»   » 10ನೇ ಬೆಂಗಳೂರು ಚಿತ್ರೋತ್ಸವ: 4ನೇ ದಿನದ ಹೈಲೈಟ್ಸ್

10ನೇ ಬೆಂಗಳೂರು ಚಿತ್ರೋತ್ಸವ: 4ನೇ ದಿನದ ಹೈಲೈಟ್ಸ್

Posted By:
Subscribe to Filmibeat Kannada

10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸಿನಿಮಾ ಪ್ರದರ್ಶನದ ಜೊತೆಗೆ ಕೆಲವು ವಿಶೇಷ ಕಾರ್ಯಕ್ರಮಗಳು ಗಮನ ಸೆಳೆಯಿತು.

ಹಳೆಯ ತಂತ್ರಜ್ಞಾನ ಮತ್ತು ಈಗಿನ ತಂತ್ರಜ್ಞಾನ, 'ಸಂಸ್ಕಾರ' ಚಿತ್ರದ ಮೇಕಿಂಗ್ ಮತ್ತು ಇಸ್ರೆಲ್ ನ 'ಕ್ವೈಟ್ ಹಾರ್ಟ್' ಚಿತ್ರದ ಅನುಭವ ಮತ್ತು ಕೆಲವು ಸಿನಿಮಾ ಬೆಳವಣಿಗೆಗಳ ಬಗ್ಗೆ ಸಂವಾದ, ಚರ್ಚೆ ನಡೆಸಲಾಯಿತು.

ನೂರು ವರ್ಷದ ಚಿತ್ರರಂಗದಲ್ಲಿ ಹಿಂದಿನ ತಂತ್ರಜ್ಞಾನ ಮತ್ತು ಮುಂದಿನ 100 ವರ್ಷ ತಂತ್ರಜ್ಙಾನ ಹೇಗಿರಬಹುದು ಎಂಬ ವಿಷ್ಯದ ಕುರಿತು ತಜ್ಞರಿಂದ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇದಿಕೆಯಲ್ಲಿ ಡಿಜಿಟಲ್ ಮ್ಯೂಸಿಕ್ ಸಂಸ್ಥಾಪಕ ಅರುಳ್ ಮೂರ್ತಿ, ಚಿತ್ರ ನಿರ್ದೇಶಕ ಎಸ್.ಕೃಷ್ಣ, ಬಿ.ಎಸ್ ಶ್ರೀನಿವಾಸ್ ಭಾಗವಹಿಸಿದ್ದರು.

10th bangalore international film festival day 4 highlights

ಇದಾದ ಬಳಿಕ ಕನ್ನಡದ ಸೂಪರ್ ಹಿಟ್ ಸಿನಿಮಾ 'ಸಂಸ್ಕಾರ' ಚಿತ್ರದಲ್ಲಿ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದ ಥಾಮಸ್ ಕ್ರೌನ್ ಉಪನ್ಯಾಸ ನೀಡಿದರು. 1970ರಲ್ಲಿ ತೆರೆಕಂಡಿದ್ದ 'ಸಂಸ್ಕಾರ' ಚಿತ್ರವನ್ನ ಪಟ್ಟಾಭಿರಾಮ ರೆಡ್ಡಿ ನಿರ್ದೇಶನ ಮಾಡಿದ್ದರು. ಈ ಚಿತ್ರದ ಅನುಭವ ಮತ್ತು ಸವಾಲುಗಳ ಬಗ್ಗೆ ಥಾಮಸ್ ಕ್ರೌನ್ ಚಿತ್ರಪ್ರೇಮಿಗಳೊಂದಿಗೆ ಹಂಚಿಕೊಂಡರು.

10th bangalore international film festival day 4 highlights

ಇನ್ನು ಇಸ್ರೇಲ್ ನ 'ಕ್ವೈಟ್ ಹಾರ್ಟ್' ಚಿತ್ರದ ಬಗ್ಗೆ ಮಾತನಾಡಿದ ಇಸ್ರೇಲ್ ನ ಕೌನ್ಸಿಲ್ ಜನರಲ್ ಶ್ರೀ ಡನಾ ಕುರ್ಷ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದರ ಬಗ್ಗೆ ಸಂತಸ ವ್ಯಕ್ತಪಡಿಸಿರು. ಜನರನ್ನು ಸಂಪರ್ಕಿಸಲು ಉತ್ತಮ ಮಾರ್ಗವೆಂದರೆ ಸಂಸ್ಕೃತಿ. ಇಂತಹ ಸಂಸ್ಕೃತಿಯನ್ನ ಬಿಂಬಿಸಲು ಚಲನಚಿತ್ರಗಳು ಅತ್ಯುತ್ತಮ ವೇದಿಕೆಯಾಗಿದೆ. 'ಕ್ವೈಟ್ ಹಾರ್ಟ್' ಚಲನಚಿತ್ರವು ಇಸ್ರೇಲ್ ನ ಸಂಪೂರ್ಣವಾಗಿ ತೋರಿಸಿದೆ. ಇಸ್ರೇಲ್ ಸಿನಿಮಾಗಳಿಗೆ ಇದು ಉತ್ತಮ ವೇದಿಕೆಯ ಎಂದು ಪ್ರಶಂಸಿದರು.

English summary
10th bangalore international film festival day 4 highlights. Guest Lecture By Eminent Cinematographer - Thomas Cowan - On Making of Samskara, which is in it’s 50th year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada