For Quick Alerts
  ALLOW NOTIFICATIONS  
  For Daily Alerts

  'ವಜ್ರ'ಮುನಿ ಬಗ್ಗೆ ಯಾರಿಗೂ ತಿಳಿಯದ ಸತ್ಯ ಸಂಗತಿ

  By Harshitha
  |

  ಖಳನಾಯಕನ ಪಾತ್ರಕ್ಕೆ ಬೇಕಾದ ವಜ್ರ ಕಂಠ, ಭೀಭತ್ಸ ಮುಖ, ಮನೆ ಮುರುಕ ಪಾತ್ರಗಳಿಂದಾಗಿ ಜೀವಿತಾವಧಿಯ ಕೊನೆ ಕ್ಷಣದವರೆಗೂ ಚಾಲ್ತಿಯಲ್ಲಿದ್ದ ನಟ ಅಂದ್ರೆ ಅದು ವಜ್ರಮುನಿ ಮಾತ್ರ.

  1969 ರಿಂದ ಹಿಡಿದು 1996 ವರೆಗೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ವಜ್ರಮುನಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ನಟ ಭಯಂಕರ' ಎಂದೇ ಖ್ಯಾತರಾಗಿದ್ದ ವಜ್ರಮುನಿ ನಮ್ಮನ್ನೆಲ್ಲಾ ಅಗಲಿ ಇಂದಿಗೆ 10 ವರ್ಷ. [ನಟ ಭೈರವ ವಜ್ರಮುನಿ ಸವಿನೆನಪು...ಚಿತ್ರ ನಮನ]

  'ನಟ ಭೈರವ' ವಜ್ರಮುನಿ ಸ್ಮರಣಾರ್ಥ ನಿಮಗೆ ಅವರ ಮೃದು ಸ್ವಭಾವದ ಕುರಿತು ಸಣ್ಣ ನಿದರ್ಶನ ಹೇಳ್ತೀವಿ ಕೇಳಿ...

  ತೆರೆಮೇಲೆ ಕ್ರೂರಿಯಾಗಿ ಕಾಣುವ ವಜ್ರಮುನಿ ನಿಜ ಜೀವನದಲ್ಲಿ ಮೃದು ಸ್ವಭಾವದ ವ್ಯಕ್ತಿ. ಯಾರೊಬ್ಬರಿಗೂ ನೋವಾಗದಂತೆ ನಡೆದುಕೊಳ್ಳುವ ವ್ಯಕ್ತಿತ್ವ ಅವರದ್ದು.

  ಎಷ್ಟೋ ಸಿನಿಮಾಗಳಲ್ಲಿ ವಜ್ರಮುನಿ 'ರೇಪ್ ಸೀನ್'ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಂತಹ ದೃಶ್ಯಗಳನ್ನ ನೋಡಿ ನೀವು ವಜ್ರಮುನಿಯವರಿಗೆ ಹಿಡಿಶಾಪ ಹಾಕಿರ್ತೀರಾ. ಆದ್ರೆ, ಇಂತಹ ಸನ್ನಿವೇಶಗಳಿಗಾಗಿ ಬಣ್ಣ ಹಚ್ಚುವ ಮುನ್ನ 'ರೇಪ್ ಸೀನ್'ನಲ್ಲಿ ಭಾಗಿಯಾಗುವ ಹೆಣ್ಣು ಮಗಳಿಗೆ ವಜ್ರಮುನಿ ಕ್ಷಮೆ ಕೇಳುತ್ತಿದ್ದರು ಅನ್ನೋದು ಮಾತ್ರ ಹೆಚ್ಚಿನ ಮಂದಿಗೆ ಗೊತ್ತಿರದ ಸತ್ಯ ಸಂಗತಿ.

  ''ನೋಡಮ್ಮ...ಇದು ನನ್ನ ವೃತ್ತಿ ಧರ್ಮ. ಹಾಗೆಯೇ ಇದು ವೃತ್ತಿ ಕರ್ಮ. ಚಿತ್ರಕ್ಕೆ ನ್ಯಾಯ ಒದಗಿಸುವ ಸಲುವಾಗಿ ಈ ಸೀನ್ ನಲ್ಲಿ ನಾನು ಭಾಗಿಯಾಗಬೇಕಿದೆ. ಯಾವುದೇ ಕಾರಣಕ್ಕೂ ಬೇಸರ ಮಾಡಿಕೊಳ್ಳಬೇಡ. ಏನಾದರೂ ಅಚಾತುರ್ಯವಾದರೆ ಕ್ಷಮಿಸು'' ಅಂತ ಸನ್ನಿವೇಶದಲ್ಲಿ ಪಾಲ್ಗೊಳ್ಳುವ ಹೆಣ್ಣು ಮಗಳಿಗೆ ಕೈಮುಗಿದು ಕ್ಷಮೆಯಾಚಿಸಿ, ನಂತರ ಸೀನ್ ನಲ್ಲಿ ವಜ್ರಮುನಿ ಭಾಗಿಯಾಗುತ್ತಿದ್ದರು.

  ತೆರೆಮೇಲೆ ಎಷ್ಟೇ ಕಠಿಣ ಹೃದಯಿ ಆಗಿ ಕಾಣಿಸಿಕೊಂಡರೂ, ನಿಜ ಜೀವನದಲ್ಲಿ ವಜ್ರಮುನಿ ಕರುಣಾಮಯಿ. ಕಷ್ಟದಲ್ಲಿರುವವರ ಪಾಲಿಗೆ ಸಹೃದಯಿ. ಹಲವಾರು ಸಂಘ, ಸಂಸ್ಥೆಗಳು, ಸಹಕಾರಿ ಸಂಘಗಳಲ್ಲಿ ಸಕ್ರಿಯವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದ ವಜ್ರಮುನಿ, ಬೇಡಿ ಬಂದವರಿಗೆ ನೆರವಿನ ಹಸ್ತ ಕೂಡ ಚಾಚಿದ್ದರು. [ನಮ್ಮ ವಜ್ರಮುನಿ, ನೆನೆದವರ ಮನದಲ್ಲಿ ಮಾತ್ರ !]

  ಇಂತಹ ಅಪ್ರತಿಮ ಕಲಾವಿದ ಕಿಡ್ನಿ ವೈಫಲ್ಯದಿಂದ ಜನವರಿ 5, 2006 ರಂದು ಕೊನೆಯುಸಿರೆಳೆದರು. ಇಂದಿಗೂ ಅದೆಷ್ಟೋ ಜನರ ಮನಸ್ಸಲ್ಲಿ ವಜ್ರಮುನಿ ಜೀವಂತ ಅನ್ನೋದಕ್ಕೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ 'ವಜ್ರಮುನಿ' ಸ್ಮರಣೆ ಮಾಡುತ್ತಿರುವ ಕನ್ನಡಿಗರೇ ಸಾಕ್ಷಿ.

  ಕನ್ನಡ ಚಲನಚಿತ್ರ ರಸಿಕರ ಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ಖಳನಾಯಕ ವಜ್ರಮುನಿ. (10 May 1944 – 5 January 2006) ಇವತ್ತು ಅವರ 10 ನೇ ಪ...

  Posted by S K Shama Sundar on Monday, January 4, 2016

  ವಜ್ರಮುನಿಯವರ ಸ್ಮರಣಾರ್ಥ ಬೆಂಗಳೂರಿನ ಜಯನಗರದಲ್ಲಿರುವ ವಿಶ್ವಪ್ರಿಯ ತಿಂಡಿ ಕೇಂದ್ರದ ಮಾಲಿಕ ನಾರಾಯಣ ರಾವ್ ಈ ವರ್ಷದ ಪಾಕೆಟ್ ಕ್ಯಾಲೆಂಡರ್ ಹೊರತಂದಿದ್ದಾರೆ.

  ವಜ್ರಮುನಿಯ ಶಾಶ್ವತ ಅಭಿಮಾನಿಯೊಬ್ಬರು ನನಗೆ ಪರಿಚಯ. ಅವ್ರು ಪ್ರತೀವರ್ಷ ವಜ್ರಮುನಿ ನೆನಪಿಗೆ ಪಾಕೆಟ್ ಕ್ಯಾಲೆಂಡರ್ ಹೊರತರುತ್ತಾರೆ. 2016 Calendar ಬಂದಿದೆ. ನಾಳೆ ಅದರ ಫೋಟೋ ಹಾಕ್ತೀನಿ. ಆಯ್ತಾ.

  Posted by S K Shama Sundar on Monday, January 4, 2016

  ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಶೈಲಿಯಲ್ಲಿ ಅಪಾರ ಸೇವೆ ಸಲ್ಲಿಸಿರುವ ವಜ್ರಮುನಿ ಇಂದು ನಮ್ಮೊಂದಿಲ್ಲ. ಅವರ ಚಿತ್ರಗಳು....'ಎಲಾ ಕುನ್ನಿ' ಅಂತಹ ಡೈಲಾಗ್ ಗಳು ಮಾತ್ರ ಇನ್ನೂ ಕಿವಿಯಲ್ಲಿ ಗುಯ್...ಗುಟ್ಟುತ್ತಿವೆ.

  English summary
  Veteran Actor, Villain Late Vajramuni 10th Death Anniversary today (January 5th). On this Occasion, here is an Interesting Fact about Vajramuni.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X