Just In
Don't Miss!
- News
ವ್ಯರ್ಥ ಮಾಡಲು ಸಮಯವಿಲ್ಲ: ಮೊದಲ ದಿನವೇ ಕರ್ತವ್ಯದಲ್ಲಿ ಬ್ಯುಸಿಯಾದ ಬೈಡನ್
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕನ್ನಡಕ್ಕೆ ತೆಲುಗಿನ ಯಶಸ್ವಿ ಚಿತ್ರ ಮಿಸ್ಟರ್ ಪರ್ಫೆಕ್ಟ್
ತೆಲುಗು, ತಮಿಳಿನಲ್ಲಿ ಯಶಸ್ವಿಯಾದ ಚಿತ್ರಗಳನ್ನು ಕನ್ನಡಕ್ಕೆ ರೀಮೇಕ್ ಮಾಡಿ ಇಲ್ಲೂ ಯಶಸ್ಸನ್ನು ಬಹಳಷ್ಟು ಮಂದಿ ಸಾಧಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರರೀಮೇಕ್ ಜೊತೆಗೆ ಆಗಾಗ ಸ್ವಮೇಕ್ ಚಿತ್ರಗಳನ್ನು ಪ್ರೇಕ್ಷಕರ ಮುಂದಿಡುತ್ತಿದ್ದಾರೆ. ಕಿಚ್ಚ ಸುದೀಪ್ ಅವರಂತೂ ರೀಮೇಕ್ ಚಿತ್ರಗಳಿಗೆ ಎತ್ತಿದ ಕೈ. ಗೋಲ್ಡನ್ ಸ್ಟಾರ್ ಗಣೇಶ್ ಕೂಡ ರೀಮೇಕ್ ಚಿತ್ರಗಳಲ್ಲಿ ಹಿಂದೆ ಉಳಿದಿಲ್ಲ.
ಈಗವರು ತೆಲುಗಿನಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಮಿ.ಪರ್ಫೆಕ್ಟ್ ಚಿತ್ರವನ್ನು ಕನ್ನಡಕ್ಕೆ ತರುವ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಆ ಚಿತ್ರದ ರೀಮೇಕ್ ಹಕ್ಕುಗಳನ್ನು ನಿರ್ಮಾಪಕರೊಬ್ಬರು ಈಗಾಗಲೆ ಖರೀದಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನುತ್ತವೆ ಮೂಲಗಳು. ತೆಲುಗಿನಲ್ಲಿ ದಿಲ್ ರಾಜು ನಿರ್ಮಿಸಿದ ಈ ಚಿತ್ರದಲ್ಲಿ ಪ್ರಭಾಸ್ ಹಾಗೂ ಕಾಜಲ್ ಅಗರವಾಲ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
ಸದ್ಯಕ್ಕೆ ಅವರ ಮತ್ತೊಂದು ರೀಮೇಕ್ ಚಿತ್ರ 'ಮೈನಾ' ಕೆಲಸ ಮುಗಿಯಬೇಕಾಗಿದೆ. ಆ ಬಳಿಕವಷ್ಟೆ ಮಿ.ಪರ್ಫೆಕ್ಟ್ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಮಿ. ಪರ್ಫೆಕ್ಟ್ ಚಿತ್ರವನ್ನು ಯಾರು ನಿರ್ಮಿಸಲಿದ್ದಾರೆ, ಆಕ್ಷನ್, ಕಟ್ ಯಾರದು ಎಂಬುದನ್ನು ಮಾತ್ರ ಗಣೇಶ್ ಬಹಿರಂಗಪಡಿಸಿಲ್ಲ. ಗಣೇಶ್ ಚೊಚ್ಚಲ ನಿರ್ದೇಶನದ ಕೂಲ್ ಚಿತ್ರ ಮೇ.12ರಂದು ತೆರೆಗೆ ಬರುತ್ತಿದೆ. (ಏಜೆನ್ಸೀಸ್)