»   »  ಸ್ಪೈಸಿ ನಟಿ ಡೈಸಿ ಬೋಪಣ್ಣನಿಗೆ ಪುರುಸೊತ್ತಿಲ್ಲಣ್ಣೋ!

ಸ್ಪೈಸಿ ನಟಿ ಡೈಸಿ ಬೋಪಣ್ಣನಿಗೆ ಪುರುಸೊತ್ತಿಲ್ಲಣ್ಣೋ!

Subscribe to Filmibeat Kannada
ಸ್ಪೈಸಿ ನಟಿ ಡೈಸಿ ಬೋಪಣ್ಣ ಎಲ್ಲಿ? ಕಳೆದ ಒಂದು ವರ್ಷದಿಂದ ಅವರು ಎಲ್ಲೂ ಕಾಣಿಸುತ್ತಿಲ್ಲವಲ್ಲ.ಕಾರಣ ಅವರು ಬೆನ್ನ್ನು ನೋವಿನಿಂದ ಬಳಲುತ್ತಿದ್ದರು. ಆದರೆ ಈಗ ಚೇತರಿಸಿಕೊಂಡು ಬಾಲಿವುಡ್ ನ ಮೂರು ಚಿತ್ರಗಳಲ್ಲಿ ನಟಿಸಲು ಒಪ್ಪಂದ ಮಾಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಿಂದ ಬಾಲಿವುಡ್ ಗೆ ಜಿಗಿದ ಡೈಸಿಗೆ ಈಗ ಪುರುಸೊತ್ತಿಲ್ಲದಂತೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

''ಬೆನ್ನುಮೂಳೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೆ.ಹಾಗಾಗಿ ಮಿಸುಕಾಡುವಂತಿರಲಿಲ್ಲ.ಈ ಸಂದರ್ಭದಲ್ಲಿ ಅರ್ಧಕ್ಕೆ ನಿಂತಿದ್ದ ನನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ್ದೇನೆ'' ಎನ್ನುತ್ತಾರೆ ಡೈಸಿ. 'ಒಲವೆ ಜೀವನ ಲೆಕ್ಕಾಚಾರ'ದಲ್ಲಿ ಅತಿಥಿ ಪಾತ್ರವನ್ನು ಹೊರತುಪಡಿಸಿದರೆ, ಕಳೆದ ಒಂದು ವರ್ಷದಲ್ಲಿ ಸಿನಿಮಾಗೆ ಸಂಬಂಧಿಸಿದ ಯಾವೊಂದು ಕೆಲಸದಲ್ಲೂ ಭಾಗಿಯಾಗಿಲ್ಲ.

ಒಲವೇ ಜೀವನ ಲೆಕ್ಕಾಚಾರದಲ್ಲಿ ಹಾಗೆ ಬಂದು ಹೀಗೆ ಹೋಗುವ ಪಾತ್ರ. ಅಮೃತಧಾರೆಯಲ್ಲಿ ಅಮಿತಾಬ್ ಅತಿಥಿ ಪಾತ್ರವಿದ್ದಂತೆ ಎಂಬ ವಿವರಗಳನ್ನು ಡೈಸಿ ನೀಡಿದ್ದಾರೆ. ಏತನ್ಮಧ್ಯೆ ಡೈಸಿ ನಟಿಸಿರುವ ತೆಲುಗು ಚಿತ್ರ 'ಸ್ವೀಟ್ ಹರ್ಟ್' ಮುಕ್ತಾಯವಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ಕಾರಣ ದೇಹದ ತೂಕ ಏರುಪೇರಾಗಿತ್ತು. ವ್ಯಾಯಾಮ ಮಾಡದ ಕಾರಣ 12 ಕೆಜಿಯಷ್ಟು ತೂಕ ಹೆಚ್ಚ್ಚಾಗಿದ್ದೆ. ನಂತರ ಯೋಗ, ಪಥ್ಯ ಮಾಡಿ ಈಗ ಮೊದಲಿನ ಆಕಾರಕ್ಕೆ ಮರಳಿದ್ದೇನೆ ಎನ್ನುತ್ತಾರೆ ಡೈಸಿ.

ಒಟ್ಟಿನಲ್ಲಿ ಯೋಗ, ಪಥ್ಯದಿಂದ ಅವರ ಸೌಂದರ್ಯ ಮತ್ತಷ್ಟು ಹೆಚ್ಚಿದೆಯಂತೆ. ಸರ್ಕಾರ್, ಗೊಲ್ ಮಾಲ್ ಮತ್ತು ಪಾರ್ಟ್ ನರ್ ಚಿತ್ರಗಳನ್ನು ನಿರ್ಮಿಸಿದ ಸಂಸ್ಥೆಯಿಂದ ಮೂರು ಚಿತ್ರಗಳಲ್ಲಿ ನಟಿಸಲು ಅವಕಾಶ ಬಂದಿದೆ. ದಕ್ಷಿಣದಲ್ಲೂ ಹಲವಾರು ಚಿತ್ರಗಳಲ್ಲಿ ನಟಿಸುವ ಅವಕಾಶ ಬಂದಿತ್ತು. ಆದರೆ ಚಿತ್ರಕತೆ ಇಷ್ಟವಾಗದ ಕಾರಣ ಒಪ್ಪಿಕೊಳ್ಳಲಿಲ್ಲ. ಉತ್ತಮ ಚಿತ್ರಕತೆ, ಸವಾಲೊಡ್ಡುವಂತಹ ಪಾತ್ರ ಬಂದರೆ ಖಂಡಿತ ನಟಿಸುತ್ತೇನೆ ಎಂಬುದು ಡೈಸಿ ಕೊಡುವ ಸ್ಪೈಸಿ ಉತ್ತರ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada