»   » ಊರ್ವಶಿಗೆ ಗಂಡ ಬೇಡವಂತೆ; ಸರಿ ಎಂದಿತು ಕೋರ್ಟ್!

ಊರ್ವಶಿಗೆ ಗಂಡ ಬೇಡವಂತೆ; ಸರಿ ಎಂದಿತು ಕೋರ್ಟ್!

Posted By: Super Admin
Subscribe to Filmibeat Kannada


ಚೆನ್ನೈ, ಅ.11 : ನಟಿ ಊರ್ವಶಿಗೆ ಮುಕ್ತಿ ಸಿಕ್ಕಿದೆ.. ಅವರೇ ಹೇಳುವಂತೆ ಸ್ವಾತಂತ್ರ್ಯ ಸಿಕ್ಕಿದೆ. 'ಶ್ರಾವಣ ಬಂತು', 'ರಾಮಾ ಶಾಮಾ ಭಾಮ', 'ನಾನು ನನ್ನ ಹೆಂಡ್ತಿ' ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿರುವ ತಮಿಳು ಹಾಗೂ ಮಲೆಯಾಳಂನಲ್ಲೂ ಜನಪ್ರಿಯತೆ ಗಳಿಸಿರುವ ಊರ್ವಶಿ, ಚೆನ್ನೈ ಕೋರ್ಟ್‌‍ನಲ್ಲಿ ವಿವಾಹವಿಚ್ಛೇದನ ಪಡೆದಿದ್ದಾರೆ. 

ಮಲೆಯಾಳಂ ನಟ ಮನೋಜ್ ಕೆ ಜಯನ್‌ ಅವರನ್ನು ಪ್ರೀತಿಸಿ 2000ನೇ ಇಸ್ವಿಯಲ್ಲಿ ಮದುವೆಯಾಗಿದ್ದರು. ಇವರಿಬ್ಬರ ದಾಂಪತ್ಯ ಜೀವನ ಪರಸ್ಪರ ಹೊಂದಾಣಿಕೆಯಾಗದೆ, ಚೆನ್ನೈನ ಫ್ಯಾಮಿಲಿ ಕೋರ್ಟ್‌ನಲ್ಲಿ ವಿವಾಹವಿಚ್ಛೇದನಕ್ಕಾಗಿ ಊರ್ವಶಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶರು ಇಬ್ಬರ ಅಹವಾಲನ್ನು ಆಲಿಸಿ ಬುಧವಾರ (ಅ.10) ವಿವಾಹ ವಿಚ್ಛೇದನಕ್ಕೆ ಸಮ್ಮತಿಸಿದ್ದಾರೆ. ಮಗಳನ್ನು ಮನೋಜ್‌ಗೆ ನೀಡಬೇಕೆಂದು ನ್ಯಾಯಾಧೀಶರು ಊರ್ವಶಿಗೆ ಆದೇಶಿಸಿದ್ದಾರೆ.

ವಿವಾಹ ವಿಚ್ಛೆದನದ ಬಗ್ಗೆ ಹೇಳುವುದೇನು ಇಲ್ಲ. ನನ್ನ ಪೋಷಕರು ನನ್ನ ಮಗಳನ್ನು ನೋಡಿಕೊಳ್ಳುತ್ತಾರೆ. ಅವಳು ನನ್ನೊಂದಿಗೇ ಇದ್ದು ಓದಿಕೊಳ್ಳುತ್ತಾಳೆ ಎಂದು ಮನೋಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಿನಿಮಾ ಮಂದಿಯ ಸಂಸಾರಗಳು ನೆಟ್ಟಗೆ ನಿಂತ ಉದಾಹರಣೆಗಳು ಅತಿ ವಿರಳ. ಕಾರಣಗಳು ಏನೇ ಇರಲಿ, ಒಬ್ಬೊಬ್ಬ ನಟಿಯದು ಒಂದು ಕತೆ. ಯಾರು ಸರಿ ಇದ್ದಾರೆ.. ಯಾರು ಸರಿಇಲ್ಲ ಅನ್ನುವ ಪ್ರಶ್ನೆಗಿಂತಲೂ, ಬೇರೆ ಇನ್ನೇನೋ ಕೊರತೆ ಇಲ್ಲಿದೆ ಅನಿಸುತ್ತದೆ. ಈಗ ಊರ್ವಶಿಯ ಕತೆ, ಇದೇ ರೀತಿ ಸರಿತಾದೂ ಇನ್ನೊಂದು ಕತೆ..

(ಏಜನ್ಸೀಸ್) 

 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada