»   »  ಬಾಕ್ಸಾಫೀಸ್ ಗಳಿಕೆಯಲ್ಲಿ ದಾಖಲೆ ಬರೆದ ಜಂಗ್ಲಿ

ಬಾಕ್ಸಾಫೀಸ್ ಗಳಿಕೆಯಲ್ಲಿ ದಾಖಲೆ ಬರೆದ ಜಂಗ್ಲಿ

Subscribe to Filmibeat Kannada
Junglee movie still
ಬಾಕ್ಸಾಫೀಸ್ ಗಳಿಕೆಯಲ್ಲಿ 'ಜಂಗ್ಲಿ' ಚಿತ್ರ ಹೊಸ ದಾಖಲೆ ನಿರ್ಮಿಸಲು ಹೊರಟಿದೆ. ಕರ್ನಾಟಕದ 65 ಕೇಂದ್ರಗಳಲ್ಲಿ ಜಂಗ್ಲಿ 'ಹೌಸ್ ಫುಲ್' ಪ್ರದರ್ಶನ ಕಾಣುತ್ತಿದ್ದು, ತೆರೆಕಂಡ ನಾಲ್ಕು ದಿನಗಳಲ್ಲಿ 2.5 ಕೋಟಿ ರು.ಗಳಿಗೂ ಹೆಚ್ಚಿನ ಹಣ ಗುಡ್ಡೆಹಾಕಿದೆ. ಚಿತ್ರ ಏನಾಗುತ್ತದೋ ಏನೋ ಎಂದುಕೊಂಡಿದ್ದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ರ ಖುಷಿ ಮುಗಿಲು ಮುಟ್ಟಿದೆ.

ಈ ಹಿಂದೆ ರಾಕ್ ಲೈನ್ ವೆಂಕಟೇಶ್ ನಿರ್ಮಿಸಿದ ಚಿತ್ರಗಳು ಇಷ್ಟೊಂದು ಕಡಿಮೆ ಅಂತರದಲ್ಲಿ ಈ ಪಾಟಿ ಹಣ ಗಳಿಸಿದ ಉದಾಹರಣೆಗಳಿಲ್ಲ.ಅವರ ವೃತ್ತಿ ಜೀವನದಲ್ಲಿ 'ಜಂಗ್ಲಿ' ಹೊಸ ಇತಿಹಾಸ ನಿರ್ಮಿಸಲು ಹೊರಟಿದೆ. ಬಿ ಮತ್ತು ಸಿ ಕೇಂದ್ರಗಳಲ್ಲೂ ಜಂಗ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವುದು ಮತ್ತೊಂದು ಖುಷಿಯ ಸಂಗತಿ. ಒಂದು ವೇಳೆ ಚಿತ್ರ ಸೋತರೆ ತಾವು ಚಿತ್ರರಂಗಕ್ಕೆ ಗುಡ್ ಬೈ ಹೇಳುವುದಾಗಿ ಬೆದರಿಕೆ ಒಡ್ಡಿದ್ದ ನಿರ್ದೇಶಕ ಸೂರಿ ಫೀನಿಕ್ಸ್ ಪಕ್ಷಿಯಂತೆ ಎದ್ದು ಬಂದಿದ್ದಾರೆ!

ದರ್ಶನ್ ಅಭಿನಯದ 'ಗಜ'ಕಳೆದ ವರ್ಷದ ಮೊದಲ ಹಿಟ್ ಚಿತ್ರವಾಗಿತ್ತು. ಈಗ 2009ರ ಮೊದಲ ಹಿಟ್ ಚಿತ್ರ ಎಂಬ ಅಗ್ಗಳಿಕೆಗೆ 'ಜಂಗ್ಲಿ' ಪಾತ್ರವಾಗಿದೆ. ಜಂಗ್ಲಿ ಚಿತ್ರ ನೋಡಿದಪ್ರೇಕ್ಷಕರು ವಿಜಯ್ ನಟನೆ, ರಂಗಾಯಣ ರಘು ಡೈಲಾಗ್ಸ್, ಅಂದ್ರಿತಾ ರೇ ಮೋಹಕ ಚೆಲುವಿಗೆ ಮನಸೋತಿದ್ದಾರೆ! ಸತ್ಯ ಹೆಗಡೆ ಛಾಯಾಗ್ರಹಣ, ಹರಿಕೃಷ್ಣ ಸಂಗೀತ ಕುರಿತು ಉತ್ತಮ ವಿಮರ್ಶೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ಹಳೆ ಪಾತ್ರೆ...ಹಳೆ ಕಬ್ಬಿಣ...ಕ್ಕೆ ಒಳ್ಳೆ ಬೆಲೆ ಸಿಕ್ಕಿದೆ!

(ದಟ್ಸ್ ಕನ್ನಡ ಚಿತ್ರವಾರ್ತೆ)
ಪೂರಕ ಓದಿಗೆ
ಟಿವಿ 9 ಸುದ್ದಿ ವಾಹಿನಿ ಜೊತೆ ಜಂಗ್ಲಿ ಸಣ್ಣ ಮೈತ್ರಿ
ಸೂರಿ ಮಹತ್ವಾಕಾಂಕ್ಷೆಯ ಜಂಗ್ಲಿ ಚಿತ್ರದ ಟ್ರೈಲರ್
ದುಗ್ಗಾಣಿ ಖರ್ಚಿಲ್ಲದೆ ಬಂದ ಜಂಗ್ಲಿ ಧ್ವನಿಸುರುಳಿ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada