»   »  ಕನ್ನಡದಭಾವನಾ ರಾವ್ ತಮಿಳಿನ ಶಿಕ್ಷಾ ಆದ ಕತೆ!

ಕನ್ನಡದಭಾವನಾ ರಾವ್ ತಮಿಳಿನ ಶಿಕ್ಷಾ ಆದ ಕತೆ!

Posted By:
Subscribe to Filmibeat Kannada
bhavana rao becomes shiksha
ಯೋಗರಾಜ್ ಭಟ್ ರ 'ಗಾಳಿಪಟ' ಚಿತ್ರದಲ್ಲಿ ಉತ್ತಮ ಅಭಿನಯ ನೀಡಿದ್ದ ಭಾವನಾ ರಾವ್ ತಮಿಳು ಚಿತ್ರರಂಗಕ್ಕೆ ಹಾರಿದ್ದು ಗೊತ್ತೇ ಇದೆ. ಭಾವನಾ ಎಂಬ ಹೆಸರು ತಮಗೆ ಆಗಿ ಬರುತ್ತಿಲ್ಲ ಎಂಬ ಕಾರಣಕ್ಕೆ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರದ ಪಂಡಿತರನ್ನು ಸಂಪರ್ಕಿಸಿ ತಮ್ಮ ಹೆಸರನ್ನು ಶಿಕ್ಷಾ ಎಂದು ಬದಲಾಯಿಸಿಕೊಂಡಿದ್ದಾರೆ. ಹೆಸರಿನಲ್ಲಿ ಏನಿದೆ ಎಂದು ಕೇಳುವ ಕಾಲ ಇದಲ್ಲ. ಹೆಸರು ಬದಲಾಯಿಸಿಕೊಂಡರೆ ಅದೃಷ್ಟ ಸಹ ಬದಲಾಗುತ್ತದೆ ಎಂಬ ನಂಬಿಕೆ ಭಾವನಾ ಅವರದು. ತಮಿಳಿನಲ್ಲಿ ಅವರ ಅದೃಷ್ಟ ಹೇಗಿದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ?

ಆಕೆ ನಟಿಸುತ್ತಿರುವ ತಮಿಳು ಚಿತ್ರದಹೆಸರು 'ಕೊಲ ಕೊಲಯ ಮುಂತಿರಿಕ್ಕ' ಎಂದು. ಈ ಚಿತ್ರದ ನಾಯ್ಕ ಕಾರ್ತಿಕ್. ಈ ಹಿಂದೆ ಕಾರ್ತಿಕ್ 'ಯಾರದಿ ನೀ ಮೋಹಿನಿ' ಎಂಬ ಚಿತ್ರದಲ್ಲಿ ಎರಡನೇ ನಾಯಕ ನಟನಾಗಿ ಅಭಿನಯಿಸಿದ್ದ. ತಮಿಳು ಚಿತ್ರದಲ್ಲಿ ನಟಿಸುತ್ತಿದ್ದರೂ ಭಾವನಾ ಅವರಿಗೆ ಕನ್ನಡದ ಬಗೆಗಿನ ವ್ಯಾಮೋಹ ಕಡಿಮೆಯಾಗಿಲ್ಲ. ನನ್ನ ಮೊದಲ ಆಯ್ಕೆ ಕನ್ನಡ ಚಿತ್ರರಂಗ ಎನ್ನುತ್ತಾರೆ ಅವರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ತಮಿಳು ಚಿತ್ರರಂಗೆಕ್ಕೆ ಭಾವನಾ ರಾವ್ ವಲಸೆ!
ಭಾವನಾ ರಾವ್ ನಿರುದ್ಯೋಗ ಪರ್ವ ಅಂತ್ಯ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada