ರಾಜ್ ಸಮಾಧಿ ಬಳಿ ದೇಹದಾನ ಘೋಷಿಸಿದ ಶಿವಣ್ಣ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ದೇಹದಾನ ಮಾಡುವುದಾಗಿ ತಮ್ಮ ಅಪ್ಪಾಜಿ ಅವರ 6ನೇ ಪುಣ್ಮಸ್ಮರಣೆ ಸಂದರ್ಭದಲ್ಲಿ ಗುರುವಾರ (ಏ.12) ಕಂಠೀರದ ಸ್ಟುಡಿಯೋದಲ್ಲಿ ಘೋಷಿಸಿದರು. ವರನಟ ಡಾ.ರಾಜ್ ಕುಮಾರ್ ಅವರು ಸಾವಿನ ಬಳಿಕ ತಮ್ಮ ಕಣ್ಣುಗಳನ್ನು ದಾನ ಮಾಡಿದರು. ತಾನು ದೇಹದಾನ ಮಾಡುವುದಾಗಿ ತಿಳಿಸಿದರು.
ಕಂಠೀರವ ಸ್ಟುಡಿಯೋ ಬಳಿ ಡಾ.ರಾಜ್ ಸಮಾಧಿ ಬಳಿ ಮಾತನಾಡುತ್ತಿದ್ದ ಅವರು, ಅಪ್ಪಾಜಿ ಅವರು ನೇತ್ರದಾನ ಮಾಡಿ ಬೇರೆಯವರ ಬಾಳಿನಲ್ಲಿ ಬೆಳಕು ಮೂಡಿಸಿದರು. ಅದೇ ರೀತಿ ತಾವು ದೇಹವನ್ನು ದಾನ ಮಾಡುತ್ತೇವೆ. ಇದರಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು.
ಡಾ.ರಾಜ್ ಸ್ಮಾರಕದ ನಿರ್ಮಾಣ ವಿಳಂಬವಾಗುತ್ತಿದ್ದರೂ ಅದ್ಭುತವಾಗಿ ಮೂಡಿಬರುತ್ತಿದೆ ಎಂದ ಅವರು ಇನ್ನು ಮುಂದೆಯೂ ತಮ್ಮ ಕುಟುಂಬ ರಕ್ತದಾನ, ಅನ್ನದಾನ, ನೇತ್ರದಾನದಂತಹ ಜನಹಿತ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುತ್ತದೆ ಎಂದರು. (ಒನ್‍ಇಂಡಿಯಾ ಕನ್ನಡ)
More from Filmibeat
English summary
Hat Trick Hero Shivaraj Kumar has decided to donate his body to a hospital for research after his death and has signed a declaration to this effect. The actor announced his decision on 6th anniversory fo Dr. Rajkumar at Kanteerava Studio on 12th April.
ಶಿವರಾಜ್ ಕುಮಾರ್ ಹ್ಯಾಟ್ರಿಕ್ ಹೀರೋ ರಾಜ್ ಕುಮಾರ್ shiva rajkumar hat trick hero dr rajkumar ಕಂಠೀರವ ಸ್ಟುಡಿಯೋ


Click it and Unblock the Notifications











