For Quick Alerts
  ALLOW NOTIFICATIONS  
  For Daily Alerts

  ಕೋಮಲ್‌ಗೆ ಸಿಕ್ಕಿದ ಹೊಸ ಬೆಡಗಿ ನಿಶಾ ಅಗರವಾಲ್

  By Rajendra
  |

  ಹಾಸ್ಯ ನಟ ಕೋಮಲ್ ಕುಮಾರ್ ಅವರಿಗೆ ಹೊಸ ಬೆಡಗಿ ಸಿಕ್ಕಿದ್ದಾಳೆ. ಹೆಸರು ನಿಶಾ ಅಗರವಾಲ್. ಈಕೆ ರೂಪದರ್ಶಿಯಾಗಿ ತನ್ನ ವೃತ್ತಿಜೀವನ ಆರಂಭಿಸಿ ಬಳಿಕ ಬೆಳ್ಳೆತೆರೆಗೆ ಪದಾರ್ಪಣೆ ಮಾಡಿದ್ದ್ದರು. ತೆಲುಗಿನ 'ಏಮೆಂದಿ ಈ ವೇಳ' ಎಂಬ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಈಗ ಕನ್ನಡಕ್ಕೆ 'ಮರ್ಯಾದೆ ರಾಮಣ್ಣ'ನಿಗೆ ಜೊತೆಯಾಗಲಿದ್ದಾರೆ.

  ತೆಲುಗಿನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡ 'ಮರ್ಯಾದ ರಾಮನ್ನ' ಚಿತ್ರದ ರೀಮೇಕ್ 'ಮರ್ಯಾದೆ ರಾಮಣ್ಣ'. ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನದ ಹಿನ್ನೆಲೆಯಲ್ಲಿ ಚಿತ್ರರಂಗಕ್ಕೆ ಐದು ದಿನಗಳ ರಜೆ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ 'ಮರ್ಯಾದೆ ರಾಮಣ್ಣ' ಚಿತ್ರೀಕರಣ ಸ್ಥಗಿತವಾಗಿದೆ.ಬೀದರ್‌ನ ದೊಮ್ಮಲ ಗುಂಡಿಯಲ್ಲಿ ಚಿತ್ರೀಕರಿಸಿರುವುದು ಈ ಚಿತ್ರದ ಮತ್ತೊಂದು ವಿಶೇಷ.

  ಎಂ ಎಂ ಕೀರವಾಣಿ ಸಂಗೀತ ಸಂಯೋಜಿಸಿರುವ ಚಿತ್ರಕ್ಕೆ ಗುರುಪ್ರಸಾದ್ ನಿರ್ದೇಶವಿದೆ. ಆದರೆ ಇವರು 'ಮಠ' ಖ್ಯಾತಿಯ ಗುರುಪ್ರಸಾದ್ ಅಲ್ಲ. ಗಿರೀಶ್ ಛಾಯಾಗ್ರಹಣ ಇರುವ ಚಿತ್ರದತಾರಾಬಳಗದಲ್ಲಿ ಮುಕೇಶ್ ರಿಷಿ, ಧರ್ಮ ಮತ್ತು ರಾಜೇಶ್ ಅಭಿನಯಿಸಿದ್ದಾರೆ. ವಿಶ್ವಕನ್ನಡ ಸಮ್ಮೇಳನ ಮುಗಿದ ಕೂಡಲೆ ಮತ್ತೆ ಚಿತ್ರೀಕರಣ ಚಾಲನೆ ಪಡೆದುಕೊಳ್ಳಲಿದೆ.

  English summary
  Telugu actress and model Nisha Agarwal acting with Kannada actor Komal Kumar his home production movie 'Maryade Ramanna'. Nisha has acted in ‘Emaindhi Ee Vela’ Telugu film. Guruprasad (Not Matta fame) is the director. MM Keeravani has scored the music. Giri is the cameraman. Mukesh Rishi, Dharma and Rajesh are also in the cast.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X