»   »  ಸದ್ದಿಲ್ಲದಂತೆ ರಾಕ್ ಲೈನ್ ಪುತ್ರನ ನಿಶ್ಚಿತಾರ್ಥ!

ಸದ್ದಿಲ್ಲದಂತೆ ರಾಕ್ ಲೈನ್ ಪುತ್ರನ ನಿಶ್ಚಿತಾರ್ಥ!

Posted By:
Subscribe to Filmibeat Kannada
Rockline's son engaged with Munirathnam's daughter
ಕನ್ನಡ ಚಿತ್ರರಂಗಕ್ಕೆ ಇಂತಹ ನೆಂಟಸ್ತನ ಬಲು ಅಪರೂಪ! ಮದುವೆಯ ಮೂಲಕ ಎರಡು ಸಿನಿಮಾ ಕುಟುಂಬಗಳು ಒಂದಾಗುತ್ತಿವೆ. ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಹಾಗೂ ಮುನಿರತ್ನಂ ನಾಯ್ಡು ಬೀಗರಾಗುತ್ತಿದ್ದಾರೆ!

ಇದುವರೆಗೂ ರಾಕ್ ಲೈನ್ ಮತ್ತು ಮುನಿ ಚಿತ್ರರಂಗದಲ್ಲಿ ದೋಸ್ತಿಗಳಾಗಿದ್ದರು. ರಾಕ್ ಲೈನ್ ಪುತ್ರ ಯತೀಶ್ ಬಾಬು, ಮುನಿ ಮಗಳ ಕೈ ಹಿಡಿಯಲಿದ್ದಾರೆ. ಮದುವೆಗೆ ಇನ್ನೂ ಮುಹೂರ್ತ ನಿಗದಿಯಾಗಿಲ್ಲ. ಕಳೆದ ವಾರ ಅಶೋಕ ಹೋಟೆಲ್ ನಲ್ಲಿ ಸದ್ದಿಲ್ಲದಂತೆ ನಿಶ್ಚಿತಾರ್ಥ ಮುಗಿದು ಹೋಗಿದೆ.

ರಾಕ್ ಲೈನ್ ಪುತ್ರನ ಎಂಗೇಜ್ ಮೆಂಟ್ ಗೆ ಚಿತ್ರರಂಗದ ಬೆರಳೆಣಿಕೆಯಷ್ಟು ಜನ ಮಾತ್ರ ಹೋಗಿದ್ದರು. ಇತ್ತೀಚಿನ ದಿನಗಳಲ್ಲಿ ತಮ್ಮ ಮಗನ ಬೆನ್ನಿಗೆ ಎಲ್ಲ ಜವಾಬ್ದಾರಿಗಳನ್ನು ರಾಕ್ ಲೈನ್ ವಹಿಸುತ್ತಿದ್ದರು. ಯತೀಶ್ ಬಾಬು ಹೆಸರಿನಲ್ಲಿ 'ಸಖ ಸಖಿ' ಚಿತ್ರವನ್ನ್ನು ನಿರ್ಮಿಸಿ, ಎಲ್ಲ ಜಬಾಬ್ದಾರಿಯನ್ನು ಕೊಟ್ಟಿದ್ದರು. ರಾಕ್ ಲೈನ್ ಪ್ರೊಡಕ್ಷನ್ ಚಿತ್ರಗಳಲ್ಲೂ ಯತೀಶ್ ಭಾಗಿಯಾಗಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಯೋಗರಾಜ ಭಟ್ಟರ ಮನಸಾರೆ ಸೆಟ್ಟೇರಿದೆ

ಕನ್ನಡ ಚಿತ್ರಗಳ ಸೋಲು, ಗೆಲುವು ಮತ್ತು ಸವಾಲು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada