For Quick Alerts
  ALLOW NOTIFICATIONS  
  For Daily Alerts

  ತೆರೆಯ ಮೇಲೆ ನೋಡಿ, ಕಿಟ್ಟಿ-ಪ್ರಿಯಾಮಣಿ ಕೋ ಕೋ

  |

  ಆರ್ ಚಂದ್ರು ನಿರ್ದೆಶನ, ಶ್ರೀನಗರ ಕಿಟ್ಟಿ ಹಾಗೂ ಪ್ರಿಯಾಮಣಿ ಜೋಡಿಯ 'ಕೋ ಕೋ' ಚಿತ್ರ ನಾಳೆ ಕರ್ನಾಟಕ ರಾಜ್ಯದಾದ್ಯಂತ ತೆರೆಕಾಣಲಿದೆ. ಚಿತ್ರತಂಡ ಹೇಳಿಕೊಂಡಂತೆ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಲಾಗುವುದು. ಆದರೆ ಕನ್ನಡದಲ್ಲಿ ಪತ್ರಿಕಾ ಜಾಹೀರಾತು ನೋಡಿದರೆ ಇದು ನೂರರ ಗಡಿ ಕೂಡ ದಾಟಿಲ್ಲ. ಚಿತ್ರಕ್ಕೆ ಉದ್ಯಮ ಹಾಗೂ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ನಿರೀಕ್ಷೆಯಿದೆ.

  ಭರಣಿ ಮಿನರಲ್ಸ್ ನಿರ್ಮಾಪಕದ್ವಯರಾದ ಭಾಸ್ಕರ್ ಮತ್ತು ಆದಿ ಸಿನಿಪ್ರೇಕ್ಷಕರಿಗೆ ಒಳ್ಳೆಯ ಚಿತ್ರ ಕೊಡಲಿದ್ದೇವೆ ಎಂಬ ವಿಶ್ವಾಸ ಹೊಂದಿದ್ದಾರೆ. ನಾಯಕ ಶ್ರೀನಗರ ಕಿಟ್ಟಿ, ನಾಯಕಿ ಪ್ರಿಯಾಮಣಿ, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹರ್ಷಿಕಾ ಪೂಣಚ್ಚ ಹಾಗೂ ಅನು ಪ್ರಭಾಕರ್ ಕೂಡ ಚಿತ್ರ ಸಾಕಷ್ಟು ಚೆನ್ನಾಗಿ ಮೂಡಿ ಬಂದಿದೆ ಎಂದಿದ್ದಾರೆ.

  ನಾಳೆ ಬಿಡುಗಡೆ ಆಗಲಿರುವ ಈ ಚಿತ್ರಕ್ಕೆ ಒಳ್ಳೇ ಓಪನಿಂಗ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು. ನಾಳೆ, ಯೋಗೇಶ್ ಮತ್ತು ರಮ್ಯಾ ಜೋಡಿಯ ಚಿತ್ರ 'ಸಿದ್ಲಿಂಗು' ಕೂಡ ಬಿಡುಗಡೆ ಆಗುತ್ತಿದೆ. ಜೊತೆಗೆ ಪರಭಾಷೆಯ ದೊಡ್ಡ ಬಜೆಟ್ ಚಿತ್ರಗಳಾದ 'ಬಿಜನೆಸ್ ಮನ್' ಮತ್ತು 'ನಂಬನ್' ಕೂಡ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿದೆ. ಫಲಿತಾಂಶ ಪ್ರೇಕ್ಷಕರ ಕೈಯಲ್ಲಿದೆ, ಚಿತ್ರತಂಡ ಕಾಯಲೇಬೇಕಾಗಿದೆ. (ಒನ್ ಇಂಡಿಯಾ ಕನ್ನಡ)

  English summary
  Kannada movie Ko Ko releases on this week, jan. 13, 2012. R Chandru directed this movie and Srinagara Kitty and Priyamani acted in lead role. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X