»   »  ಆರುಂಧತಿ ನಾಗ್ ಗೆ ಕೇಂದ್ರ ನಾಟಕ ಪ್ರಶಸ್ತಿ

ಆರುಂಧತಿ ನಾಗ್ ಗೆ ಕೇಂದ್ರ ನಾಟಕ ಪ್ರಶಸ್ತಿ

Subscribe to Filmibeat Kannada

ಬೆಂಗಳೂರು, ಜ. 11 : ರಂಗಭೂಮಿ ಕ್ಷೇತ್ರದಲ್ಲಿ ರಾಷ್ಟ್ರದ ಪ್ರಶಸ್ತಿಯಾದ ಕೇಂದ್ರ ಸಂಗೀತ ನಾಟಕ ಆಕಾಡೆಮಿ ಪ್ರಶಸ್ತಿಗೆ ಈ ಬಾರಿ ಸೃಜಲಶೀಲ ಅಭಿನೇತ್ರಿ ಆರುಂಧತಿ ನಾಗ್ ಪಾತ್ರರಾಗಿದ್ದಾರೆ.

ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಅಭಿನಯ ಹಾಗೂ ಅತ್ಯುತ್ತಮ ಸಂಘಟನಾಶೀಲತೆಯಿಂದ ತನ್ನದೇ ಆದ ಛಾಪು ಮೂಡಿಸಿರುವ ಆರುಂಧತಿ ನಾಗ್ ರಂಗಶಂಕರದ ಮೂಲಕ ಅನನ್ಯ ಕೊಡುಗೆ ನಿರ್ಮಿಸಿದ್ದಾರೆ. ಮುಂಬೈ ಮೂಲದ ಅರುಂಧತಿ ಅಲ್ಲಿ ಫೃಥ್ವಿ ಥಿಯೇಟರ್ ನಲ್ಲಿ ರಂಗ ತಾಲೀಮು ಕಲಿತವರು. ಮರಾಠಿ, ಗುಜರಾತಿ, ಹಿಂದಿ ನಾಟಕಗಳ ಅಭಿನಯದಲ್ಲೇ ಬೆಳೆದ ಆರುಂಧತಿ ದೆಹಲಿ ರಾಷ್ಟ್ರೀಯ ನಾಟಕ ಶಾಲೆ ವಿದ್ಯಾರ್ಥಿನಿ. ಅಲ್ಲೇ ಜತೆಯಾದ ಕನ್ನಡದ ಅದ್ಭುತ ನಟ ಶಂಕರನಾಗ್ ಅವರೊಂದಿಗೆ ಕನ್ನಡ ನಾಡಿಗೆ ಕಾಲಿಟ್ಟ ಆರುಂಧತಿ ಹಿಂತಿರುಗಿ ನೋಡಿದವರಲ್ಲ.

ನೋಡಿ ಸ್ವಾಮಿ ನಾವಿರೋದೆ ಹೀಗೆ ಸಿನಿಮಾದಿಂದ ಹಿಡಿದು ಶಂಕರನಾಗ್ ಸೇರಿದಂತೆ ಆ ಜಮಾನದ ನಾಯಕರ ಜತೆ ನಾಯಕಿಯಾಗಿ ತಮ್ಮದೇ ಆದ ಛಾಪು ಮೂಡಿಸಿದವರು. ಇತ್ತೀಚೆಗೆ ಭರ್ಜರಿ ಆಟ ಪ್ರದರ್ಶಿಸಿದ ಜೋಗಿ ಸಿನಿಮಾದಲ್ಲಿ ಶಿವರಾಜ್ ಕುಮಾರ್ ರ ತಾಯಿ ಪಾತ್ರಕ್ಕೆ ಜೀವ ತುಂಬಿ, ಚಿತ್ರದ ಯಶಸ್ಸಿಗೆ ಕಾರಣರಾದವರು. ದಿಲ್ಸೆ, ಸಪ್ನೆಯಂತ ಹಿಂದಿ ಸಿನಿಮಾಗಳಲ್ಲೂ ನಟಿಸುವ ಮೂಲಕ ಪರಭಾಷಾ ನಟಿಯಾಗಿ ಗುರುತಿಸಿಕೊಂಡವರು.

(ದಟ್ಸ್ ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada