»   »  ಉಮಾಶ್ರೀ, ಪ್ರಕಾಶ್ ರೈಗೆ ಸಿಎಂ ಅಭಿನಂದನೆ

ಉಮಾಶ್ರೀ, ಪ್ರಕಾಶ್ ರೈಗೆ ಸಿಎಂ ಅಭಿನಂದನೆ

Subscribe to Filmibeat Kannada

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟಿ ಹಾಗೂ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿರುವ ನಟಿ ಉಮಾಶ್ರೀ ಹಾಗೂ ಪ್ರಕಾಶ್ ರೈ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಭಿನಂದಿಸಿದ್ದಾರೆ.

"ಕನ್ನಡದ 'ಗುಲಾಬಿ ಟಾಕೀಸ್' ಚಿತ್ರದ ಅಭಿನಯಕ್ಕಾಗಿ ಉಮಾಶ್ರೀ ಅವರಿಗೂ ತಮಿಳಿನ 'ಕಾಂಜೀವರಂ 'ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರಕಾಶ್ ರೈ ಅವರಿಗೂ ರಾಷ್ಟ್ರೀಯ ಗೌರವ ಲಭಿಸಿದ್ದು, ಈ ಇಬ್ಬರು ಕನ್ನಡಿಗರಿಗೂ ಕರ್ನಾಟಕದ ಸಮಸ್ತ ಜನರ ಪರವಾಗಿ ಹೃದಯಪೂರ್ವಕ ಶುಭಾಶಯಗಳು ಸಲ್ಲುತ್ತವೆ" ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಪ್ರಾದೇಶಿಕ ನಿರ್ದೇಶಕ ಶ್ರೀ ಗಿರೀಶ್ ಕಾಸರವಳ್ಳಿ ಅವರಿಗೂ ಕನ್ನಡದ ಸಮಸ್ತ ಜನರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ ಅಬಕಾರಿ, ಐಟಿಬಿಟಿ, ವಾರ್ತಾ ಹಾಗೂ ಬೆಂಗಳೂರು ಜಲ ಮಂಡಳಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಅಭಿನಂದಿಸಿದ್ದಾರೆ. ಉಮಾಶ್ರೀ ಮತ್ತು ಪ್ರಕಾಶ್ ರೈ ಅವರಿಗೆ ಮೇಲ್ಮನೆಯಲ್ಲೂ ಅಭಿನಂದನೆಗಳ ಸುರಿಮಳೆಯಾಯಿತು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada