»   »  ಸೈಕೊ ತಂಡದಿಂದ ಮತ್ತೊಂದು ಹೊಸ ಚಿತ್ರ

ಸೈಕೊ ತಂಡದಿಂದ ಮತ್ತೊಂದು ಹೊಸ ಚಿತ್ರ

Subscribe to Filmibeat Kannada
Raghu Dixit
ಸೈಕೋ ಚಿತ್ರದ ನಾಯಕ ನಟ ಧನುಷ್ ಅವರ ಎರಡನೇ ಚಿತ್ರ'ಒಂದೇ ಗುರಿ' ಶೀಘ್ರದಲ್ಲೇ ಸೆಟ್ಟೇರಲಿದೆ. ಸೈಕೊ ಚಿತ್ರಕ್ಕೆ ನಿರ್ಮಾಪಕರಾಗಿದ್ದ ಗುರುದತ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಗುರುದತ್ ರೊಂದಿಗೆ ಕಿರಣ್ ವೇಣುಗೋಪಾಲ್  ಸಹ ಒಂದೇ ಗುರಿಗೆ ಬಂಡವಾಳ ಹೂಡಿದ್ದಾರೆ. ಸೈಕೊ ಚಿತ್ರದ ಮೂಲಕ ಇಡೀ ನಾಡಿನಾದ್ಯಂತ ಮನೆಮಾತಾದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಈ ಚಿತ್ರಕ್ಕಾಗಿ ಹಾಡೊಂದನ್ನು ಹಾಡುತ್ತಿದ್ದಾರೆ.

ತಮ್ಮ ಪ್ರಥಮ ಚಿತ್ರ ಸೈಕೊದಲ್ಲಿ ಧನುಷ್ ಅಭಿನಯ ಪ್ರೇಕ್ಷಕರ ಗಮನ ಸೆಳೆದಿತ್ತು. ಸೈಕೊ ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಮುಂದಿತ್ತು. ಧನುಷ್ ನಟನೆಗೆ ಪ್ರೇಕ್ಷಕ ವರ್ಗದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಹುತೇಕ ಸೈಕೊ ತಂಡವೇ ಒಂದೇ ಗುರಿಯಲ್ಲಿ ಇರುವುದರಿಂದ ಸಹಜವಾಗಿಯೆ ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮನೆಮಾಡಿದೆ.

ತಾಂತ್ರಿಕವಾಗಿ ಗೆದ್ದು, ಪ್ರೇಕ್ಷಕ ವಲಯದಲ್ಲಿ ಸೋತು, ಬಾಕ್ಸಾಫೀಸಿನಲ್ಲಿ ಗೆದ್ದ ಚಿತ್ರ ಸೈಕೊ. ಈಗ ಆ ಚಿತ್ರದಲ್ಲಿನ ಲೋಪದೋಷಗಳು ಒಂದೇ ಗುರಿಯಲ್ಲಿ ಪುನರಾವರ್ತನೆಯಾಗದಂತೆ ಗುರುದತ್ ಜಾಗ್ರತೆ ವಹಿಸುತ್ತ್ತಿದ್ದಾರೆ. ಒಟ್ಟಿನಲ್ಲಿ ಗುರುದತ್ ತಮ್ಮ ಭಾವಮೈದ ಧನುಷರಿಗೆ ಒಂದೇ ಗುರಿಯ ಮೂಲಕ ಮತ್ತೊಂದು ತಿರುವು ನೀಡಲು ಎಲ್ಲ ವಿಧಗಳಲ್ಲೂ ಪ್ರಯತ್ನಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸೈಕೊ ಚಿತ್ರವನ್ನು ಕರುಣದಿ ಕಾಯೋ ಮಹದೇಶ್ವರ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada