For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಯ ಕ್ಷಣ ಸಮೀಪಿಸಿರುವ ಸಿದ್ಲಿಂಗು ಸಿನಿಮಾ

  |

  ಸ್ಯಾಮಿ ಅಸೋಸಿಯೇಟ್ಸ್ ಲಾಂಛನದಲ್ಲಿ ಟಿ.ಪಿ.ಸಿದ್ದರಾಜು ನಿರ್ಮಿಸಿರುವ 'ಸಿದ್ಲಿಂಗು' ಚಿತ್ರ ಇದೇ ವಾರ, ಜನವರಿ 13, 2012 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ. ಲೂಸ್ ಮಾದ ಯೋಗೇಶ್ ಮತ್ತು ರಮ್ಯಾ ಜೋಡಿಯ ಸಿದ್ಲಿಂಗು ಚಿತ್ರ ಸೆಟ್ಟೇರಿದ ದಿನದಿಂದಲೂ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿ ನಿರೀಕ್ಷೆ ಮೂಡಿಸಿದೆ.

  ಚಿತ್ರದ ನಾಯಕಿ ರಮ್ಯಾ ಈಗಾಗಲೇ ಸಿದ್ಲಿಂಗು ಚಿತ್ರ ಹಾಗೂ ಅವರ ಪಾತ್ರದ ಬಗ್ಗೆ ಸಾಕಷ್ಟು ಹೇಳಿಕೊಂಡಿದ್ದಾರೆ. "ನನ್ನ ವೃತ್ತಿ ಜೀವನದಲ್ಲಿ ಸಿದ್ಲಿಂಗುವಿನ 'ಮಂಗಳಾ' ಟೀಚರ್ ಪಾತ್ರ ವಿಭಿನ್ನ ಹಾಗೂ ಅವಿಸ್ಮರಣೀಯ" ಎಂದಿದ್ದಾರೆ. ಜೊತೆಗೆ ಯೋಗೇಶ್ ಬಗ್ಗೆ "ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಂತಹ ಪಾತ್ರವನ್ನಾದರೂ ಮಾಡಬಲ್ಲ ಕಲಾವಿದ" ಎಂದಿದ್ದಾರೆ.

  ಸಿದ್ಲಿಂಗು ಚಿತ್ರ ತೆರೆಯ ಮೇಲೆ ಕಾಣಿಸಿಕೊಳ್ಳಲು ಇನ್ನೆರಡೇ ದಿನ ಬಾಕಿ. ಇಡೀ ಚಿತ್ರತಂಡ ನಿರೀಕ್ಷೆ ಹಾಗೂ ಆತ್ಮವಿಶ್ವಾಸದಿಂದ ಮಾತನಾಡುತ್ತಿದೆ. ರಮ್ಯಾ ಹಾಗೂ ಯೋಗೇಶ್ ಇಬ್ಬರಿಗೂ ಸಾಕಷ್ಟು ಅಭಿಮಾನಿಗಳು ಇರುವುದರಿಂದ ಚಿತ್ರ ಒಳ್ಳೆಯ ಓಪನಿಂಗ್ ಪಡೆಯುವುದು ಖಂಡಿತ ಎನ್ನಲಾಗುತ್ತಿದೆ.

  ವಿಜಯಪ್ರಸಾದ್ ನಿರ್ದೇಶನದ ಈ ಚಿತ್ರಕ್ಕೆ ಜ್ಞಾನಮೂರ್ತಿ ಅವರ ಛಾಯಾಗ್ರಹಣವಿದೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನವಿರುವ 'ಸಿದ್ಲಿಂಗು'ವಿಗೆ ಉದಯ ಹೆಗಡೆ ಅವರ ಸಂಕಲನವಿದೆ. ಇಡೀ ಟೀಮ್ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆಯೆಂಬುದು ಚಿತ್ರತಂಡದ ಹೇಳಿಕೆ. ಸತ್ಯ, ಸದ್ಯದಲ್ಲೇ ಹೊರಬೀಳಲಿದೆ. (ಒನ್ ಇಂಡಿಯಾ ಕನ್ನಡ)

  English summary
  Yogesh Ramya starer upcoming movie Sadlingu is going to release in this week, Jan. 13, 2012. This film directed by Silli Lilli serial fame Vijayaprasad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X