For Quick Alerts
  ALLOW NOTIFICATIONS  
  For Daily Alerts

  ಕಾಳಹಸ್ತಿಯಲ್ಲಿ ಪ್ರಭು, ನಯನತಾರಾ ವಿಶೇಷ ಪೂಜೆ

  By Rajendra
  |

  ಆಂಧ್ರಪ್ರದೇಶದ ಕಾಳಹಸ್ತಿಯಲ್ಲಿ ತಾರಾ ಜೋಡಿಗಳಾದ ಪ್ರಭುದೇವ ಮತ್ತು ನಯನತಾರಾ ವಿಶೇಷ ಪೂಜೆ ಮತ್ತು ಯಜ್ಞವನ್ನು ಸಲ್ಲಿಸಿದ್ದಾರೆ. ತಮ್ಮ ಮದುವೆಗೆ ಎದುರಾಗಿರುವ ವಿಘ್ನಗಳನ್ನು ನಿವಾರಿಸಿಕೊಳ್ಳಲು ಅವರಿಬ್ಬರೂ ಕಾಳಹಸ್ತಿಗೆ ಭೇಟಿ ವಿಶೇಷ ಪೂಜೆಗಳನ್ನು ಮಾಡಿಸಿದ್ದಾಗಿ ಮೂಲಗಳು ತಿಳಿಸಿವೆ.

  ಈಗಾಗಲೆ ಮೂವರು ಮಕ್ಕಳ ತಂದೆಯಾಗಿರುವ ಪ್ರಭುದೇವ ತಮ್ಮ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಆದರೆ ಪ್ರಭುದೇವ ಪತ್ನಿ ರಾಮಲತಾ ಮಾತ್ರ ವಿಚ್ಛೇದನವನ್ನು ಒಪ್ಪುತ್ತಿಲ್ಲ. ಈಗಾಗಲೆ ಆಕೆ ನ್ಯಾಯಾಲಯದ ಮೆಟ್ಟಿಲೇರಿದ್ದು, ತಮ್ಮ ಪತಿ ಪ್ರಭುದೇವ ಅವರನ್ನು ಮರಳಿ ತಮಗೆ ದಕ್ಕುವಂತೆ ಮಾಡಿ ಎಂದು ಅರ್ಜಿ ಸಲ್ಲಿಸಿದ್ದಾರೆ.

  ಈ ಸಂಬಂಧ ಚೆನ್ನೈ ಕೌಟುಂಬಿಕ ನ್ಯಾಯಾಲಯ ಈಗಾಗಲೆ ಪ್ರಭುದೇವ ಮತ್ತು ನಯನತಾರಾ ಅವರಿಗೆ ಸಮನ್ಸ್ ಜಾರಿ ಮಾಡಿದೆ. ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ. ಒಂದು ವೇಳೆ ರಾಮಲತಾ ಪೊಲೀಸರಿಗೆ ದೂರು ನೀಡಿದರೆ ಯಾವುದೇ ಕ್ಷಣದಲ್ಲಿ ಪ್ರಭುದೇವ ಮತ್ತು ನಯನತಾರಾ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

  ಒಟ್ಟಿನಲ್ಲಿ ಈ ಸಮಸ್ಯೆಯನ್ನು ಆದಷ್ಟು ನ್ಯಾಯಲಯದ ಹೊರಗೆ ಬಗೆಹರಿಸಿಕೊಳ್ಳಲು ಪ್ರಭುದೇವ ಚಿಂತಿಸಿದ್ದಾರೆ. ಯಾರಾದರು ಒಬ್ಬ ವಿವಿಐಪಿಯನ್ನು ಕರೆತಂದು ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಾರೆ. ಇದಕ್ಕೂ ಮುನ್ನ ಅವರು ಕಾಳಹಸ್ತಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪ್ರಭುದೇವ ಸಹೋದರರಾಜು ಸುಂದರಂ ಹಾಗೂ ಅವರ ಪೋಷಕರ ಬೆಂಬಲವೂ ಇದೆ ಎನ್ನಲಾಗಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X