For Quick Alerts
  ALLOW NOTIFICATIONS  
  For Daily Alerts

  ತಮಿಳು ಸಿನಿ ತಾರೆ ಶೋಭನಾ ನೇಣಿಗೆ ಶರಣು

  By Rajendra
  |

  ತಮಿಳು ಚಿತ್ರರಂಗದ ಹಾಸ್ಯ ನಟಿ ಶೋಭನಾ ಆತ್ಮಹತ್ಯೆಗೆ ಶರಣಾದ ಘಟನೆ ಚೆನ್ನೈನ ಕೊಟ್ಟುಪುರಂನಲ್ಲಿ ಸೋಮವಾರ (ಜ.10) ನಡೆದಿದೆ. ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಚೆನ್ನೈ ಪೊಲೀಸ್ ಮೂಲಗಳು ತಿಳಿಸಿವೆ.

  ಆತ್ಮಹತ್ಯೆಗೆ ಅನಾರೋಗ್ಯವೇ ಕಾರಣ ಎಂದು ಪ್ರಾಥಮಿಕ ವರದಿ ಹೇಳುತ್ತದೆ. ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯದಲ್ಲಿ ಶೋಭನಾ ನೇಣಿಗೆ ಕೊರಳೊಡ್ಡಿದ್ದಾರೆ. ಆಕೆಯ ತಾಯಿ ವೈರಂ ರಾಣಿ ಅವರು ಔಷಧಿಗಳನ್ನು ತರಲು ದವಾಖಾನೆಗೆ ಹೋಗಿದ್ದರು. ಅವರು ಹಿಂತಿರುಗಿ ಬರುವಷ್ಟರಲ್ಲಿ ಶೋಭನಾ ಆತ್ಮಹತ್ಯೆಗೆ ಶರಣಾಗಿದ್ದರು.

  ನೆರೆಹೊರೆಯವರ ಸಹಾಯದಿಂದ ಬಾಗಿಲನ್ನು ಮುರಿದು ಒಳನುಗ್ಗುವ ವೇಳೆಗೆ ಶೋಭನಾ ಪ್ರಾಣಪಕ್ಷಿ ಹಾರಿಹೋಗಿತ್ತು. ಮೂವತ್ತೊಂದರ ಹರೆಯದ ಶೋಭನಾ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಹಲವಾರು ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಆಕೆ ಅಭಿನಯದ 10 ಚಿತ್ರಗಳು ಇನ್ನೂ ಬಿಡುಗಡೆಯಾಗಿಲ್ಲ. [ಅಪರಾಧ]

  English summary
  Small time actress Shobhana was found dead in Kotturpuram, Chennai on Monday after hanging herself from a ceiling fan. Her health issues might be the reason behind the suicide, says preliminary reports.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X