»   »  ನಿಷೇಧಾಜ್ಞೆ ಚಿತ್ರ ವೀರಯೋಧರಿಗೆ ಅರ್ಪಣೆ

ನಿಷೇಧಾಜ್ಞೆ ಚಿತ್ರ ವೀರಯೋಧರಿಗೆ ಅರ್ಪಣೆ

Posted By:
Subscribe to Filmibeat Kannada
sandeep unnikrishnan
ಮುಂಬೈನಲ್ಲಿ ನಡೆದ ಉಗ್ರರ ಅಟ್ಟಹಾಸ ನೆನೆಸಿಕೊಂಡರೆ ಒಂದು ಕ್ಷಣ ಮೈಜುಂ ಎನಿಸುತ್ತದೆ. ಎಷ್ಟೋ ಅಮಾಯಕರ ಪ್ರಾಣ ತೆಗೆದು ಅಟ್ಟಹಾಸದಿಂದ ಬೀಗುತ್ತಿದ್ದ ಉಗ್ರರ ಪಡೆಯೊಂದಿಗೆ ಹೋರಾಡಿ ಕೊನೆಗೆ ದೇಶಕ್ಕಾಗಿ ತಮ್ಮನೇ ಬಲಿದಾನ ಮಾಡಿಕೊಂಡ ವೀರಯೋಧರಾದ ಸಂದೀಪ್‌ಉನ್ನಿಕೃಷ್ಣನ್, ಅಶೋಕ್‌ ಕಾಮ್ಟೆ, ಹೇಮಂತ್‌ ಕರ್ಕರೆ ಹಾಗೂ ವಿಜಯ್‌ಸಾಲಸ್ಕರ್ ಅವರನ್ನು ಮರೆಯಲು ಹೇಗೆ ಸಾಧ್ಯ. ಇಂಥ ವೀರಪುರುಷರಿಗೆ ಏನು ನೀಡಿದರೂ ಅವರ ತ್ಯಾಗಕ್ಕೆ ಸರಿಸಾಟಿಯಾಗಲಾರದು. ದೇಶ ಕಾಯ್ದ ವೀರಯೋಧನೇ ನಿನಗಿದು ನಮ್ಮ ನಮನ ಎಂದಷ್ಟೇ ಹೇಳಬೇಕು.

ಭರತ್‌ಬಾಬು ಪ್ರೊಡಕ್ಷನ್ಸ್ ಅರ್ಪಿಸುವ ಶ್ರೀ ಅಂಜನಾಚಲ ಸೂಪರ್‌ಹಿಟ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ನಿಷೇಧಾಜ್ಞೆ ಚಿತ್ರವನ್ನು ವೀರಯೋಧರ ಅಡಿದಾವರೆಗಳಿಗೆ ಅರ್ಪಿಸಿರುವುದಾಗಿ ನಿರ್ಮಾಪಕರಾದ ಎಸ್.ವಿ.ನಾರಾಯಣಸ್ವಾಮಿ ಹಾಗೂ ಸೂರ್ಯಕಾಂತ್ ಜಾದವ್ ತಿಳಿಸಿದ್ದಾರೆ.

ಚಿತ್ರೀಕರಣ ಒಳಗೊಂಡಂತೆ ನಂತರದ ಚಟುವಟಿಕೆಗಳು ಪೂರ್ಣವಾಗಿರುವ ಈ ಚಿತ್ರ ಇದೇ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬಸವರಾಜಪ್ಪ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ನಿರ್ದೇಶಕ ಪದ್ಮನಾಭ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ರಮೇಶ್ ಛಾಯಾಗ್ರಹಣ, ಗಿರಿಧರ್ ಸಂಗೀತ, ಯತೀಶ್‌ಕುಮಾರ್ ಸಂಕಲನ, ಅರವಿಂದ್ ನೃತ್ಯ, ಕೃಷ್ಣಾಚಾರ್ ಕಲೆ, ಲಕ್ಷ್ಮೀಕುಮಾರ್, ಮೂರ್ತಿ ಸಹನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಆದಿಲೋಕೇಶ್, ಭರತ್‌ಬಾಬು, ಪ್ರಿಯಾಂಕ, ಪದ್ಮಜಾರಾವ್, ಶಂಕರ್‌ಅಶ್ವತ್, ನೀನಾಸಂ ಅಶ್ವತ್, ಸುರೇಶ್‌ಮಂಗಳೂರು, ಸ್ನೇಹಜಗದೀಶ್, ಹಾಗೂ ಧಮ್‌ಕುಮಾರ್ ಇದ್ದಾರೆ. ಮಾಜಿ ಪೊಲೀಸ್ ಅಧಿಕಾರಿ ಅಬ್ದುಲ್‌ಅಜೀಮ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
(ದಟ್ಸ್ ಕನ್ನಡ ಸಿನಿಸುದ್ದಿ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada