Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವೇಶ್ಯಾಜಾಲದಲ್ಲಿ ಬೆಂಗಳೂರು ರೂಪದರ್ಶಿಯರ ಬಂಧನ
ದೆಹಲಿ ಮೂಲದ ಮುಂಬೈ ನಿವಾಸಿ ಶ್ವೇತಾ ಕಪೂರ್ (21) ಹಾಗೂ ಲೂಧಿಯಾನ ಮೂಲದ ಪ್ರಿಯಾ ಶುಕ್ಲಾ (23) ಬಂಧಿತ ರೂಪದರ್ಶಿಯರು. ಪಿಂಪ್‌ಗಳಾದ ಮನೋಜ್ ಕುಮಾರ್ (19) ಹಾಗೂ ಆರ್ಯನ್ ಸಿಂಗ್ (22) ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ವೇಶ್ಯಾ ವಾಟಿಕೆಯಲ್ಲಿ ತೊಡಗಿದ್ದ ಕನ್ನಡ ಕಿರುತೆರೆ ನಟಿಯರ ಬಂಧನದ ಬಳಿಕ ಈ ಪ್ರಕರಣ ಬೆಳಕು ಕಾಣುತ್ತಿದೆ.
ಕಳೆದ ಒಂದೂವರೆ ತಿಂಗಳಿಂದ ಈ ಜಾಲ ಇದೇ ಅಪಾರ್ಟ್‌ಮೆಂಟ್‍ನಲ್ಲಿ ಈ ದಂಧೆಯನ್ನು ನಡೆಸುತ್ತಿತ್ತು. ಈ ಜಾಲದ ಪ್ರಮುಖ ಸೂತ್ರಧಾರಿಗಳಾದ ರವಿ ಮತ್ತು ಬಾಲು ಎಂಬುವವರು ತಲೆಮರೆಸಿಕೊಂಡಿದ್ದಾರೆ. ಉತ್ತರ ಭಾರತ ಮೂಲದ ಇವರು ಆರು ತಿಂಗಳಿಗೊಮ್ಮೆ ತಮ್ಮ ತಮ್ಮ ಕಾರ್ಯಸ್ಥಾನವನ್ನು ಬದಲಾಯಿಸುತ್ತಿದ್ದರು ಎಂಬ ಅಂಶ ಪೊಲೀಸರ ವಿಚಾರಣೆ ವೇಳೆ ಬಹಿರಂಗವಾಗಿದೆ.
ಗಿರಾಕಿಗಳನ್ನು ಬುಕ್ ಮಾಡಲು ಹಾಗೂ ಅವರಿಗೆ ತಿಂಡಿ ತೀರ್ಥಗಳನ್ನು ಒದಗಿಸಲು ಮನೋಜ್ ಮತ್ತು ಆರ್ಯನ್ ಅವರನ್ನು ಬಳಸಿಕೊಳ್ಳುತ್ತಿದ್ದರು. ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳು ಇವರ ಟಾರ್ಗೆಟ್ ಆಗಿದ್ದರು. ಒಂದು ರಾತ್ರಿಯ ಸ್ವರ್ಗ ಸುಖಕ್ಕೆ ರು.10,000 ದಿಂದ ರು.15,000 ಚಾರ್ಚ್ ಮಾಡುತ್ತಿದ್ದರು.
ಹದಿಹರೆಯದ ಯುವತಿಯರ ಆಲ್ಬಂ ತೋರಿಸಿ ಗಿರಾಕಿಗಳನ್ನು ಸೆಳೆಯುತ್ತಿದ್ದರು. ಯುವತಿಯರ ಆಯ್ಕೆ ಮೇಲೆ ರೇಟ್ ಫಿಕ್ಸ್ ಆಗುತ್ತಿತ್ತು. ಪೊಲೀಸರು ಆರು ಮೊಬೈಲ್ ಫೋನ್‌ಗಳನ್ನು ರು.6,000 ನಗದು ವಶಪಡಿಸಿಕೊಂಡಿರುವ ಅಶೋಕ ನಗರ ಪೊಲೀಸರು ಈ ನಾಲ್ಕು ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)