»   » ಒಂದು ಕಾಲದಲ್ಲಿ ನಿರ್ದೇಶಕ ಈಗ ಠಕ್ಕ ಬಿಟ್ಟರೆ ಸಿಕ್ಕ

ಒಂದು ಕಾಲದಲ್ಲಿ ನಿರ್ದೇಶಕ ಈಗ ಠಕ್ಕ ಬಿಟ್ಟರೆ ಸಿಕ್ಕ

Posted By:
Subscribe to Filmibeat Kannada

ಒಂದು ಕಾಲದಲ್ಲಿ ಈತ ಚಲನಚಿತ್ರ ನಿರ್ದೇಶಕ. ಒಂದು ಚಿತ್ರಕ್ಕೂ ಆಕ್ಷನ್, ಕಟ್ ಹೇಳಿದ್ದಾಯಿತು. ಆ ಚಿತ್ರ ಬಾಕ್ಸಾಫೀಸಲ್ಲಿ ತೋಪೆದ್ದು ಹೋಗಿತ್ತು. ಆತನ ಜೊತೆ ಚಿತ್ರ ನಿರ್ಮಿಸಲು ಯಾವೊಬ್ಬ ನಿರ್ಮಾಪಕನು ಮುಂದೆ ಬರಲಿಲ್ಲ. ಕಡೆಗೆ ಬೇಸತ್ತು ಆತ ಚಿತ್ರ ನಿರ್ದೇಶನವನ್ನು ಮಾಡಲಾಗದೆ ಹೊಟ್ಟೆ ಪಾಡಿಗೆ ಕೆಲಸವೊಂದನ್ನು ಹುಡುಕಿಕೊಳ್ಳಲಾದಂತಹ ದುಸ್ಥಿತಿಗೆ ತಲುಪಿದ.

ಇದು ಯಾವುದೋ ಚಿತ್ರದ ಕಥೆಯಲ್ಲ. ನಿಜಜೀವನದಲ್ಲಿ ನಡೆದ ನೈಜ ಕಥೆಯಿದು.ನಿರ್ದೇಶಕನ ಹೆಸರು ವಿ ವಿ ನಾರಾಯಣ್. ಕೆಲತಿಂಗಳ ಹಿಂದೆ ಈತ ಹೈದರಾಬಾದ್ ನ ಕೂಕಟ್ ಪಲ್ಲಿಯ ಮನೆಯೊಂದಕ್ಕೆ ನುಗ್ಗಿ ಕಳ್ಳತನ ಮಾಡಿದ್ದಾನೆ. ಗೋಡೆ ಹಾರಿ ಕೆಳಗೆ ಬಿದು ಕಾಲು ಮುರಿದುಕೊಂಡು ಮಾಲು ಸಮೇತ ಸಿಕ್ಕಿಬಿದ್ದಿದ್ದಾನೆ.

ತೆಲುಗಿನಲ್ಲಿ ಈತ 'ಜಲ್ಲು' ಎಂಬ ಚಿತ್ರವನ್ನು ನಿರ್ದೇಶಿಸಿದ್ದ. ಆ ಚಿತ್ರ ಬಾಕ್ಸಾಫೀಸಲ್ಲಿ ಹೇಳಹೆಸರಿಲ್ಲದಂತೆ ನಾಪತ್ತೆಯಾಗಿತ್ತು. ಈತನಿಗೋ ಚಿತ್ರ ನಿರ್ದೇಶನ ಬಿಟ್ಟ್ಟರೆ ಇನ್ನೊಂದು ವಿದ್ಯೆ ಗೊತ್ತಿರಲಿಲ್ಲವಂತೆ. ಈತನಲ್ಲಿನ ತುಡುಗು ಬುದ್ಧಿ ಜಾಗೃತಗೊಂಡು ಕಳ್ಳನಾಗಿ ಬದಲಾಗಿದ್ದಾನೆ. ಠಕ್ಕ ಬಿಟ್ಟರೆ ಸಿಕ್ಕ ಎಂಬಾತಾಗಿದೆ ಈತನ ಪರಿಸ್ಥಿತಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada