»   » ಇಂದು ಗಣೇಶ್ - ಅಮೂಲ್ಯ ಪಾಲಿಗೆ ಮರೆಯಲಾಗದ ದಿನ

ಇಂದು ಗಣೇಶ್ - ಅಮೂಲ್ಯ ಪಾಲಿಗೆ ಮರೆಯಲಾಗದ ದಿನ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ ಅವರಿಗೆ ಇಂದು ವಿಶೇಷವಾದ ದಿನ. ಕಾರಣ ಇಂದು ಅವರಿಬ್ಬರ ನಟನೆಯ 'ಚೆಲುವಿನ ಚಿತ್ತಾರ' ಸಿನಿಮಾ ಬಿಡುಗಡೆಯಾದ ದಿನ. 'ಚೆಲುವಿನ ಚಿತ್ತಾರ' ಸಿನಿಮಾದ ಯಶಸ್ಸಿನಿಂದಲೇ ಈ ಜೋಡಿ ಸ್ಯಾಂಡಲ್ ವುಡ್ ನ 'ಗೋಲ್ಡನ್ ಪೇರ್' ಎಂದು ಕರೆಯಿಸಿಕೊಂಡರು.

ಇಂದಿಗೆ ಸರಿಯಾಗಿ ಹತ್ತು ವರ್ಷಗಳ ಹಿಂದೆ, ಅಂದ್ರೆ...22 ಜೂನ್ 2007ರಲ್ಲಿ 'ಚೆಲುವಿನ ಚಿತ್ತಾರ' ಸಿನಿಮಾ ಬಿಡುಡೆಯಾಗಿತ್ತು. ಬಾಲನಟಿಯಾಗಿದ್ದ ಅಮೂಲ್ಯ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟಿಯಾದರು. ಸೋ, ನಟಿ ಅಮೂಲ್ಯ ಈಗ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಹತ್ತು ವರ್ಷಗಳನ್ನು ಕಳೆದಿದ್ದಾರೆ.

10 years for 'Cheluvina Chittara' Movie

ತಮ್ಮ ಈ ಸಂತಸವನ್ನು ಟ್ವಿಟ್ಟರ್ ನ ಮೂಲಕ ಅಮೂಲ್ಯ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. 'ಚೆಲುವಿನ ಚಿತ್ತಾರ' ಚಿತ್ರಕ್ಕೆ 10 ವರ್ಷಗಳಾಗಿದೆ. ಇದೇ ಸಿನಿಮಾದಿಂದ ಅಮೂಲ್ಯ 'ಐಸು' ಆಗಿ ಬದಲಾದಳು ಅಂತ ಹೇಳಿದ್ದಾರೆ. ಅಂದಹಾಗೆ, 2007ರಲ್ಲಿ ಬಂದ 'ಚೆಲುವಿನ ಚಿತ್ತಾರ' ಸಿನಿಮಾವನ್ನು ಕಲಾ ಸಾಮ್ರಾಟ್ ಎಸ್.ನಾರಾಯಣ್ ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದರು.

English summary
Ganesh and Amulya Starrer 'Cheluvina Chittara' Movie Completes 10 years.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada