For Quick Alerts
ALLOW NOTIFICATIONS  
For Daily Alerts

  ಈ ವಾರ ಹತ್ತಕ್ಕೂ ಹೆಚ್ಚು ಸಿನಿಮಾ ರಿಲೀಸ್: ಇತಿಹಾಸ ನಿರ್ಮಿಸಿದ ಕನ್ನಡ ಚಿತ್ರರಂಗ

  |

  ವಾರಕ್ಕೆ ಐದು, ಆರು, ಏಳು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಆದ್ರೆ, ಈ ವಾರ ಹತ್ತಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಚಿತ್ರಮಂದಿರಕ್ಕೆ ಬರ್ತಿದೆ. ಸದ್ಯ ಲೆಕ್ಕಕ್ಕೆ ಹನ್ನೊಂದು ಸಿನಿಮಾ ಸಿಕ್ಕಿದೆ, ನಿಖರವಾಗಿ ಮಾಹಿತಿ ಬಹಿರಂಗಪಡಿಸದೇ ಕೆಲವು ಚಿತ್ರಗಳು ಥಿಯೇಟರ್ ಗೆ ಬರ್ತಿದೆ.

  ಹಾಗ್ನೋಡಿದ್ರೆ, ಈ ವಾರ ಹನ್ನೊಂದು ಚಿತ್ರಗಳು ರಿಲೀಸ್ ಆಗಲಿವೆ ಎನ್ನಲಾಗಿದೆ. ಕನ್ನಡದಲ್ಲಿ ಹೆಚ್ಚು ಸಿನಿಮಾಗಳು ಬರ್ತಿವೆ ಎಂದು ಖುಷಿ ಪಡಬೇಕಾ ಅಥವಾ ಒಂದೇ ವಾರ ಇಷ್ಟೊಂದು ಸಿನಿಮಾಗಳು ಬಂದ್ರೆ ಹೇಗೆ ನೋಡೋದು ಅಂತ ಬೇಜಾರಾಗ್ಬೇಕಾ.?

  ಬಟ್, ಇಂತಹ ಗೊಂದಲದ ಸಮಯದಲ್ಲೂ ಕನ್ನಡ ಸಿನಿಮಾರಂಗ ಇತಿಹಾಸ ನಿರ್ಮಿಸಿದೆ. ಈ ವಾರ ಬಿಡುಗಡೆಯಾಗುತ್ತಿರುವ ಹತ್ತು ಸಿನಿಮಾಗಳ ಮೂಲಕ ವರ್ಷದಲ್ಲಿ 200 ಸಿನಿಮಾ ತೆರೆಕಂಡ ದಾಖಲೆ ಮಾಡ್ತಿದೆ. ಅದ್ರಲ್ಲೂ, ಅತಿ ವೇಗವಾಗಿ 200 ಸಿನಿಮಾ ಮಾಡಿದ ದಾಖಲೆ ಸ್ಯಾಂಡಲ್ ವುಡ್ ನಿರ್ಮಿಸಿದೆ. ಅಷ್ಟಕ್ಕೂ, ಈ ವಾರ ಬರ್ತಿರುವ ಆ ಹತ್ತಕ್ಕೂ ಹೆಚ್ಚು ಚಿತ್ರಗಳು ಯಾವುದು.? ಮುಂದೆ ಓದಿ.....

  ವಿಜಯ ರಾಘವೇಂದ್ರ ಕಿಸ್ಮತ್

  ನಟ ವಿಜಯರಾಘವೇಂದ್ರ ಚೊಚ್ಚಲ ಭಾರಿಗೆ ನಿರ್ದೇಶನದ 'ಕಿಸ್ಮತ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಾಯಕಿಯಾಗಿ ಸಂಗೀತ ಭಟ್ ಅಭಿನಯಿಸಿದ್ದಾರೆ. ನಂದಗೋಪಾಲ್, ದಿಲೀಪ್‍ ರಾಜ್, ನವೀನ್‍ಕೃಷ್ಣ, ಸಾಯಿಕುಮಾರ್, ಸುಂದರರಾಜ್, ಚಿಕ್ಕಣ್ಣ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ರಾಜೇಶ್ ಮುರುಗೇಶನ್ ಅವರ ಸಂಗೀತ ನಿರ್ದೇಶನವಿದೆ.

  'ತಾರಕಾಸುರ'

  'ರಥಾವರ' ಎಂಬ ಯಶಸ್ವಿ ಚಿತ್ರ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ 'ತಾರಾಕಾಸುರ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಧರ್ಮವಿಶ್ ಸಂಗೀತವಿದೆ. ವೈಭವ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಮಾನ್ವಿತ ಹರೀಶ್. ಹಾಲಿವುಡ್‍ನ ನಟ ಡ್ಯಾನಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಾಧುಕೋಕಿಲ, ಜೈಜಗದೀಶ್, ಎಂ.ಕೆ.ಮಠ, ಕರಿಸುಬ್ಬು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  ಈ ವಾರ ತೆರೆಗೆ 'ಲೂಟಿ'

  ನಿರಂಜನ್.ಎನ್.ಎಂ ನಿರ್ಮಿಸಿರುವ 'ಲೂಟಿ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಗಿರೀಶ್ ಕಂಪ್ಲಾಪುರ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಧರ್ಮವಿಶ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಇಶಾ ಕೊಪ್ಪಿಕರ್, ಧ್ರುವ, ಶ್ವೇತ ಪಂಡಿತ್, ದಿಲೀಪ್‍ರಾಜ್, ದೀಪಿಕಾದಾಸ್, ಸಾಧುಕೋಕಿಲ, ರೋಬೋ ಗಣೇಶ್, ನವೀನ್ ಹಾಸನ್, ವೈಭವಿ, ಆಂಡ್ರಿಯ ಡಿಸೋಜ(ದುಬೈ), ಬಿ.ಜಯಶ್ರೀ, ಮೋಹನ್ ಜುನೇಜ, ಧರ್ಮ, ಮುಂತಾದವರಿದ್ದಾರೆ.

  'ನೀವು ಕರೆಮಾಡಿದ ಚಂದಾದಾರರು'

  'ನೀವು ಕರೆ ಮಾಡಿದ ಚಂದಾದಾರರು' ಚಿತ್ರ ಈ ವಾರ ಬಿಡುಗಡೆ ಆಗುತ್ತಿದೆ. ಉತ್ತರ ಕರ್ನಾಟಕದಲ್ಲಿ ನಡೆದಂತ ನೈಜ ಘಟನೆಯನ್ನು ಆಧರಿಸಿ ಸಿ ಮೋನಿಶ್ ಅವರು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಕುತೂಹಲ ಜೊತೆಗೆ ಒಂದು ಸಾಮಾಜಿಕ ಸಂದೇಶ ಸಹ ಇದೆ. ಮೊಬೈಲ್ ಕ್ರಾಂತಿ ಆದ ಮೇಲೆ ಅದರಿಂದ ಆಗಿರುವ ಪರಿಣಾಮ ಮತ್ತು ದುಷ್ಪರಿಣಾಮ ಸಹ ಹೇಳಲಾಗಿದೆ. ದಿಲೀಪ್ ರಾಜ್, ಸಂತೋಷ್ ರೆಡ್ಡಿ, ಆದರ್ಶ್, ಶರತ್, ಶಿಲ್ಪಾ ಮಂಜುನಾಥ್, ಐಶ್ವರ್ಯ ರಂಗರಾಜನ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

  ಸಸ್ಪೆನ್ಸ್ 'ಕರ್ಷಣಂ'

  ಸಸ್ಪೆನ್ಸ್ ಮರ್ಡರ್ ಮಿಸ್ಟರಿ ಸಿನಿಮಾ 'ಕರ್ಷಣಂ' ಇದೇ ವಾರ ತೆರೆಗೆ ಬರ್ತಿದೆ. ಧನಂಜಯ್ ಅತ್ರೆ, ಅನುಷ ರೈ, ಶ್ರೀನಿವಾಸಮೂರ್ತಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಈ ಚಿತ್ರಕ್ಕೆ ಶರವಣ ಆಕ್ಷನ್ ಕಟ್ ಹೇಳಿದ್ದಾರೆ.

  'ವರ್ಣಮಯ' ಎಂಟ್ರಿ

  ಹಾರರ್ ಥ್ರಿಲ್ಲರ್ ಸಿನಿಮಾ ವರ್ಣಮಯ ಕೂಡ ಈ ವಾರವೇ ಚಿತ್ರಮಂದಿರಕ್ಮೆ ಪ್ರವೇಶವಾಗ್ತಿದೆ. ರಾಜ್, ಅಟ್ಟಾವರ ಆರಾಧ್ಯ, ಸುನೀತಾ ಶಕ್ತಿ, ಜಗದೀಶ್, ಸಯದ್ ಸದತ್ ಸೇರಿದಂತೆ ಹಲವರು ಅಭಿನಯಿಸಿರುವ ಈ ಚಿತ್ರವನ್ನ ವೆಂಶಿ ರವೀಂದ್ರ ನಿರ್ದೇಶನ ಮಾಡಿದ್ದಾರೆ.

  ಒಂದು ಬ್ರೇಕ್ ನ ನಂತರ

  ಟ್ರೈಲತರ್ ಮೂಲಕ ಭಾರಿ ಸದ್ದು ಮಾಡಿರುವ ಒಂದು ಬ್ರೇಕ್ ನ ನಂತರ ಸಿನಿಮಾ ಇದೇ ವಾರ ರಿಲೀಸ್ ಆಗ್ತಿದೆ. ಹಿತನ್ ಹಾಸನ್, ಅಮ್ಮಣ್ಣಿ, ಸೂರ್ಯ, ಕಿರಣ್, ಚೈತ್ರಾ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದು, ಅಭಿಲಾಶ್ ಗೌಡ ನಿರ್ದೇಶನ ಮಾಡಿದ್ದಾರೆ.

  ಆಪಲ್ ಕೇಕ್

  ವಿಜಯ್ ಶಂಕರ್, ಅರವಿಂದ್, ರಂಜಿತ್, ಕೃಷ್ಣ, ಶುಭ ರಕ್ಷಾ ಅಭಿನಯದ ಈ ಚಿತ್ರವನ್ನ ರಂಜಿತ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಅರವಿಂದ್ ಕುಮಾರ್ ನಿರ್ಮಾಣ ಮಾಡಿರುವ ಈ ಸಿನಿಮಾ, ಸ್ನೇಹಾ, ಪ್ರೀತಿ ಮತ್ತು ಮಾನವೀಯ ಮೌಲ್ಯದ ಕಥಾಹಂದರ ಹೊಂದಿದೆ.

  ಸೈಲೆಂಟ್ ಆಗಿದ್ದ ಚಿತ್ರಗಳು ಬರ್ತಿದೆ

  ಈ ಎಲ್ಲಾ ಚಿತ್ರಗಳ ಜೊತೆ ಮತ್ತಷ್ಟು ವಿಶೇಷವಾದ ಸಿನಿಮಾಗಳು ಗಾಂಧಿನಗರಕ್ಕೆ ಲಗ್ಗೆಯಿಡ್ತಿದೆ. ಫ್ರೆಂಡ್ಲಿ ಬೇಬಿ, ರಾಹೀ, ಕಿಂಗ್ ಆಫ್ ಬೀದರ್ ಎಂಬ ಸಿನಿಮಾಗಳು ಬಿಡುಗಡೆಯಾಗ್ತಿದೆ. ಆದ್ರೆ, ಎಲ್ಲಾ ಚಿತ್ರಗಳಿಗೂ ಥಿಯೇಟರ್ ಸಿಕ್ಕಿದ್ಯಾ ಎಂಬ ಕುತೂಹಲ ಕಾಡುತ್ತಿದೆ.

  200 ಗಡಿದಾಟಿದ ಕನ್ನಡ ಚಿತ್ರರಂಗ

  ಕನ್ನಡ ಚಿತ್ರರಂಗ ಈ ವರ್ಷ 200 ಚಿತ್ರಗಳ ಗಡಿ ದಾಟಲಿದೆ. 84 ವರ್ಷಗಳ ಇತಿಹಾಸದಲ್ಲಿ 200 ಸಿನಿಮಾಗಳು ಒಂದೇ ವರ್ಷ ರಿಲೀಸ್ ಆಗಿರುವುದು ಇದೇ ಮೊದಲು. 2015ರಲ್ಲಿ 135 ಚಿತ್ರಗಳು, 2016ರಲ್ಲಿ 173, 2017ರಲ್ಲಿ 180 ಸಿನಿಮಾಗಳು ಬಿಡುಗಡೆಯಾಗಿದ್ದವು. ಈ ಬಾರಿ ನವೆಂಬರ್ 23ಕ್ಕೆ ಕನ್ನಡ ಚಿತ್ರಗಳ ಸಂಖ್ಯೆ 200ರ ಗಡಿ ದಾಟಲಿದೆ. ಕಳೆದ ವಾರದ ನಂತರ ಒಟ್ಟು ಚಿತ್ರಗಳ ಬಿಡುಗಡೆ ಸಂಖ್ಯೆ 194ರಲ್ಲಿತ್ತು. ಈ ವಾರ 10 ಸಿನಿಮಾಗಳು ರಿಲೀಸ್ ಆಗುವುದರೊಂದಿಗೆ ಕನ್ನಡ ಚಿತ್ರಗಳ ಸಂಖ್ಯೆ 200ರ ಗಡಿ ದಾಟಲಿದೆ.

  English summary
  Here’s all you need to know about the 10+ Kannada movies releasing this week. While We deliver the preview about these movies, You select the film, which suits you the best to watch over the weekend.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more