»   » ಮಂಗಳೂರು ಚಿತ್ರರಸಿಕರಿಗೊಂದು ಗುಟ್ಟಿನ ಸುದ್ದಿ

ಮಂಗಳೂರು ಚಿತ್ರರಸಿಕರಿಗೊಂದು ಗುಟ್ಟಿನ ಸುದ್ದಿ

Posted By:
Subscribe to Filmibeat Kannada
Chaplin in the 1900s decade
ಮಂಗಳೂರು ಸಿನಿಮಾ ಪ್ರಿಯರಿಗೊಂದು ಗುಟ್ಟಿನ ಸುದ್ದಿ! ಯಾರಿಗೂ ಹೇಳಬೇಡಿ. ಇನ್ನು ಮುಂದೆ ಪ್ರತಿ ತಿಂಗಳ ಎರಡನೆ ಶನಿವಾರ ಅತ್ಯುತ್ತಮ ದೃಶ್ಯಕಾವ್ಯಗಳನ್ನು ಪ್ರದರ್ಶಿಸಲಾಗುತ್ತದೆ. ಸಹಮತ ಫಿಲಂ ಸೊಸೈಟಿ ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಚಿತ್ರಗಳನ್ನು ಇದೇ ಜೂನ್.12ರಿಂದ ಪ್ರದರ್ಶಿಸಲು ಸಿದ್ಧವಾಗಿದೆ.

ಮಂಗಳೂರಿನ ಸಿನಿಮಾ ಪ್ರಿಯರು, ಬುದ್ಧಿವಂತರು, ವಿದ್ವಾಂಸರ ಕನಸಿನ ಕೂಸು 'ಸಹಮತ ಫಿಲಂ ಸೊಸೈಟಿ'. ಈ ಸಂಸ್ಥೆಯನ್ನು ಅಕ್ಟೋಬರ್ 2009ರಲಿ ಆರಂಭಿಸಲಾಯಿತು. ಮಂಗಳೂರಿನಲ್ಲಿ ನಿರಂತರವಾಗಿ ಸಿನಿಮಾಗಳನ್ನು ಪ್ರದರ್ಶಿಸುತ್ತಾ ಬಂದ ಹೆಗ್ಗಳಿಕೆ ಈ ಸಂಸ್ಥೆಯದು.

ಸ್ಥಳೀಯರಿಂದ ಹಾಗೂ ವಿದ್ಯಾರ್ಥಿಗಳಿಂದ ಚಿತ್ರ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಸಂಸ್ಥೆಯ ಕಾರ್ಯದರ್ಶಿ ಇವಾನ್ ಡಿ"ಸಿಲ್ವ. ಇದೇ ಶನಿವಾರದ ಜಗತ್ ಪ್ರಸಿದ್ಧ ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್ ಅವರ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಚಾಪ್ಲಿನ್ ಅಭಿನಯದ ಈ ಮೂಕಿ ಚಿತ್ರಗಳನ್ನು ನೋಡುತ್ತಾ ಮೂಕವಿಸ್ಮಿತರಾಗಬಹುದು.

The Immigrant, The Adventurer, Easy Street ಹಾಗೂ The Cure ಎಂಬ ನಾಲ್ಕು ಚಿತ್ರಗಳು ಪ್ರದರ್ಶನ ಕಾಣಲಿವೆ. 1914 ರಿಂದ 1922ರ ಅವಧಿಯಲ್ಲಿ ತೆರೆಕಂಡ ಈ ಚಿತ್ರಗಳು ಚಾಪ್ಲಿನ್ ಅಭಿನಯದ ಅತ್ಯ್ಯುತ್ತಮ ದೃಶ್ಯ ಕಾವ್ಯಗಳು. ಈ ಅವಧಿಯಲ್ಲಿ ಚಾಪ್ಲಿನ್ ಅಭಿನಯದ ಎಂಟು ಚಿತ್ರಗಳು ತೆರೆಕಂಡಿದ್ದವು.

ಶ್ರೀಸಾಮಾನ್ಯನ ಬಗ್ಗೆ ತೀವ್ರ ಕಳಕಳಿಯಿದ್ದಂತಹ ನಟ ಚಾಪ್ಲಿನ್. ಹಾಗಾಗಿಯೇ ಆತನ ಜನಪ್ರಿಯತೆ ಇಡೀ ಜಗತ್ತಿಗೆ ವಿಸ್ತರಿಸಿತು. ಲಂಡನ್ ನಲ್ಲಿ ಜನಿಸಿದ ಚಾಪ್ಲಿನ್ ಜೀವನದ ಬಹುತೇಕ ಸಮಯವನ್ನು ಅಮೆರಿಕಾದಲ್ಲಿ ಕಳೆದರು. ಡಿಸೆಂಬರ್ 25, 1977ರಲ್ಲಿ ಸ್ವಿಟ್ಜೆರ್ ಲ್ಯಾಂಡ್ ನಲ್ಲಿ ನಿಧನರಾಗಿದ್ದರು. ಜೂನ್.12ರ ಸಂಜೆ 6 ಗಂಟೆಗೆ ಸಹೋದಯ ಸಭಾಂಗಣ, ಬಲಮಠ ದಲ್ಲಿ ಪ್ರದರ್ಶನ ಆರಂಭವಾಗುತ್ತದೆ. ಪ್ರವೇಶ ಉಚಿತ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada