»   » ಇನ್ಫಿ ಸುಧಾಮೂರ್ತಿ ಚಿತ್ರ ಪ್ರಾರ್ಥನೆ

ಇನ್ಫಿ ಸುಧಾಮೂರ್ತಿ ಚಿತ್ರ ಪ್ರಾರ್ಥನೆ

Posted By:
Subscribe to Filmibeat Kannada

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಕನ್ನಡ ಚಿತ್ರರಂಗಕ್ಕೆ ಪ್ರಾರ್ಥನೆ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ.ಹಿರಿಯ ಸಿನಿ ಪತ್ರಕರ್ತ ನಿರ್ದೇಶನದ ಪ್ರಾರ್ಥನೆ ಚಿತ್ರದಲ್ಲಿ ಸುಧಾಮೂರ್ತಿ ಅವರು ಅನಂತ್ ನಾಗ್, ಪವಿತ್ರಾಲೋಕೇಶ್ ಹಾಗೂ ಪ್ರಕಾಶ್ ರೈ ಅವರ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಉಲ್ಲಾಸದಿಂದ ಮಾತನಾಡಿದ ಸುಧಾಮೂರ್ತಿ ಅವರು, ನನಗೆ ನಟಿಸುವ ಬಯಕೆ ಏನು ಇರಲಿಲ್ಲ. ಈ ಹಿಂದೆ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದೆ. ಮೇಕಪ್ ಇಲ್ಲದೆ ಇರೋ ಪಾತ್ರವಾದರೆ ಓಕೆ ಎಂದು ಶೆಣೈಗೆ ಹೇಳಿದ್ದೆ. ಎಲ್ಲರಂತೆ ಸದಭಿರುಚಿಯ ಚಿತ್ರಗಳು ನೋಡುತ್ತಿರುತ್ತೇನೆ. ಸಂಗೀತವನ್ನು ನಾನು ಪ್ರೀತಿಯಿಂದ ಕೇಳುತ್ತೇನೆ ಎಂದರು.

ಕನ್ನಡ ಭಾಷೆ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪಾತ್ರವನ್ನು ಸುಧಾ ಮೇಡಂಗೆ ನೀಡಲಾಗಿದೆ. ರಾಮಚಂದ್ರ ಐತಾಳ್ ಛಾಯಾಗ್ರಹಣವಿರುವ ಈ ಚಿತ್ರವನ್ನು ಹರೀಶ್ ಅವರು ನಿರ್ಮಿಸಿದ್ದಾರೆ ಎಂದು ಸದಾಶಿವ ಶೆಣೈ ಹೇಳಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada