For Quick Alerts
  ALLOW NOTIFICATIONS  
  For Daily Alerts

  ಬೈಕ್‌ನಿಂದ ಬಿದ್ದು ಗಾಯಗೊಂಡ ಸಿನಿಮಾ ತಾರೆ ಸಂಧ್ಯಾ

  By Rajendra
  |

  ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಚಿತ್ರರಂಗದತಾರೆ ಸಂಧ್ಯಾ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಮಲಯಾಳಂನ 'ತ್ರೀ ಕಿಂಗ್ಸ್' ಚಿತ್ರದ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಕೇರಳದ ಅಥಿರಪಲ್ಲಿ ಸಮೀಪದ ಚಾಲಕುಡಿ ಜಲಪಾತದ ಬಳಿ ಸಾಹಸ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿತ್ತು.

  ಬೈಕ್‌ನಲ್ಲಿ ಚೇಸ್ ಮಾಡುವ ಸನ್ನಿವೇಶದ ಚಿತ್ರೀಕರಣದಲ್ಲಿ ಸಂಧ್ಯಾ ಹಾಗೂ ನಾಯಕ ನಟ ಇಂದ್ರಜಿತ್ ಪಾಲ್ಗೊಂಡಿದ್ದರು. ಭಾರಿ ಮಳೆ ಬೀಳುತ್ತಿರುವ ಕಾರಣ ಬೈಕ್‌ನಲ್ಲಿದ್ದ ಇವರು ಜಾರಿ ರಸ್ತೆಗೆ ಬಿದ್ದಿದ್ದಾರೆ. ಆದರೆ ಇಬ್ಬರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು ಸಣ್ಣಪುಟ್ಟ ಗಾಯಗಳಾಗಿವೆ.

  ಸಂಧ್ಯಾ ಕಾಲಿಗೆ ಬೈಕ್‌ನ ಸೈಲೆನ್ಸರ್ ತಗುಲಿದ ಕಾರಣ ಸುಟ್ಟಗಾಯಗಳಾಗಿವೆ. ಕೂಡಲೆ ಆಸ್ಪತ್ರೆಯಲ್ಲಿ ಸಂಧ್ಯಾ ಅವರಿಗೆ ಚಿಕಿತ್ಸೆ ಕೊಡಿಸಲಾಯಿತಾದರೂ ಸ್ವಲ್ಪ ದಿನಗಳ ಮಟ್ಟಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. 'ತ್ರೀ ಕಿಂಗ್ಸ್' ಚಿತ್ರವನ್ನು ಮಲಯಾಳಂನ ವಿ ಕೆ ಪ್ರಕಾಶ್ ನಿರ್ದೇಶಿಸುತ್ತಿದ್ದಾರೆ.

  ಸಂಧ್ಯಾ ಅವರು ಕನ್ನಡದ ಬ್ಲಾಕ್ ಬಸ್ಟರ್ ಚಿತ್ರ 'ಆಪ್ತರಕ್ಷಕ' ಚಿತ್ರದಲ್ಲಿ ಗೌರಿಯಾಗಿ ಗಮನಸೆಳೆದಿದ್ದರು. ನಂದ, ಓ ಗುಲಾಬಿಯೇ, ಸಖ ಸಖಿ, ಒಲವೆ, ಮಸಾಲಾ, ಗುಡ್ ಲಕ್ ಚಿತ್ರಗಳು ಸಂಧ್ಯಾ ಅಭಿನಯದ ಕನ್ನಡ ಚಿತ್ರಗಳು. ತಮಿಳಿನ 'ಕಾದಲ್' ಚಿತ್ರದ ಮೂಲಕ ಸಂಧ್ಯಾ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು. [ಆಪ್ತರಕ್ಷಕ]

  English summary
  Kannada, Telugu, Tamil and Malyalam film actress Sandhya injured during Malayalam film Three Kings shooting at Athirapally waterfalls near Chalakudy, Kerala. The risky action scene was shot at that time. Actor Indrajith and Sandya, who were riding a bike. Due to heavy rain, the bike skidded and both of them fell on the road.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X