»   » 2014 ರಲ್ಲಿ ಸೆಂಚುರಿ ದಾಖಲಿಸಿದ ಚಿತ್ರಗಳು

2014 ರಲ್ಲಿ ಸೆಂಚುರಿ ದಾಖಲಿಸಿದ ಚಿತ್ರಗಳು

Posted By:
Subscribe to Filmibeat Kannada

2014 ಕ್ಕೆ ಗುಡ್ ಬೈ ಹೇಳುವ ಕಾಲ ಸನೀಹದಲ್ಲಿದೆ. 2014ರಲ್ಲಿ ಗಾಂಧಿನಗರ ಅನೇಕ ಏಳು-ಬೀಳುಗಳನ್ನು ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಹೆಚ್ಚು ಸಿನಿಮಾಗಳು ರಿಲೀಸ್ ಆದರೂ ಸಕ್ಸಸ್ ಸಂಖ್ಯೆ ತೀರಾ ಕಮ್ಮಿ.

ಸೆಂಚುರಿ ಸಂಭ್ರಮ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಗಾಂಧಿನಗರದಲ್ಲಿ ಈ ವರ್ಷ ಒಟ್ಟು ಆರು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಗಟ್ಟಿಯಾಗಿ ನೆಲೆಯೂರಿ ಸೆಂಚುರಿ ಬಾರಿಸಿವೆ.

ಇನ್ನೂ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದರೂ, ಚಿರಂಜೀವಿ ಸರ್ಜಾ ಅಭಿನಯದ 'ಚಂದ್ರಲೇಖ', ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿರುವ 'ದೃಶ್ಯ', ಅರ್ಜನ್ ಸರ್ಜಾ ನಟಿಸಿ, ನಿರ್ದೇಶಿಸಿದ 'ಅಭಿಮನ್ಯು', ಪ್ರಕಾಶ್ ರಾಜ್ ಮಿಂಚಿದ 'ಒಗ್ಗರಣೆ' ಸಿನಿಮಾ 'ಶತಕ' ವಂಚಿತವಾಯ್ತು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಹಾಗಾದ್ರೆ, ಈ ವರ್ಷ 'ಶತಕ'ದ ಸಂಭ್ರಮ ಆಚರಿಸಿದ ಚಿತ್ರಗಳಾವುವು? ಅದನ್ನ ತಿಳಿದುಕೊಳ್ಳುವುದಕ್ಕೆ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

'ಉಗ್ರಂ ವೀರಂ'

2014 ರಲ್ಲಿ ಮೊದಲ ಶತಕ ಬಾರಿಸಿ ದಾಖಲೆ ನಿರ್ಮಿಸಿದ ಚಿತ್ರ 'ಉಗ್ರಂ'. ಪುನೀತ್ ರಾಜ್ ಕುಮಾರ್ ಅಭಿನಯದ 'ನಿನ್ನಿಂದಲೇ', ಉಪೇಂದ್ರ ನಟಿಸಿದ 'ಬ್ರಹ್ಮ'ದಂತಹ ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬಂದರೂ, ಹೇಳಹೆಸರಿಲ್ಲದಂತೆ ಮಾಯವಾದಾಗ, ಇಡೀ ಗಾಂಧಿನಗರದಲ್ಲಿ ಸದ್ದು ಮಾಡಿ, ಈ ವರ್ಷ ಹಿಟ್ ಚಿತ್ರಗಳ ಖಾತೆ ತೆರೆದದ್ದು ಶ್ರೀಮುರುಳಿ ಅಭಿನಯದ 'ಉಗ್ರಂ' ಸಿನಿಮಾ. ಪ್ರಶಾಂತ್ ನೀಲ್ ನಿರ್ದೇಶನದ ಔಟ್ ಅಂಡ್ ಔಟ್ ಆಕ್ಷನ್ ಎಂಟರ್ಟೇನರ್ ಸಿನಿಮಾ 'ಉಗ್ರಂ' ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರನ್ನ ಸೆಳೆಯುವಲ್ಲಿ ಯಶಸ್ವಿಯಾಯ್ತು. [ಉಗ್ರಂ ಚಿತ್ರ ವಿಮರ್ಶೆ: ಚೊಚ್ಚಲ ನಿರ್ದೇಶಕನಿಗೊಂದು ಸಲಾಂ]

'ಮಾಣಿಕ್ಯ' 100 ಡೇಸ್

ರೀಮೇಕ್ ಚಿತ್ರವಾದರೂ ಕಿಚ್ಚ ಸುದೀಪ್ ಅಭಿನಯದ 'ಮಾಣಿಕ್ಯ' ಚಿತ್ರ ಈ ವರ್ಷ ಸೆಂಚುರಿ ಬಾರಿಸಿತು. ಕಿಚ್ಚನ ಮ್ಯಾಜಿಕ್, ನಲ್ಲ-ಮಲ್ಲನ ಜುಗುಲ್ಬಂದಿ ಪ್ರೇಕ್ಷಕ ಮಹಾಪ್ರಭುಗೆ ಇಷ್ಟವಾದ ಕಾರಣ ಸತತ 100 ದಿನಗಳು ಚಿತ್ರಮಂದಿರದಲ್ಲಿ ಗಟ್ಟಿಯಾಗಿ ನೆಲೆಯೂರಿತ್ತು 'ಮಾಣಿಕ್ಯ'. [ಚಿತ್ರ ವಿಮರ್ಶೆ: ಮನ ಗೆದ್ದ ಸುದೀಪ್ 'ಮಾಣಿಕ್ಯ']

'ಗಜಕೇಸರಿ'ಯ 'ಯಶ'ಸ್ಸು

ರಾಕಿಂಗ್ ಸ್ಟಾರ್ ಯಶ್ ಕೂಡ ಸೆಂಚುರಿ ಬಾರಿಸುವುದರಲ್ಲಿ ಹಿಂದೆ ಬೀಳಲಿಲ್ಲ. ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡಿದ್ದ 'ಗಜಕೇಸರಿ' ಬಿಡುಗಡೆಯಾದ್ಮೇಲೂ ಶತಕ ಪೂರೈಸಿ ಸಂಭ್ರಮಿಸಿತು. 'ರಾಜಾಹುಲಿ', 'ಗೂಗ್ಲಿ' ನಂತ್ರ 'ಗಜಕೇಸರಿ' ಮೂಲಕ ಮತ್ತೊಂದು 100 ಡೇಸ್ ಸಿನಿಮಾ ಕೊಟ್ಟ ಯಶ್, ತಾವು ನಿರ್ಮಾಪಕರ ಡಾರ್ಲಿಂಗ್ ಅನ್ನುವುದನ್ನ ಮತ್ತೊಮ್ಮೆ ಪ್ರೂವ್ ಮಾಡಿದರು. [ಚಿತ್ರ ವಿಮರ್ಶೆ: ರಾಕಿಂಗ್ ಸ್ಟಾರ್ ಯಶ್ 'ಗಜಕೇಸರಿ']

ಬಾಕ್ಸಾಫೀಸ್ ಗೆ ಶರಣ್ 'ಅಧ್ಯಕ್ಷ'

ತಮಿಳಿನ ರೀಮೇಕ್ ಆದರೂ ಗಾಂಧಿನಗರದ 'ಅಧ್ಯಕ್ಷ' ಶತಕ ಬಾರಿಸಿ ಬೀಗಿದ್ದು ಈ ವರ್ಷದ ಮತ್ತೊಂದು ದಾಖಲೆ. ಶರಣ್ ಅಭಿನಯ, ಕಚಗುಳಿ ಇಡುವ ಡೈಲಾಗ್ಸ್, ಮಸ್ತ್ ಮಸ್ತ್ ಹಾಡುಗಳಿದ್ದ 'ಅಧ್ಯಕ್ಷ' ಕಲೆಕ್ಷನ್ ನಲ್ಲೂ ಭಾರಿ ಸದ್ದು ಮಾಡಿತ್ತು. ['ಅಧ್ಯಕ್ಷ' ವಿಮರ್ಶೆ: ಕಡ್ಡಾಯವಾಗಿ ನಗುವವರಿಗೆ ಮಾತ್ರ]

'ಪವರ್'***

ಪುನೀತ್ ರಾಜ್ ಕುಮಾರ್ ಅಭಿನಯದ ''ಪವರ್***'' ಸಿನಿಮಾ ಇತ್ತೀಚೆಗಷ್ಟೇ ಅದ್ದೂರಿಯಾಗಿ ಶತಕ ಸಂಭ್ರಮವನ್ನು ಆಚರಿಸಿತು. ರೀಮೇಕ್ ಚಿತ್ರವಾದರೂ, ತಮ್ಮದೇ ಸ್ಟೈಲ್ ನಲ್ಲಿ ಪವರ್ ತೋರಿಸಿದ್ದ ಪುನೀತ್ ರಾಜ್ ಕುಮಾರ್, ತ್ರಿಷಾ ಗ್ಲಾಮರ್ ರಂಗು, ಸೂಪರ್ ಸಾಂಗ್ಸ್, ಕಾಮಿಡಿ ಪಂಚ್. ಇಷ್ಟೆಲ್ಲಾ ಇದ್ದಿದ್ದಕ್ಕೆ 'ಪವರ್ ***' ಸಿನಿಮಾ ಶತಕ ಬಾರಿಸುವುದಕ್ಕೆ ಸಾಧ್ಯವಾಯ್ತು. [ಚಿತ್ರ ವಿಮರ್ಶೆ: ಪುನೀತ್ 'ಪವರ್'ಫುಲ್ ಪರಮಾತ್ಮ]

'ಬಹದ್ದೂರ್'ಗೆ ಬಹುಪರಾಕ್

ಧೃವಾ ಸರ್ಜಾ ಮತ್ತು ರಾಧಿಕಾ ಪಂಡಿತ್ ಅಭಿನಯದ 'ಬಹದ್ದೂರ್' ಸಿನಿಮಾ ಕೂಡ ಈ ವರ್ಷ ಗೆಲುವಿನ ನಗೆ ಬೀರಿದೆ. ನೂರು ದಿನಗಳ ಸತತ ಪ್ರದರ್ಶನ ಕಂಡು ದೊಡ್ಡ ದೊಡ್ಡ ಸಿನಿಮಾಗಳಿಗೆ ಪೈಪೋಟಿ ನೀಡಿದ ಚಿತ್ರ 'ಬಹದ್ದೂರ್'. ಹಿಟ್ ಕಾಂಬಿನೇಷನ್, ಭರ್ಜರಿ ಆಕ್ಷನ್ ಮತ್ತು ಸುಮಧುರ ಸಂಗೀತ 'ಬಹದ್ದೂರ್'ಗೆ ಪ್ರೇಕ್ಷಕ ಮಹಾಪ್ರಭು ಬಹುಪರಾಕ್ ಹೇಳಿದರು. [ಬಹದ್ದೂರ್ ವಿಮರ್ಶೆ : ಅದ್ದೂರಿ, ಕಲರ್ ಫುಲ್ ಪ್ರೇಮ ಪಯಣ]

English summary
2014 saw a huge list of flop series in Sandalwood. Here is the list of 100 Days Cinemas of Sandalwood, which managed to entertain the audience.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada