»   » ಪಿ ವಾಸು ಪುನೀತ್ ರಾಜ್ ಜುಗಲ್ ಬಂಧಿ

ಪಿ ವಾಸು ಪುನೀತ್ ರಾಜ್ ಜುಗಲ್ ಬಂಧಿ

Posted By:
Subscribe to Filmibeat Kannada
Puneeth Rajkumar
ಡಾ. ವಿಷ್ಣುವರ್ಧನ್ ಅವರ ನಾಯಕತ್ವದಲ್ಲಿ ಆಪ್ತಮಿತ್ರ, ಆಪ್ತರಕ್ಷಕ ಚಿತ್ರಗಳನ್ನು ತೆರೆಗೆ ತಂದ ಕೀರ್ತಿಯಲ್ಲಿ ನಿರ್ದೇಶಕನ ಪಾಲು ಇದೆ ಎಂದರೆ ತಪ್ಪಿಲ್ಲ. ಆಪ್ತರಕ್ಷಕ ಚಿತ್ರ ಕಾರಣಾಂತರದಿಂದ ಒಂದು ವಾರದ ನಂತರ ಅಂದರೆ, ಫೆ. 19 ರಂದು ತೆರೆ ಕಾಣುವ ಸಂಭವವಿದೆ.

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪಿ ವಾಸು ಅವರು ಆಪ್ತರಕ್ಷಕ ನಿರ್ದೇಶನದ ನಂತರ ಕೊಂಚ ಬ್ರೇಕ್ ತೆಗೆದುಕೊಂಡು, ಈಗ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ.ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಾಯಕತ್ವದ ಚಿತ್ರಕ್ಕೆ ವಾಸು ನಿರ್ದೇಶಕರಾಗಲಿದ್ದಾರೆ.

ಚಿತ್ರದ ರೂಪುರೇಷೆ ತಯಾರಾಗಿದ್ದು, ಕಥೆ ಮತ್ತು ಚಿತ್ರಕಥೆ ಇನ್ನೂ ಹಣೆಯಬೇಕಾಗಿದೆ ಎಂದು ವಾಸು ಸಮಾರಂಭವೊಂದರಲ್ಲಿ ಹೇಳಿದ್ದಾರೆ. ದಕ್ಷಿಣ ಭಾರತದ ಅತೀ ಬೇಡಿಕೆಯ ನಿರ್ದೇಶಕರಾಗಿರುವ ವಾಸು ನಿರ್ದೇಶಿಸಿದ್ದ 'ಆಪ್ತಮಿತ್ರ' ಚಿತ್ರ ಕನ್ನಡ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದಿತ್ತು. ಈ ಚಿತ್ರವನ್ನು ಪಿರಮಿಡ್ ಸಾಯಿ ಮೀರಾ ಸಂಸ್ಥೆ ತನ್ನ ಬ್ಯಾನರ್ ನಲ್ಲಿ ತಯಾರಿಸಲಿದೆ ಎಂದು ವಾಸು ತಿಳಿಸಿದ್ದಾರೆ.

ಸ್ಪರ್ಧೆ:ಜಸ್ಟ್ ಮಾತ್ ಮಾತಲ್ಲಿ ಸಿಡಿ ಗೆಲ್ಲುವ ಅವಕಾಶ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada