಳಲ್ಲಿ ಅಭಿನಯಿಸಬಾರದಿತ್ತು ಛೇ ಛೇ ಎಂದರಂತೆ. ಈ ಬಗ್ಗೆ ರಾಗಿಣಿಗೂ ಕೊಂಚ ಬೇಜಾರಾಗಿದೆಯಂತೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕೆಲವರಿಗೆ ಬಿಕಿನಿಗೂ ವಿಕ್ಟೋರಿಯಾ ಸ್ವಿಮ್ ಸ್ಯೂಟ್‌ಗೂ ವ್ಯತ್ಯಾಸವೇ ಗೊತ್ತಿಲ್ಲ ಎಂದಿದ್ದಾರೆ.

ನಾನು ಇದುವರೆಗೂ ಯಾವುದೇ ಬಿಕಿನಿ ಸನ್ನಿವೇಶಗಳಲ್ಲಿ ಅಭಿನಯಿಸಿಲ್ಲ. ಅವಶ್ಯಕತೆ ಬಿದ್ದರೆ ಬಿಕಿನಿ ಧರಿಸಲು ತಮ್ಮದೇನು ಅಭ್ಯಂತರವಿಲ್ಲ. ಆ ರೀತಿಯ ಪಾತ್ರ ಬಂದರೆ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಖಡಕ್ ಆಗಿ ನುಡಿದಿದ್ದಾರೆ.

ಬಿಕಿನಿಗೆ ಯಾಕೆ ಅಷ್ಟೊಂದು ಪ್ರಾಮುಖ್ಯತೆ ನೀಡುತ್ತಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ನಾನು ಮಾತ್ರ ಬಿಕಿನಿಯನ್ನು ಎಲ್ಲ ವಸ್ತ್ರಗಳಂತೆ ಅದು ಒಂದು ಎಂದು ಭಾವಿಸುತ್ತೇನೆ. 'ಆರಕ್ಷಕ' ಚಿತ್ರದಲ್ಲಿ ನಾನೂ ಹಾಗೂ ಸದಾ ಅಭಿನಯಿಸುತ್ತಿದ್ದೇವೆ. ಇದರಲ್ಲಿ ತಮ್ಮ ಪಾತ್ರ ಬಹಳ ಪ್ರಾಮುಖ್ಯತೆಯಿಂದ ಕೂಡಿದೆ ಎಂದಿದ್ದಾರೆ.

"ತುಪ್ಪ ಬೇಕ ತುಪ್ಪ" ಹಾಡಿನ ಬಳಿಕ ಬಹಳಷ್ಟು ಐಟಂ ಹಾಡುಗಳು ತಮ್ಮನ್ನು ಹುಡುಕಿಕೊಂಡು ಬರುತ್ತಿವೆ. ಹೀರೋಯಿನ್ ಒಬ್ಬಳು ಮಾಡುವ ಸೋಲೋ ಸಾಂಗ್‌ಗೆ ಐಟಂ ಹಾಡು ಎಂದು ಕರೆಯುವುದು ಅಷ್ಟು ಸಮಂಜಸವಲ್ಲ. ಹೀರೋಯಿನ್‌ಗಳು ಐಟಂ ಸಾಂಗ್ಸ್ ಮಾಡುವುದು ತಪ್ಪಲ್ಲ. ತಮಗೂ ಉತ್ತಮ ಅವಕಾಶ ಸಿಕ್ಕಿದರೆ ಖಂಡಿತ ಅಭಿನಯಿಸುತ್ತೇನೆ ಎಂದಿದ್ದಾರೆ. (ಒನ್‌ಇಂಡಿಯಾ ಕನ್ನಡ)

English summary
Kannada actress Ragini Dwivedi denies that she didn't worn a bikini in Kannada movie Aarakshaka. Meanwhile she clarifies that its not a bikini its a Victoria's Secret swimsuit.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada