»   »  ಕನ್ನಡ ನಟಿಯರ ಸೊಂಟದ ಸುತ್ತ ಒಂದು ನೋಟ!

ಕನ್ನಡ ನಟಿಯರ ಸೊಂಟದ ಸುತ್ತ ಒಂದು ನೋಟ!

Subscribe to Filmibeat Kannada
Ramya
ಕನ್ನಡ ಪ್ರೇಕ್ಷಕರು ಬಳುಕುವ ಬಳ್ಳಿಯರಿಗೆ ಹೆಚ್ಚು ಮನಸೋತಿದ್ದಾರೆ. ಹಾಗಾಗಿ ಬಹಳಷ್ಟು ನಟಿಯರು ತಮ್ಮ ಸೊಂಟದ ಸುತ್ತಳತೆ ಬಗ್ಗೆ ಸಾದಾ ಒಂದು ಕಣ್ಣು ಇಟ್ಟೇ ಇರುತ್ತಾರೆ. ಕಿರಣ್ ಬೇಡಿ ಚಿತ್ರಕ್ಕಾಗಿ ಮಾಲಾಶ್ರೀ ಸಹ ಸಾಕಷ್ಟು ತೆಳ್ಳಗಾಗಿದ್ದರು. ಇದಕ್ಕಾಗಿ ಅವರು ಶತಪ್ರಯತ್ನ ಮಾಡಿ 15 ಕೆಜಿ ತೂಕವನ್ನು ಇಳಿಸಿಕೊಂಡಿದ್ದರು.

ಚಿತ್ರೀಕರಣ ಇಲ್ಲ ಅಂದ್ರೆ ನನ್ನ ಮೊದಲ ಆದತ್ಯೆ ತಿಂಡಿ. ಕಿರಣ್ ಬೇಡಿ ಚಿತ್ರೀಕರಣ ಮುಗಿದ ಬಳಿಕ ಮತ್ತೆ ನಾಲಿಗೆ ಚಪಲಕ್ಕೆ ಬಿದ್ದು 9 ಕೆಜಿ ತೂಕ ಹೆಚ್ಚಿದ್ದೇನೆ ಎನ್ನುತ್ತಾರೆ ಮಾಲಾಶ್ರೀ. ಹಾಗಾಗಿ ಆಹಾರದಲ್ಲಿ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಾರೆ. ಹೀಗೆಯೇ ಬಹಳಷ್ಟು ನಟಿಯರು ಆಹಾರ ಪದ್ಧತಿಯ ಕಡೆಗೆ ಗಮನ ಹರಿಸಿದ್ದಾರೆ.

ನಟಿ ತಾರಾ ಅವರಂತೂ ಆಗಾಗ ಧರ್ಮಸ್ಥಳ ಮತ್ತಿತರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಉಪವಾಸದಲ್ಲಿ ಕಾಲ ಕಳೆಯುತ್ತಾರೆ. ಬಿಂದಾಸ್ ಹುಡುಗಿ ಪ್ರಿಯಾ ಹಾಸನ್ ಅವರು ಹೆಚ್ಚಾಗಿ ದ್ರವ ಆಹಾರಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ. ತೆಳ್ಳಗೆ ಬಳುಕವ ಬಳ್ಳಿಯಂತಿರುವ ದೀಪಿಕಾ ಪಡುಕೋಣೆ ಅವರಂತೂ ಉತ್ತಮ ಆಹಾರವೇ ನನ್ನ ಸೌಂದರ್ಯ ರಹಸ್ಯ ಎನ್ನುತ್ತಾರೆ.

ರಮ್ಯಾ ಅವರಂತೂ ಈ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವುದಿಲ್ಲವಂತೆ. ತಮಿಳಿನ 'ಪೊಲ್ಲದವನ್' ಚಿತ್ರದಲ್ಲಿ ಅವಕಾಶ ಸಿಗಲು ನಾನು ಒಂಚೂರು ದುಂಡುಗುಂಡಗೆ ಇದ್ದದ್ದೆ ಕಾರಣ ಎನ್ನುತ್ತಾರೆ. ತಮಿಳು ಚಿತ್ರರಂಗದಲ್ಲಿ ತೆಳ್ಳಗೆ ಬಳುಕುವಂತಿರುವ ನಟಿಯರಿಗೆ ಮಣೆ ಹಾಕಲ್ಲ. ಏನಿದ್ದರೂ ಅಲ್ಲಿ ಸೊಂಟ ಸುಮಾರಾಗಿದ್ದರೇನೆ ಅವಕಾಶ ಎಂಬುದು ಅವರ ಮನದಾಳದ ಇಂಗಿತ. ಹೀಗಿದ್ದರೂ ರಮ್ಯಾ ನಿತ್ಯ ಜಾಗ್ ಮತ್ತು ವ್ಯಾಯಾಮ ಮಾಡುತ್ತಾರೆ.

ಕನ್ನಡ ಚಿತ್ರರಂಗಕ್ಕೆ ಮೊದಲು ಈಜುಡುಗೆಯನ್ನು ಪರಿಚಯಿಸಿದ ಖ್ಯಾತಿ ನಟಿ ಜಯಂತಿ ಅವರಿಗೆ ಸಲ್ಲುತ್ತದೆ! ಕನ್ನಡ ಬೆಳ್ಳಿಪರದೆ ಮೇಲೆ 1965ರಲ್ಲಿ ಜಯಂತಿ ಈಜುಡುಗೆಯಲ್ಲಿ ದರ್ಶನ ಕೊಟ್ಟಿದ್ದರು. ನಂತರ ಭಾರತಿ ವಿಷ್ಣುವರ್ಧನ್ 1970ರಲ್ಲಿ ಈಜುಡುಗೆ ತೊಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ಜೋಕೆ...ನಾನು ಬಳುಕುವ ಬಳ್ಳಿ ಎಂದು ಹಲವಾರು ನಟಿಯರು ಈಜು ಉಡಿಗೆಯಲ್ಲಿ ಕಾಣಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada