»   » ಗುರು ಪ್ರಸಾದ್ ಹೊಸ ಚಿತ್ರ ಡೈರೆಕ್ಟರ್ಸ್ ಸ್ಪೆಷಲ್

ಗುರು ಪ್ರಸಾದ್ ಹೊಸ ಚಿತ್ರ ಡೈರೆಕ್ಟರ್ಸ್ ಸ್ಪೆಷಲ್

Posted By:
Subscribe to Filmibeat Kannada

ಮಾತಿನಮಲ್ಲ ಗುರುಪ್ರಸಾದ್ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿ, ಮಂಜುನಾಥ ಕಣ್ಣುಬಿಟ್ಟರೆ ಜನವರಿಯಲ್ಲಿ ಗುರು ಸ್ಟಾರ್ಟ್-ಕಟ್ ಹೇಳಲಿದ್ದಾರೆ.

ಮಠದ್ದು ಹಳೆಯ ಕಥೆ, ಕುಡುಕರದ್ದು ನೆನ್ನೆಯ ಕಥೆ, ಗುರುಪ್ರಸಾದ್‌ರ ಇವತ್ತಿನ ಕಥೆಗೆ ಗಾಂಧಿನಗರವೇ ವಸ್ತು. ಅವರು ಕನ್ನಡ ಸಿನಿಮಾ ಉದ್ಯಮದ ಅಪದ್ಧಗಳನ್ನು ವಿಡಂಬಿಸಲು ಹೊರಟಿದ್ದಾರೆ. ಈ ಕೆಲಸವನ್ನು ತಮ್ಮ ಉಳಿದೆರಡು ಚಿತ್ರಗಳಲ್ಲೂ ಮಾಡಿದ್ದಾರಾದರೂ, ಹೊಸಚಿತ್ರದ ಕಥಾವಸ್ತುವೇ ಸಿನಿಮಾಕ್ಕೆ ಸಂಬಂಧಿಸಿದ್ದು.

ಮಠ, ಮಂಜುನಾಥಾದಲ್ಲಿ ಗುರುಪ್ರಸಾದ್‌ಗೆ ಸಾಥ್ ಕೊಟ್ಟಿದ್ದುದು ಜಗ್ಗೇಶ್. ಮಂಜುನಾಥಾ ಸಂದರ್ಭದಲ್ಲಿ ಇಬ್ಬರ ಸಂಬಂಧ ಹಳಸಿದೆ. ಹಾಗಾಗಿ ಗುರು ಹೊಸ ನಾಯಕನನ್ನು ಹುಡುಕಿಕೊಂಡಿದ್ದಾರೆ. ಜಗ್ಗೇಶ್ ತಮ್ಮ ಕೋಮಲ್‌ನನ್ನೇ ನಾಯಕನಾಗಿ ಆರಿಸಿಕೊಂಡಿದ್ದಾರೆ. ಅಣ್ಣನ ಬಗ್ಗೆ ಮುನಿಸಿಕೊಂಡು ತಮ್ಮನಿಗೆ ಒಲಿದಿದ್ದಾರೆ! ಚಿತ್ರದಲ್ಲಿ ಕೋಮಲ್ ಅವರದ್ದು ನಿರ್ದೇಶಕನ ಪಾತ್ರವಂತೆ!

ತಮ್ಮ ಹೊಸಚಿತ್ರಕ್ಕೆ ಗುರುಪ್ರಸಾದ್ ಇಟ್ಟಿರುವ ಹೆಸರು 'ಡೈರೆಕ್ಟರ್ಸ್ ಸ್ಪೆಷಲ್"! ಈ ಶೀರ್ಷಿಕೆಯಿನ್ನೂ ಅಧಿಕೃತವಾಗಿಲ್ಲ. ಚಿತ್ರದ ಶೀರ್ಷಿಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಮಿಟಿ ಮುಂದಿದೆ. ಅನುಮೋದನೆಗೆ ಕಾಯುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada