»   » ಡಾ.ವಿಷ್ಣು ಚಿತ್ರದ ಹಾಡು ಹಾಡಿ, ಹಣ ಗೆಲ್ಲಿ

ಡಾ.ವಿಷ್ಣು ಚಿತ್ರದ ಹಾಡು ಹಾಡಿ, ಹಣ ಗೆಲ್ಲಿ

Posted By:
Subscribe to Filmibeat Kannada

ಡಾ.ವಿಷ್ಣುವರ್ಧನ್ ಅವರ ಸವಿನೆನಪಿಗಾಗಿ ಕಿರಿಯರು ಮತ್ತು ಹಿರಿಯರಿಗೆ ಏ.30 ರಂದು ಡಾ.ವಿಷ್ಣುವರ್ಧನ್ ಅವರ ಚಿತ್ರದ ಹಾಡುಗಳ ಸ್ಪರ್ಧೆ ಏರ್ಪಡಿಸಲಾಗಿದೆ. ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ನ್ಯೂ ಕ್ರೇಜಿ ಬಾಯ್ಸ್ ಮೆಲೋಡೀಸ್ ಸಂಸ್ಥೆಯ ವತಿಯಿಂದ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಆರಾಧ್ಯ ದೈವವಾಗಿ ನೆಲೆಸಿರುವ ಡಾ.ವಿಷ್ಣುವರ್ಧನ್ ಅವರ ನೆನಪಿಗಾಗಿ ಜಿಲ್ಲಾ ಮಟ್ಟದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಂಡದ ನಾಯಕ ಹಾಗೂ ಗಾಯಕ ಪ್ರಮೋದ್ ತಿಳಿಸಿದರು.

ಕಿರಿಯರು 7 ರಿಂದ 15 ವರ್ಷ ಹಾಗೂ ಹಿರಿಯರು ವಿಭಾಗದಲ್ಲಿ 15 ರಿಂದ 30 ವರ್ಷದೊಳಗಿರಬೇಕು. ಪ್ರಥಮ ಬಹುಮಾನ:- 5 ಸಾವಿರ ರೂಪಾಯಿ ನಗದು ಹಣ ಮತ್ತು ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನ: 3 ಸಾವಿರ ಮತ್ತು ತೃತೀಯ ಬಹುಮಾನ: 2 ಸಾವಿರ ರೂ.ಗಳನ್ನು ಎರಡೂ ವಿಭಾಗಗಳ ವಿಜೇತರಿಗೆ ಮೇ 1 ರಂದು ಕೆಆರ್ ಪೇಟೆಯಲ್ಲಿ  ನಡೆಯುವ ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಭಾರತಿ ವಿಷ್ಣುವರ್ಧನ್ ಅವರಿಂದ ವಿತರಿಸಲಾಗುವುದು ಎಂದು ಪ್ರಮೋದ್ ಹೇಳಿದರು.

ಆಸಕ್ತರು ಏ.25 ರೊಳಗೆ ತಮ್ಮ ಹೆಸರನ್ನು ನೊಂದಾಯಿಸಬೇಕು. ಪ್ರವೇಶ ಶುಲ್ಕ ಕಿರಿಯರಿಗೆ 150 ರೂ., ಹಿರಿಯರಿಗೆ 250 ರೂ. ಗಳಾಗಿವೆ. ಹೆಚ್ಚಿನ ಮಾಹಿತಿಗೆ ಮೊ. 9980656496, 9740013441, , 9036295540ಅಥವಾ 9035842134 ನ್ನು ಸಂಪರ್ಕಿಸಬಹುದೆಂದು ಪ್ರಮೋದ್ ತಿಳಿಸಿದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada