»   »  ಕನ್ನಡದಲ್ಲಿ ಪ್ರಕಾಶ್ ರೈಗೆ ಏಳು ಅಂಕೆ ಸಂಭಾವನೆ!

ಕನ್ನಡದಲ್ಲಿ ಪ್ರಕಾಶ್ ರೈಗೆ ಏಳು ಅಂಕೆ ಸಂಭಾವನೆ!

Subscribe to Filmibeat Kannada

'ಧೂಳ್' ಚಿತ್ರದಲ್ಲಿ ಪ್ರಕಾಶ್ ರೈ ಅವರದು ತಂಗಿಯೇ ತನ್ನ ಸರ್ವಸ್ವವೆಂದು ತಿಳಿದ ಅಣ್ಣನ ಪಾತ್ರ. ಪ್ರೇಯಸಿಯೇ ತನಗೆಲ್ಲಾ ಎನ್ನುವ ಪ್ರಿಯಕರನ ಪಾತ್ರದಲ್ಲಿ ಲೂಸ್ ಮಾದ ಅಲಿಯಾಸ್ ಯೋಗೀಶ್ ನಟಿಸಿದ್ದಾರೆ. ಈ ಇಬ್ಬರು ಹಠ ಸ್ವಭಾವದವರ ನಡುವೆ ನಲುಗುವ ತಂಗಿಯಾಗಿ ಐಂದ್ರಿತಾ ರೇ ಕಾಣಿಸುತ್ತಾರೆ. ಈ ಚಿತ್ರದ ನಟನೆಗಾಗಿ ರೈ ಸಂಭಾವನೆ ಏಳು ಅಂಕೆಯಲ್ಲಿದೆ!

'ಧೂಳ್' ತಮ್ಮ ಪಾತ್ರಕ್ಕೆ ಪ್ರಕಾಶ್ ರೈ ರು.40 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನುತ್ತವೆ ಮೂಲಗಳು. ಧೂಳ್ ಚಿತ್ರ ತಮಿಳಿನ 'ತಿರುವಿಲೆಯಾದಲ್ ಆರಂಭಂ' ರೀಮೇಕ್ ಎಂಬುದು ಗೊತ್ತೇ ಇದೆ. ತಮಿಳು ಚಿತ್ರದಲ್ಲಿ ಧನುಷ್ ಮತ್ತು ಶ್ರೇಯಾ ಸರನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಧೂಳ್ ಚಿತ್ರ ಈಗಾಗಗಲೇ ಪ್ರಥಮ ಹಂತದ ಚಿತ್ರೀಕರಣವನ್ನು ಮುಗಿಸಿಕೊಂಡಿದೆ.

ಧೂಳ್ ಚಿತ್ರ ಸೆಪ್ಟೆಂಬರ್ 5ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭಿಸಿದೆ. ಏತನ್ಮಧ್ಯೆ ರವಿಚಂದ್ರನ್ ಅವರ 'ಮಂಜಿನ ಹನಿ'ಯಲ್ಲಿ ಪ್ರಕಾಶ್ ರೈ ತಲ್ಲೀನರಾಗಿದ್ದಾರೆ. 'ಕಾಂಚಿವರಂ' ಚಿತ್ರದಲ್ಲಿನ ಅಮೋಘ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ ಸಿಕ್ಕಿಸಿಕೊಂಡಿರುವ ರೈ ಇದೀಗ ಕನ್ನಡ ಚಿತ್ರರಂಗದಲ್ಲೂ ಬಿಜಿ ಬಿಜಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada