For Quick Alerts
ALLOW NOTIFICATIONS  
For Daily Alerts

ಇಸ್ಪೀಟ್ ಆಡುತ್ತಿದ್ದ ಸಿನಿಮಾ ನಟನ ತಂದೆ ಬಂಧನ

By Rajendra
|

ಮಕ್ಕಳು ಏನಾದರೂ ತಪ್ಪು ಮಾಡಿದರೆ ತಂದೆ ತಾಯಿಯರಿಗೆ ಕೆಟ್ಟ ಹೆಸರು ಬರುತ್ತದೆ.ಎಂಥಾ ಮಕ್ಕಳನ್ನು ಹೆತ್ತರಪ್ಪಾ ಎಂದು ಜನ ಆಡಿಕೊಳ್ಳುತ್ತಾರೆ. ಆದರೆ ಇದಕ್ಕೆ ವಿಭಿನ್ನವಾದ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ. ಮಾಸ್ ಮಹಾರಾಜ್ ಎಂದೇ ಜನಪ್ರಿಯನಾದ ನಟ ರವಿತೇಜ ಅವರ ತಂದೆ ಇಸ್ಪೀಟ್ ಆಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಪ್ಪನಿಂದ ಮಗನಿಗೆ ಕೆಟ್ಟ ಹೆಸರು ಬಂದಂತಾಗಿದೆ.

ಈ ಹಿಂದೆ ರವಿತೇಜ ಅವರ ಸಹೋದರರಾದ ರಘು ಬಾಬು ಮತ್ತು ಭರತ್ ನಿಷೇಧಿತ ಡ್ರಗ್ಸ್ ಖರೀದಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈಗ ರವಿತೇಜ ಅವರ ತಂದೆ ಭೂಪತಿ ರಾಜು(70) ಹೈದರಾಬಾದ್‌ನ ಗೋಲ್ಡನ್ ಕ್ಲಬ್‌ನಲ್ಲಿ ಇಸ್ಪ್ಪೀಟ್ ಆಡುತ್ತಿರಬೇಕಾದರೆ ಪೊಲೀಸರು ಬಂಧಿಸಿದ್ದಾರೆ. ಇವರ ಜೊತೆಗೆ ಒಟ್ಟು 46 ಮಂದಿ ರೆಡ್ ಹ್ಯಾಂಡೆಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಆಂಧ್ರ ಪ್ರದೇಶದ ಕ್ರೀಡಾ ಕಾಯಿದೆ ಉಲ್ಲಂಘಿಸಿ ಇವರು ಇಸ್ಪೀಟ್ ಆಡುತ್ತಿದ್ದರು. ಹಾಗಾಗಿ ಇವರನ್ನು ಬಂಧಿಸಿರುವುದಾಗಿ ಸಹಾಯಕ ಪೊಲೀಸ್ ಕಮೀಷನರ್ ಜಿ ಪಿ ವಾಸುಸೇನ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇವರೆಲ್ಲಾ ಕ್ಲಬ್‌ನಲ್ಲಿ ಅಕ್ರಮವಾಗಿ ಇಸ್ಪೀಟ್ ಆಡುತ್ತಿದ್ದರು ಎನ್ನಲಾಗಿದೆ. ಒಟ್ಟು ರು. 38,350 ನಗದನ್ನು ಜಪ್ತಿ ಮಾಡಲಾಗಿದೆ. ಇವರೆಲ್ಲರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

English summary
Telugu film star Ravi Teja facing the problems from his family members. Recently Ravi Teja’s borthers Raghu Babu and Bharat, were caught red handed by the Task Force in Hyderabad for allegedly buying banned drugs. Now the latest news is that Ravi Teja’s father Bhoopathi Raju was arrested at the Golden Club in Ranigunj on gambling charges for playing a game of cards.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more