»   » ಪೃಥ್ವಿ ಅರ್ಧ ಶತಕ; ಸೋಲಿಲ್ಲದ ಸರದಾರ ಪುನೀತ್

ಪೃಥ್ವಿ ಅರ್ಧ ಶತಕ; ಸೋಲಿಲ್ಲದ ಸರದಾರ ಪುನೀತ್

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅಭಿನಯದ 'ಪೃಥ್ವಿ' ಚಿತ್ರ ಅರ್ಧ ಶತಕ ಬಾರಿಸಿದೆ. ಇದರ ಜೊತೆಗೆ 'ರಾಮ್' ಚಿತ್ರ ರಜತ ಸಂಭ್ರಮ ಆಚರಿಸಿಕೊಂಡಿದೆ. ಈಗಾಗಲೆ ಪುನೀತ್ ಅಭಿನಯದ ಬಹುತೇಕ ಚಿತ್ರಗಳು 50, 100 ಹಾಗೂ ರಜತ ಸಂಭ್ರಮವನ್ನು ಕಂಡಿವೆ. ಈ ಸಾಲಿಗೆ ಹೊಸದಾಗಿ 'ಪೃಥ್ವಿ' ಹಾಗೂ 'ರಾಮ್' ಚಿತ್ರಗಳು ಸೇರ್ಪಡೆಯಾಗಿವೆ.

ಪುನೀತ್ ಅಭಿನಯದ ಅಭಿ, ವೀರ ಕನ್ನಡಿಗ, ನಮ್ಮ ಬಸವ ಶತಕ ಬಾರಿಸಿದ ಚಿತ್ರಗಳು. ಅಜಯ್, ವಂಶಿ ಚಿತ್ರಗಳು 75 ದಿನ ಪ್ರದರ್ಶನ ಕಂಡಿದ್ದರೆ ರಾಜ್ ದಿ ಶೋ ಮ್ಯಾನ್ ,ಬಿಂದಾಸ್ ಹಾಗೂ ಪೃಥ್ವಿ ಚಿತ್ರಗಳು ಅರ್ಧ ಶತಕ ಬಾರಿಸಿವೆ. ಇದುವರೆಗೂ ಪುನೀತ್ ಅಭಿನಯದ ಚಿತ್ರಗಳು ಸೋತಿಲ್ಲ ಎಂಬುದು ಗಮನಾರ್ಹ ಅಂಶ.

ಬಳ್ಳಾರಿ ಗಣಿಧಣಿಗಳ ಕಥಾ ಹಂದರದ 'ಪೃಥ್ವಿ' ಚಿತ್ರ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಶತಕ ಬಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ರಾಜ್ಯದ 40 ಚಿತ್ರಮಂದಿರಗಳಲ್ಲಿ ಪೃಥ್ವಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಅಪ್ಪು, ಆಕಾಶ್ ಹಾಗೂ ಮಿಲನ ಚಿತ್ರಗಳಂತೆ 'ಪೃಥ್ವಿ' ಚಿತ್ರ ಸಹ ದಾಖಲೆ ನಿರ್ಮಿಸಲಿದೆ ಎಂಬ ವಿಶ್ವಾಸವನ್ನು ಗಾಂಧಿನಗರದಲ್ಲಿ ಹುಟ್ಟುಹಾಕಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada