»   »  ಪಿಆರ್‌ಒ ನಾಗೇಂದ್ರರ 500ನೇ ಚಿತ್ರ ಸರ್ಕಸ್

ಪಿಆರ್‌ಒ ನಾಗೇಂದ್ರರ 500ನೇ ಚಿತ್ರ ಸರ್ಕಸ್

Posted By:
Subscribe to Filmibeat Kannada
PRO Nagendra Achieves unique feat
ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಪಿಆರ್‌ಒ(ಪತ್ರಿಕಾ ಸಂಪರ್ಕಾಧಿಕಾರಿ) ಕೆಲಸದಲ್ಲಿ ನಿರ್ವಹಿಸುತ್ತಿರುವ ನಾಗೇಂದ್ರ ಅವರು ವಿಶಿಷ್ಟವಾದ ಸಾಧನೆ ಮೆರೆದಿದ್ದಾರೆ. ಜ. 15 ರಂದು ಬಿಡುಗಡೆಯಾಗಲಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸರ್ಕಸ್' ಚಿತ್ರದ ಮುಖಾಂತರ ಪತ್ರಿಕಾ ಸಂಪರ್ಕಾಧಿಕಾರಿಯಾಗಿ 500 ಚಿತ್ರಗಳನ್ನು ಪೂರೈಸಲಿದ್ದಾರೆ.

ರಜಿನಿಕಾಂತ್  ಅವರ ಮಗಳು ಐಶ್ವರ್ಯ ರಜಿನಿಕಾಂತ್  ಅವರು ಸರ್ಕಸ್ ಚಿತ್ರವನ್ನು ವೀಕ್ಷಿಸುತ್ತಿದ್ದು, ಬಹುಶಃ ತೆಲುಗು, ತಮಿಳಿಗೆ ಚಿತ್ರ ರಿಮೇಕ್ ಆಗುವ ಸಾಧ್ಯತೆಗಳಿವೆ. ಈ ವಿಶೇಷ ಪ್ರದರ್ಶನದ ಉಸ್ತುವಾರಿಯನ್ನು ನಾಗೇಂದ್ರ ಅವರು ವಹಿಸಿಕೊಂಡಿದ್ದಾರೆ.

ಸಿನಿಮಾರಂಗದ ಆಗುಹೋಗುಗಳು, ಪತ್ರಿಕಾಗೋಷ್ಠಿಗಳು, ಚಿತ್ರೀಕರಣದ ವರದಿಗಳು, ಸಿನಿಮಾ ಸ್ಥಿರ ಚಿತ್ರಿಕೆಗಳನ್ನು ಕಾಲಕಾಲಕ್ಕೆ ಮಾಧ್ಯಮ ಮಿತ್ರರಿಗೆ ತಲುಪಿಸುವ ಗುರುತರವಾದ ಜವಾಬ್ದಾರಿಯನ್ನು ಪಿಆರ್ ಒ ಹೊಂದಿರುತ್ತಾರೆ. ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿರುವ ನಾಗೇಂದ್ರ ಅವರದ್ದು ಗಾಂಧಿನಗರದಲ್ಲಿ ಜನಪ್ರಿಯ ಹೆಸರು.

ದಶಕದ ಹಿಂದೆ ನಟ ರಘುವೀರ್ ಅವರ ನಾಯಕತ್ವದ 'ಕಾವೇರಿ ತೀರದಲ್ಲಿ" ಎಂಬ ಚಿತ್ರವನ್ನು ನಿರ್ಮಿಸಿ, ಹಣ ಸುರಿದಿದ್ದ ನಾಗೇಂದ್ರ ಅವರು ಭಾರಿ ನಷ್ಟ ಅನುಭವಿಸಿದರು. ಈ ಚಿತ್ರವನ್ನು ಕಲಾಸಾಮ್ರಾಟ್ ಎಸ್. ನಾರಾಯಣ್ ಅವರು ನಿರ್ದೇಶಿಸಿದ್ದರು. ಆದರೆ ಅವರ ನೆಚ್ಚಿನ ಪಿಆರ್ ಒ ಕೆಲಸ ಮಾತ್ರ ಅವರನ್ನು ಕೈಬಿಡಲಿಲ್ಲ. ಇತ್ತೀಚಿಗೆ ಶತದಿನ ಕಂಡ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಬುದ್ಧಿವಂತ' ಚಿತ್ರದ ಬಗ್ಗೆ ಪತ್ರಿಕೆಗಳಲ್ಲಿ ವೈವಿಧ್ಯಮಯ ಸುದ್ದಿ ಜನರಿಗೆ ತಲುಪಲು ಮಾಧ್ಯಮಮಿತ್ರರ ಜತೆಗೆ ಪಿಆರ್ಒ ನಾಗೇಂದ್ರ ಅವರು ಕಾರಣ ಎಂದರೆ ತಪ್ಪಿಲ್ಲ.

ವಿಜಯ್ ರಾಘವೇಂದ್ರ ಅವರ ಕಾರಂಜಿ, ಈಶ್ವರ್ , ನಿಖಿತಾ ಅಭಿನಯದ ರಾಜಕುಮಾರಿ ಚಿತ್ರಕ್ಕೂ ನಾಗೇಂದ್ರ ಅವರೇ ಪಿಆರ್ ಒ.ನಾಗೇಂದ್ರ ಅವರಂಥ ಹಿರಿಯ ಹಿರಿಯ ಸಿನಿಮಾ ಕರ್ಮಿಯ ಜತೆ ಕೆಲಸ ಮಾಡುತ್ತಿರುವುದು ನನ್ನ ಪುಣ್ಯ ಎನ್ನುತ್ತಾರೆ ಅವರ ಸಹಾಯಕ ದೀಪಕ್. ಸಿನಿಮಾ ಪ್ರಚಾರಕ್ಕೆ ಪ್ರತ್ಯೇಕ ವಿಭಾಗವಿದ್ದರೂ ಮಾಧ್ಯಮ ಹಾಗೂ ಸಿನಿಮಾ ತಂಡದ ಮಧ್ಯೆ ಕೊಂಡಿಯಾಗಿರುವ ಪಿಆರ್ ಒಗಳ ಶ್ರಮಕ್ಕೆ ಸಲಾಂ ಹೇಳೋಣ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada