»   » ಇದು ಚಾಲೆಂಜಿಂಗ್ ಸ್ಟಾರ್ 'ವಿರಾಟ್' ದರ್ಶನ

ಇದು ಚಾಲೆಂಜಿಂಗ್ ಸ್ಟಾರ್ 'ವಿರಾಟ್' ದರ್ಶನ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಚಿತ್ರ 'ವಿರಾಟ್' ಶುಕ್ರವಾರ ಸೆಟ್ಟೇರಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ಕಂಠೀರವ ಸ್ಟುಡಿಯೋದಲ್ಲಿ ದರ್ಶನ ಅಭಿಮಾನಿಗಳ ಸಮ್ಮುಖದಲ್ಲಿ ವಿರಾಟ್ ಸೆಟ್ಟೇರಿತು. ಎಚ್ ವಾಸು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ರತ್ನ ಕುಮಾರ್ ನಿರ್ಮಿಸುತ್ತಿದ್ದಾರೆ.

ಇಂದಿನಿಂದ ಚಿತ್ರೀಕರಣ ಭರದಿಂದ ಸಾಗಲಿದ್ದು ಕಂಠೀರವ ಸ್ಟುಡಿಯೋದಲ್ಲಿ ಒಂದು ದಿನದ ಚಿತ್ರೀಕರಣ ನಡೆಸಲಿದ್ದೇವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡಿದರೆ, ಸುದೀಪ್ ಕ್ಯಾಮೆರಾ ಚಾಲನೆ ಮಾಡಿ ಆರಂಭಿಕ ದೃಶ್ಯವನ್ನು ಸೆರೆಹಿಡಿಯುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ಈ ಚಿತ್ರದಲ್ಲಿ ದರ್ಶನ್ ಅವರದು ಉದ್ಯಮಿಯ ಪಾತ್ರ. ಮೂರು ವಿಭಿನ್ನ ಗೆಟಪ್‌ಗಳಲ್ಲಿ ದರ್ಶನ್ ಕಾಣಿಸುತ್ತಾರೆ. ಮೂವರು ಹುಡುಗಿಯರು ದರ್ಶನ್ ಹಿಂದೆ ಬೀಳುತ್ತಾರೆ. ಕಡೆಗೆ ಯಾರಿಗೆ ಒಲಿಯುತ್ತಾನೆ ಎಂಬುದೇ ಚಿತ್ರ ಕ್ಲೈಮ್ಯಾಕ್ಸ್. ದರ್ಶನ್ ಅವರ ಆಕ್ಷನ್ ಇಮೇಜನ್ನು ಗಮನದಲ್ಲಿಟ್ಟುಕೊಂಡು ಚಿತ್ರವನ್ನು ತೆರೆಗೆ ತರಲಾಗುತ್ತಿದೆ.

ಚೈತ್ರಾ, ಇಷಾ ಚಾವ್ಲಾ, ಇಷಿತಾ ವ್ಯಾಸ್ ಚಿತ್ರದ ಮೂವರು ನಾಯಕಿಯರು. ಬೆಂಗಳೂರು, ಮೈಸೂರು ಹಾಗೂ ಸಕಲೇಶಪುರದಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರದ ಎರಡು ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸಲಾಗುತ್ತದೆ. ಕೆ ಕೃಷ್ಣಕುಮಾರ್ ಅವರ ಛಾಯಾಗ್ರಹಣ ಹಾಗೂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Challenging Star Darshan's new flick Viraat launched on Friday (12th August). The movie is produced by Rathna Kumar and directing by H.Vasu. Crazy Star Ravichandran held the clap while Sudeep started the camera for the opening shot at Kanteerava studio.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada