ದರ್ಶನ್ ಜಾಮೀನು ತೀರ್ಪು ಸೆ.13 ಮುಂದೂಡಿಕೆ

ದರ್ಶನ್‍ಗೆ ಜಾಮೀನು ನೀಡದಂತೆ ವಿಜಯನಗರ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಬ್ಬರ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯ ದರ್ಶನ್ ಜಾಮೀನು ಅರ್ಜಿ ಆದೇಶವನ್ನು ಮಂಗಳವಾರಕ್ಕೆ ಕಾದಿರಿಸಿದೆ. ಸೋಮವಾರ (ಸೆ.12) ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಆರಂಭವಾಯಿತು.
ವಿಚಾರಣೆ ಸಂದರ್ಭದಲ್ಲಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸೇರಿದಂತೆ ಕನ್ನಡ ಚಲನಚಿತ್ರ ನಿರ್ಮಾಪಕ ಸಾ ರಾ ಗೋವಿಂದು, ದರ್ಶನ್ ಸಹೋದರ ತೂಗುದೀಪ ದಿನಕರ್ ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಅವರ ಬೆರಳುಗಳಿಗೆ ಆಗಿರುವ ಗಾಯ ಗಂಭೀರವಲ್ಲ. ಕೈ ಬೆರಳುಗಳು ದೇಹದ ಪ್ರಮುಖ ಅಂಗ ಅಲ್ಲ ಎಂದು ಅವರ ಪರ ವಕೀಲ ಕೃಷ್ಣೇಗೌಡ ವಾದಿಸಿದರು.
ವಿಜಯಲಕ್ಷ್ಮಿ ಅವರ ಪ್ರಕರಣ ಕೊಲೆ ಕೃತ್ಯವಲ್ಲ (ಐಪಿಸಿ ಸೆಕ್ಷನ್ 307) ಅದು ಗಾಯಗೊಳಿಸುವ ಯತ್ನ (ಐಪಿಸಿ ಸೆಕ್ಷನ್ 324). ಹಾಗಾಗಿ ಅವರ ವಿರುದ್ಧ ದಾಖಲಿಸಿರುವ ಸೆಕ್ಷನ್ 307ರ ಬದಲಾಗಿ ಸೆಕ್ಷನ್ 324 ದಾಖಲಿಸಬೇಕು ಎಂದು ನ್ಯಾಯಾಲಯವನ್ನು ಕೋರಿದರು. ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶರು ಆದೇಶವನ್ನು ಮಂಗಳವಾರಕ್ಕೆ ತೀರ್ಪನ್ನು ಮುಂದೂಡಿದ್ದಾರೆ.
ಈ ಮೂಲಕ ನಟ ದರ್ಶನ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಇಂದು ತೀರ್ಪು ಹೊರಬೀಳುತ್ತದೆ ಎಂದು ದರ್ಶನ್ ಅಭಿಮಾನಿಗಳು ಸೇರಿದಂತೆ ನಿರ್ಮಾಪಕರು ತೀವ್ರ ಆತಂಕ ಮತ್ತು ಕುತೂಹದಲ್ಲಿದ್ದರು. ಆದರೆ ಮಂಗಳವಾರಕ್ಕೆ ತೀರ್ಪು ಮುಂದೂಡಿರುವ ಕಾರಣ ದರ್ಶನ್ ಅಭಿಮಾನಿಗಳಲ್ಲಿ ಮತ್ತಷ್ಟು ಆತಂಕ ನೆಲಸಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











