For Quick Alerts
  ALLOW NOTIFICATIONS  
  For Daily Alerts

  ಪಂಕಜ್ ಜೊತೆ ಅಂಬರೀಷ್ ಮೊಳಗಿಸಿದ 'ರಣ'ಕಹಳೆ

  |

  ಆದಿತ್ಯ ಕ್ರಿಯೇಷನ್ಸ್ ಅಡಿಯಲ್ಲಿ ಶಿವಾನಂದ ಮಾದಶೆಟ್ಟಿ ನಿರ್ಮಿಸುತ್ತಿರುವ 'ರಣ' ಚಿತ್ರದ ಚಿತ್ರೀಕರಣ ಅಂತಿಮ ಹಂತಕ್ಕೆ ಬಂದಿದೆ. ಮಧ್ಯಂತರದ ಅಂತಿಮ ಭಾಗ ಹಾಗೂ ಶೀರ್ಷಿಕೆ ಗೀತೆಯ ಚಿತ್ರೀಕರಣ ಮಾತ್ರ ಬಾಕಿ ಉಳಿಸಿಕೊಂಡಿದ್ದು, ಇದೀಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ನಡೆಯುತ್ತಿದೆ.

  ಲಕ್ಷ್ಮಣ್ ಅವರ ಕಥೆಗೆ ಚಿತ್ರಕಥೆ ಹಾಗೂ ನಿರ್ದೇಶನ ಮಾಡುತ್ತಿರುವ ಶ್ರೀನಿವಾಸ್ ಮೂರ್ತಿ, ಸ್ವತಂತ್ರವಾಗಿ ಇದೇ ಪ್ರಥಮ ಬಾರಿಗೆ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಪಂಕಜ್ ನಾಯಕರಾಗಿರುವ ಈ ಚಿತ್ರದಲ್ಲಿ ಹಿರಿಯ ನಟ, ಮಂಡ್ಯದ ಗಂಡು ಅಂಬರೀಷ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಸ್ ನಾರಾಯಣ್ ಚಿತ್ರ 'ವೀರಪರಂಪರೆ'ಯಲ್ಲಿ ಅಂಬರೀಷ್ ನಟಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

  ಪಂಕಜ್ ಗೆ ನಾಯಕಿಯರಾಗಿ ಸುಪ್ರೀತಾ, ಅರ್ಚನಾ ಹಾಗೂ ಸೋನಿಯಾ ಗೌಡ ನಟಿಸಿದ್ದು ಫೆಬ್ರವರಿಯಲ್ಲಿ ಚಿತ್ರ ತೆರೆಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ. ವಿ ಶ್ರೀಧರ್ ಸಂಗೀತ, ರಾಜರತ್ನ ಛಾಯಾಗ್ರಹಣ ಹಾಗೂ ಕೆಂಪರಾಜು ಅವರ ಸಂಕಲನ 'ರಣ' ಚಿತ್ರಕ್ಕಿದೆ. ಬಹುನಿರೀಕ್ಷೆಯ ಈ ಚಿತ್ರವನ್ನು ನೋಡಲು ಮುಂದಿನ ತಿಂಗಳವೆರೆಗೆ ಕಾಯಲೇಬೇಕು. (ಒನ್ ಇಂಡಿಯಾ ಕನ್ನಡ)

  English summary
  Kannada movie 'Rana' completed shooting except end of the interval and a song. In this Pankaj, Supreeta starer movie, Ambarish is in cameo role.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X