»   »  ಕನ್ನಡ ನಟರಿಗೆ ಸ್ಯಾಟಲೈಟ್ ಹಕ್ಕೇ ಸಂಭಾವನೆ!

ಕನ್ನಡ ನಟರಿಗೆ ಸ್ಯಾಟಲೈಟ್ ಹಕ್ಕೇ ಸಂಭಾವನೆ!

By: * ಜಯಂತಿ
Subscribe to Filmibeat Kannada

ಅವತ್ತು ತಮ್ಮ ಮನೆಯಲ್ಲಿ ಪುರುಸೊತ್ತಾಗಿ ಮಾತಾಡುತ್ತಾ ಜಗ್ಗೇಶ್ ತಮ್ಮ ಸಿನಿಮಾದ ಟೀವಿ ರೈಟ್ಸ್ ಎಷ್ಟು ಅಂತ ಗೊತ್ತು. ಅದೇ ತಮ್ಮ ಸಂಭಾವನೆ ಅಂತ ಹೇಳಿ ನಕ್ಕಿದ್ದರು. ನೆನ್ನೆ ಮೊನ್ನೆ ಬಂದವರೆಲ್ಲಾ ಲಕ್ಷ ಲಕ್ಷ ಅಂತ ಮಾತಾಡುತ್ತಿದ್ದಾರಲ್ಲ ಎಂಬುದಕ್ಕೆ ಅವರಲ್ಲಿ ಕೋಪವೂ ಇತ್ತು.

ಈಗ ಅವರದ್ದೇ ಧಾಟಿಯಲ್ಲಿ ಎಲ್ಲರೂ ಮಾತಾಡತೊಡಗಿದ್ದಾರೆ. ಬ್ರೋಕರ್‌ಗಳು ಯಾವ್ಯಾವ ನಾಯಕರ ಚಿತ್ರಗಳಿಗೆ ಎಷ್ಟೆಷ್ಟು ಸ್ಯಾಟಲೈಟ್ ಹಕ್ಕಿನ ಬೆಲೆ ಎಂಬುದನ್ನು ಚಾರ್ಟ್ ನೋಡಿಕೊಂಡು ಹೇಳಲು ಶುರುವಿಟ್ಟಿದ್ದಾರೆ. ಪುನೀತ್ ಸಿನಿಮಾಗೆ ಕೋಟಿಗೆ ಮೋಸವಿಲ್ಲ.

ಗಣೇಶ್ ಚಿತ್ರಗಳಿಗೆ ತಾತ್ಕಾಲಿಕವಾಗಿ ಬೇಡಿಕೆ ಇಲ್ಲದಿದ್ದರೂ ಈ ಹಿಂದೆ ಭಾರೀ ಬೆಲೆ ಸಿಕ್ಕಿರುವ ಉದಾಹರಣೆ ಇದೆ. ಸುದೀಪ್, ದರ್ಶನ್ ಚಿತ್ರಗಳಿಗೆ ಎಪ್ಪತ್ತು, ಎಂಬತ್ತು ಲಕ್ಷದ ವ್ಯಾಪಾರಕ್ಕೆ ಮೋಸವಿಲ್ಲ. ಶಿವರಾಜ್‌ಕುಮಾರ್ ಪರಿಸ್ಥಿತಿ ಮಾತ್ರ ಈ ವಿಷಯದಲ್ಲೂ ಚಿಂತಾಜನಕ. ಹಾಗಿದ್ದೂ ಅವರೂ ಸೇರಿದಂತೆ ಯಾವ ನಾಯಕರೂ ಸಂಭಾವನೆ ಕಡಿಮೆ ಮಾಡಿಕೊಳ್ಳಲು ಸಿದ್ಧರಿಲ್ಲ.

ಗಣೇಶ್ ನನ್ನ ಸಿನಿಮಾ ಸ್ಯಾಟಲೈಟ್ ಹಕ್ಕು ಒಂದೂಕಾಲು ಕೋಟಿ. ಅದಕ್ಕಿಂತ ಒಂದು ಪೈಸೆ ಕಡಿಮೆ ಸಂಭಾವನೆಯೂ ಆಗದು ಎಂದು ಪಟ್ಟುಹಿಡಿದಿದ್ದಾರೆ. ಅಷ್ಟೇ ಏಕೆ, ಲೂಸ್ ಮಾದ ಖ್ಯಾತಿಯ ಯೋಗೀಶ್ ಐವತ್ತು ಲಕ್ಷ ಮಡಗಿ. ಆಮೇಲೆ ಮಾತಾಡೋಣ ಅನ್ನತೊಡಗಿದ್ದಾರೆ.

ನಿರ್ಮಾಪಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೂ ಅದಿನ್ನೂ ಅಂಗೀಕಾರವಾಗಿಲ್ಲದ ಕಾರಣ ಕೆ.ಸಿ.ಎನ್.ಚಂದ್ರಶೇಖರ್ ನಾಯಕರ ಸಂಭಾವನೆ ಕಡಿಮೆ ಮಾಡಿಸುವ ಯತ್ನವನ್ನು ಮುಂದುವರಿಸಿದ್ದಾರೆ. ಅಂದಹಾಗೆ, ಜಗ್ಗೇಶ್ ಚಿತ್ರಗಳ ಸ್ಯಾಟಲೈಟ್ ಹಕ್ಕಿಗೆ ಈಗಲೂ ಒಳ್ಳೆ ಬೆಲೆಯಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada