For Quick Alerts
  ALLOW NOTIFICATIONS  
  For Daily Alerts

  ಮತ್ತೆ ಸಮಂತಾಗೇ 'ಮಣೆ' ಹಾಕಿದ ಮಣಿರತ್ನಂ

  |

  ಸಮಂತಾ ಮತ್ತೆ ಸುದ್ದಿಯಲ್ಲಿದ್ದಾಳೆ. ಕಾರಣ ಹಿಂದೊಮ್ಮೆ 'ಪೂಕದೈ' ಚಿತ್ರಕ್ಕೆ ನಿರ್ದೆಶಕ ಮಣಿರತ್ನಂ ಅವರಿಂದ ಸ್ಕ್ರೀನ್ ಟೆಸ್ಟ್ ಮಾಡಿಸಿಕೊಂಡು 'ಫೇಲ್' ಆಗಿದ್ದ ತೆಲುಗು ಸುಂದರಿ ಸಮಂತಾರಿಗೆ ಮತ್ತೆ ಮಣಿರತ್ನಂ ಕರೆ ಕಳಿಸಿದ್ದಾರೆ. ಆಗ ಸಮಂತಾ ಆ ಪಾತ್ರಕ್ಕೆ ಸೂಟ್ ಆಗಲ್ಲ ಅಂದಿದ್ದ ಮಣಿ. ಇದೀಗ ಮತ್ತೆ ಕರೆದಿರುವುದು ಹಲವರ ಹುಬ್ಬೇರಿಸಿದೆ.

  ಸಮಂತಾಗೆ 'ನೋ' ಅಂದಿದ್ದ ಮಣಿ ನಂತರ ಹಿರಿಯ ನಟಿ ರಾಧಾಳ ಮಗಳು ತುಳಸಿಯನ್ನು ಆಯ್ಕೆ ಮಾಡಿದ್ದರು. ನಂತರ ಆಕೆಯ ಬದಲು ಸೋನಮ್ ಕಪೂರ್ ಗೆ ಆಫರ್ ನೀಡಿದ್ದಾಯಿತು. ಆಕೆಯೂ ಬೇಡ ಅಂದ ಮಣಿ 'ಲಕ್ಷ್ಮೀ ಮಂಚು' ಎಂಬ ಬೆಡಗಿಯ ಸ್ಕ್ರೀನ್ ಟೆಸ್ಟ್ ಮಾಡಿದರು. ಬಳಿಕ ಅದೇನಾಯಿತೋ ಏನೋ, ಇದ್ದಕ್ಕಿದ್ದಂತೆ ಮಣಿ ಸೋನಮ್ ಕಪೂರ್ ಬಿಟ್ಟು ಮತ್ತೆ ಸಮಂತಾ ಹಿಂದೆ ಬಿದ್ದಿದ್ದಾರೆ.

  ಆದರೆ ಚಿತ್ರತಂಡದ ಅಭಿಪ್ರಾಯದಂತೆ, ಈ ಬಾರಿಯೂ ಸಮಂತಾ ಆಯ್ಕೆ ಪಕ್ಕಾ ಅಲ್ಲ. ಏಕೆಂದರೆ ಮಣಿಗೆ ಯಾರೂ ಸಿಗದಿದ್ದರಿಂದ ಸಮಂತಾಗೆ ಕರೆ ಹೋಗಿದೆ ಅಷ್ಟೇ. ಮತ್ತೆ ಬದಲಾಗುವುದು ಖಂಡಿತ. ಮಣಿ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇದು ಅವರ ಬಹು ನಿರೀಕ್ಷೆಯ ಚಿತ್ರ. (ಒನ್ ಇಂಡಿಯಾ ಕನ್ನಡ)

  English summary
  Director Mani Ratnam again called Samantha for his movie 'Pookadai'. Once he told not OK for the Samantha.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X