twitter
    For Quick Alerts
    ALLOW NOTIFICATIONS  
    For Daily Alerts

    ಮರಳಿದ ಶುಕ್ರವಾರದ ಸಂಭ್ರಮ: ಒಂದೇ ದಿನ 10 ಹೊಸ ಸಿನಿಮಾ ಬಿಡುಗಡೆ

    |

    ಕೊರೊನಾ ದಿಂದಾಗಿ ಬಣಗುಟ್ಟುತ್ತಿದ್ದ ಚಿತ್ರಮಂದಿರಗಳಿಗೆ ಮತ್ತೆ ಹಳೆಯ ಕಳೆ ಮರಳುತ್ತಿದೆ. ಚಿತ್ರಮಂದಿರಗಳು ತೆರೆದರೂ ಸಿನಿಮಾ ಬಿಡುಗಡೆಗೆ ಹಿಂದಡಿ ಇಡುತ್ತಿದ್ದ ನಿರ್ಮಾಪಕರು ನಿಧಾನಕ್ಕೆ ಭಯದ ಚಿಪ್ಪಿನಿಂದ ಹೊರಗೆ ಬರುತ್ತಿದ್ದಾರೆ.

    ಇದಕ್ಕೆ ಉದಾಹರಣೆಯೆಂಬಂತೆ ಇಂದು (ಫೆಬ್ರವರಿ 26) ಒಂದೇ ದಿನ ರಾಜ್ಯದಾದ್ಯಂತ ವಿವಿಧ ಚಿತ್ರಮಂದಿರಗಳಲ್ಲಿ ಬರೋಬ್ಬರಿ ಹತ್ತು ಕನ್ನಡ ಸಿನಿಮಾಗಳು ಬಿಡುಗಡೆ ಆಗಿವೆ.

    ಕೊರೊನಾ ಲಾಕ್‌ಡೌನ್ ಮುಗಿದ ಬಳಿಕ ಇದೇ ಮೊದಲ ಬಾರಿಗೆ ಒಂದೇ ಶುಕ್ರವಾರ ಇಷ್ಟೋಂದು ಸಿನಿಮಾಗಳು ಬಿಡುಗಡೆ ಆಗಿವೆ. ಚಿತ್ರಮಂದಿರಗಳಿಗೆ ಶುಕ್ರವಾರದ ಸಂಭ್ರಮ ಮರಳಿ ಬಂದಿದೆ.

    10 Kannada Movies Released In Theaters On February 26

    ಕುಷ್ಕ , ಪ್ರೇಮನ್ , ಸಾಲ್ಟ್ , ಸೈನೈಡ್ ಮಲ್ಲಿಕ, ಅಂಬಾನಿ ಪುತ್ರ , ಸ್ಕ್ಯಾರಿ ಫಾರೆಸ್ಟ್ , ಕರ್ತ, ಜನುಮದ ಸ್ನೇಹಿತರು. ಆಟೋ ರಾಮಣ್ಣ, ಮಾರ್ಡರ್ನ್ ಮಹಾಭಾರತ ಸಿನಿಮಾಗಳು ಇಂದು ಬಿಡುಗಡೆ ಆಗಿವೆ.

    ಇಂದು ಬಿಡುಗಡೆ ಆಗುತ್ತಿರುವ ಸಿನಿಮಾಗಳಲ್ಲಿ ಬಹುತೇಕ ಹೊಸಬರ ಸಿನಿಮಾಗಳೇ ಆಗಿವೆ. ಆಟೋ ಚಾಲಕ ಆಟೋ ರಾಮಣ್ಣ ಎಂಬುವರು ತಮ್ಮದೇ ಹೆಸರಿನಲ್ಲಿ ಸಿನಿಮಾ ಒಂದನ್ನು ನಿರ್ಮಿಸಿ, ನಿರ್ದೇಶಿಸಿ, ನಟಿಸಿದ್ದಾರೆ. ಕತೆ, ಚಿತ್ರಕತೆ, ಸಾಹಸ ನಿರ್ದೇಶನವೂ ಅವರದ್ದೇ. ಈ ಸಿನಿಮಾಕ್ಕೆ ಸಾಹಿತಿ ದೊಡ್ಡರಂಗೇಗೌಡ ಸಾಹಿತ್ಯ ಬರೆದಿದ್ದಾರೆ.

    ಇನ್ನು 'ಕುಂದಾಪುರ' ಸಿನಿಮಾವು ಕುಂದಾಪುರ, ಮಣಿಪಾಲ, ಮಂಗಳೂರುಗಳಲ್ಲಿ ಬಿಡುಗಡೆ ಆದರೆ 'ಮಾರ್ಡನ್ ಮಹಾಭಾರತ' ಸಿನಿಮಾ ಸಹ ಆ ಭಾಗದ ಚಿತ್ರಮಂದಿರಗಳಲ್ಲಿ ಮಾತ್ರವೇ ಬಿಡುಗಡೆ ಆಗುತ್ತಿದೆ.

    'ಕುಷ್ಕ' ಸಿನಿಮಾದಲ್ಲಿ ನಿರ್ದೇಶಕ ಗುರುಪ್ರಸಾದ್ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಸಖತ್ ಸದ್ದು ಮಾಡಿತ್ತು. ಈ ಸಿನಿಮಾ ಇಂದು ಬಿಡುಗಡೆ ಆಗಿದೆ. ಇನ್ನು ಸ್ಕೇರಿ ಫಾರೆಸ್ಟ್ ಮತ್ತು ಸಾಲ್ಟ್ ಸಿನಿಮಾಗಳು ಹೊಸಬರೇ ಮಾಡಿರುವ ಮೊದಲ ಪ್ರಯತ್ನಗಳು.

    Recommended Video

    ರಶ್ಮಿಕಾ ಮುಂಬೈನಲ್ಲಿ ಖರೀದಿಸಿದ ಮನೆಯ ಬೆಲೆ ಎಷ್ಟು ಕೋಟಿ ಗೊತ್ತಾ? | Filmibeat Kannada

    ಇನ್ನು ತೆಲುಗಿನಲ್ಲಿ ಮೂರು ಪ್ರಮುಖ ಸಿನಿಮಾಗಳು ಇಂದೇ ಬಿಡುಗಡೆ ಆಗಿವೆ. ನಿತಿನ್ ನಟನೆಯ ಚೆಕ್, ಮಹಿಳಾ ಪ್ರಧಾನ ಸಿನಿಮಾ ಅಕ್ಷರ, ಕ್ಷಣ-ಕ್ಷಣಂ ಸಿನಿಮಾಗಳು ಸಹ ಬಿಡುಗಡೆ ಆಗಿವೆ.*

    English summary
    Ten new Kannada movies released in theaters on February 26 Friday.
    Saturday, February 27, 2021, 7:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X