»   »  ಸಂಪೂರ್ಣ ಹಾರರ್ ಚಿತ್ರ ನಾಗವಲ್ಲಿ ಬರುತ್ತಿದ್ದಾಳೆ

ಸಂಪೂರ್ಣ ಹಾರರ್ ಚಿತ್ರ ನಾಗವಲ್ಲಿ ಬರುತ್ತಿದ್ದಾಳೆ

Subscribe to Filmibeat Kannada
ಅರೆಬರೆ ಹಾರರ್ ದೃಶ್ಯಗಳುಳ್ಳ ಕನ್ನಡ ಚಿತ್ರಗಳು ಬಹಳಷ್ಟು ಬಂದಿವೆ. ಉದಾಹರಣೆಗೆ ಹೇಳಬೇಕೆಂದರೆ 'ನಾ ನಿನ್ನ ಬಿಡಲಾರೆ'. ಆದರೆ ಸಂಪೂರ್ಣ ಕನ್ನಡ ಹಾರರ್ ಚಿತ್ರ ಕನ್ನಡದಲ್ಲಿ ಬಂದಿಲ್ಲ. 'ನಾಗವಲ್ಲಿ' ಹೆಸರಿನ ಸಂಪೂರ್ಣ ಹಾರರ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಚಿತ್ರದ ಆರಂಭದಿಂದ ಕೊನೆಯ ತನಕ ಸ್ಮಶಾನವೇ ಕೇಂದ್ರಬಿಂದು.ನಾಗವಲ್ಲಿ ಚಿತ್ರಕ್ಕೆ 'ಮಾರಿ ಕಣ್ಣು ಹೋರಿ ಮ್ಯಾಲೆ'ನಿರ್ದೇಶಿಸಿದ್ದ ಕುಮಾರ್ ಆಕ್ಷನ್, ಕಟ್ ಹೇಳಿದ್ದಾರೆ. ಮೈನವಿರೇಳಿಸುವ, ಎದೆ ನಡುಗಿಸುವ ದೃಶ್ಯಗಳು ನಾಗವಲ್ಲಿ ಚಿತ್ರದಲ್ಲಿ ಇರುವ ಕಾರಣ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ.

ಸುಮಾರು ಹಾರರ್ ಚಿತ್ರಗಳನ್ನು ವೀಕ್ಷಿಸಿದ ಬಳಿಕ ಕುಮಾರ್. ನಾಗವಲ್ಲಿಯನ್ನು ಮಾಡಲು 60 ದಿನಗಳ ಕಾಲ ಬೆವರರಿಸಿದ್ದಾರಂತೆ. ಮಿನುಗು ತಾರೆ ಕಲ್ಪನಾ ಅವರ ಕ್ಲಿಪ್ಸ್ ನ್ನು ಚಿತ್ರದಲ್ಲಿ ಬಳಕೆ ಮಾಡಿಕೊಂಡಿದ್ದಾರೆ. ಅದು ಹೇಗೆ ಎಂದರೆ, ಚಿತ್ರ ನೋಡಿ ಎನ್ನುತ್ತಾರೆ ಕುಮಾರ್. ನಾಗವಲ್ಲಿಯಲ್ಲಿನ ಐದು ಸನ್ನಿವೇಶಗಳು ಉಸಿರು ಬಿಗಿಹಿಡಿದು ನೋಡುವಂತೆ ಮಾಡುತ್ತವೆ ಎನ್ನುತ್ತಾರೆ ನಿರ್ದೇಶಕ.

ಹೈದಾರಾಬಾದ್ ನ ಮಧುಶಾಲಿನಿ ಚಿತ್ರದ ನಾಯಕಿ. ಈಕೆ ಈಗಾಗಲೇ ಮೂರು ತೆಲುಗು ಹಾಗೂ ಎರಡು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ನಾಗವಲ್ಲಿ ಆಕೆಯ ಮೊದಲ ಕನ್ನಡ ಚಿತ್ರ. ಕೂಚಿಪೂಡಿ ನೃತ್ಯಗಾರ್ತಿಯೂ ಆದ ಮಧುಶಾಲಿನಿ ಚಿತ್ರದಲ್ಲಿನ ಉದ್ದುದ್ದ ಸಂಭಾಷಣೆಗಳನ್ನು ಹೇಳಿ ಖುಷಿ ಪಟ್ಟಿದ್ದಾರಂತೆ. ಚಿತ್ರದ ನಾಯಕ ವೇಣು. ಸಾಹಸ ಸಂಯೋಜಿಸಿರುವ ಥ್ರಿಲ್ಲರ್ ಮಂಜು ಅತಿಥಿ ಪಾತ್ರದಲ್ಲೂ ಕಾಣಿಸಲಿದ್ದಾರೆ. ಸಂಗೀತ ಲಯೇಂದ್ರ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada