»   » 'ಜೋಗಯ್ಯ' ಜತೆ ಕುಣಿಯಲಿದ್ದಾರೆ ಪ್ರಿಯಾಂಕ ಚೋಪ್ರಾ

'ಜೋಗಯ್ಯ' ಜತೆ ಕುಣಿಯಲಿದ್ದಾರೆ ಪ್ರಿಯಾಂಕ ಚೋಪ್ರಾ

Subscribe to Filmibeat Kannada

'ಪ್ರೀತಿ ಏಕೆ ಭೂಮಿ ಮೇಲಿದೆ?' ಚಿತ್ರಕ್ಕೆ ಮಲ್ಲಿಕಾ ಶೆರಾವತ್, 'ರಾಜ್ ದ ಶೋ ಮ್ಯಾನ್' ಚಿತ್ರಕ್ಕೆ ಪ್ರಿಯಾಂಕಾ ಕೊಠಾರಿ (ನಿಶಾ ಕೊಠಾರಿ)ಯನ್ನು ಕರೆತಂದಿದ್ದ ನಿರ್ದೇಶಕ ಪ್ರೇಮ್ ಇದೀಗ ಮತ್ತೊಬ್ಬ ಬಾಲಿವುಡ್ ಬೆಡಗಿಯನ್ನು ಕರೆತರುವ ಸಿದ್ಧತೆಯಲ್ಲಿದ್ದಾರೆ. ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾರನ್ನು ತಮ್ಮ 'ಜೋಗಯ್ಯ' ಚಿತ್ರಕ್ಕಾಗಿ ಕರೆತರುವ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 'ಜೋಗಯ್ಯ' ಚಿತ್ರದ ನಾಯಕ ನಟ ಎಂಬುದು ಗೊತ್ತೇ ಇದೆ. ಕನ್ನಡ ಚಿತ್ರೋದ್ಯಮದಲ್ಲಿ ಅದ್ಭುತ ಯಶಸ್ಸು ದಾಖಲಿಸಿದ್ದ 'ಜೋಗಿ' ಚಿತ್ರದ ಮುಂದುವರಿದ ಭಾಗವಾಗಿ 'ಜೋಗಯ್ಯ'ನನ್ನು ತೆರೆಗೆ ತರುತ್ತಿದ್ದಾರೆ ಪ್ರೇಮ್.

ಪ್ರಸ್ತುತ ಡೇಟ್ಸ್ ಹೊಂದಾಣಿಕೆಗಾಗಿ ಪ್ರಿಯಾಂಕಾ ಚೋಪ್ರಾ ಅವರ ಕಾರ್ಯನಿರ್ವಾಹಕರೊಂದಿಗೆ ಮಾತುಕತೆ ನಡೆದಿದೆ. ಚಿತ್ರದ ಹಾಡೊಂದರಲ್ಲಿ ಪ್ರಿಯಾಂಕರನ್ನು ಬಳಸಿಕೊಳ್ಳುತ್ತೇವೆ. ಈ ಸ್ಟೈಲಿಶ್ ಹಾಡಿಗೆ ಪ್ರಿಯಾಂಕ ಒಪ್ಪುತ್ತಾರೆ ಎಂಬ ಕಾರಣಕ್ಕೆ ಆಕೆಯನ್ನು ಆಯ್ಕೆ ಮಾಡಿರುವುದಾಗಿ ಪ್ರೇಮ್ ತಿಳಿಸಿದ್ದಾರೆ.

ಜೋಗಿ ಚಿತ್ರದಲ್ಲಿ ನಟಿಸಿದ್ದ ಜೆನ್ನಿಫರ್ ಕೊತ್ವಾಲ್ ಅವರ ಬದಲಾಗಿ 'ಜೋಗಯ್ಯ' ನಿಗೆ ಹೊಸ ಮುಖ ಹುಡುಕುತ್ತಿರುವುದಾಗಿ ಪ್ರೇಮ್ ತಿಳಿಸಿದ್ದಾರೆ. ಅವರ ಮನಸ್ಸಿನಲ್ಲಿ ವಿದ್ಯಾ ಬಾಲನ್ ರಂತಹ ಸೀಸನ್ಡ್ ನಟಿಯರನ್ನು ಕರೆತರುವ ಯೋಚನೆ ಇದೆಯಂತೆ. ಶಿವರಾಜ್ ಕುಮಾರ್ ನೂರನೇ ಚಿತ್ರ ಜೋಗಯ್ಯನಿಗೆ ಪ್ರೇಮ್ ಹೊಸ ಹೊಸ ಐಡಿಯಾಗಳನ್ನು ಹುಡುಕುತ್ತಲೇ ಇದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada