»   » ಗತ ವೈಭವ ಮೆಲಕು ಹಾಕಿದ ಚಿತ್ರೋತ್ಸವ

ಗತ ವೈಭವ ಮೆಲಕು ಹಾಕಿದ ಚಿತ್ರೋತ್ಸವ

Posted By:
Subscribe to Filmibeat Kannada

ಹಿರಿಯ ನಾಗರೀಕರಿಗಾಗಿ ನಡೆದ ಐದು ದಿನಗಳ ಚಿತ್ರೋತ್ಸವ, ಕನ್ನಡ ಚಿತ್ರರಂಗದ ಗತ ವೈಭವವನ್ನು ನೆನಪಿಸುವಲ್ಲಿ ಯಶಸ್ವಿಯಾಗಿದೆ. ಕೊನೆಯ ದಿನ 'ದಿ ಆಡ್ ಕಪಲ್ ' ಅಂಗ್ಲ ಚಿತ್ರ ಪ್ರದರ್ಶಿಸಲಾಯಿತು. ಹಿರಿಯ ನಾಗರೀಕರ ಸಹಾಯಕ್ಕಾಗಿ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡುವಂತೆ ಸಿಎಂ ಅವರಲ್ಲಿ ಮನವಿ ಮಾಡುವುದಾಗಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ನಟಿ ತಾರಾ ಅನುರಾಧ ಹೇಳಿದರು.

ಡಿಗ್ನಿಟಿ ಫೌಂಡೇಶನ್ ಹೆಲ್ಪ್ ಲೈನ್ ಮೂಲಕ ಸರ್ಕಾರಕ್ಕೆ ಬೇಕಾದ ಸಹಕಾರ ನೀಡಲು ಸಿದ್ಧರಿದ್ದೇವೆ. ಹಿರಿಯ ನಾಗರೀಕರಿಗೆ ಹೆಲ್ಪ್ ಲೈನ್ ಸಂಚಾರ ವಾಹನ ಒದಗಿಸಿದರೆ ಅನುಕೂಲವಾಗುತ್ತದೆ ಎಂದು ಡಿಗ್ನಿಟಿ ಫೌಂಡೇಶನ್ ನ ರಾಯಭಾರಿ ಕೂಡ ಆಗಿರುವ ನಟಿ ತಾರಾ ಹೇಳಿದರು.

ಈ ಐದು ದಿನ ಇಲ್ಲಿ ಬಂದಿದ್ದ ಹಿರಿಯರು ತುಂಬಾ ಸಂತೋಷದಿಂದ ಕಾಲ ಕಳೆದರು. ನಮ್ಮ ಬಾಲ್ಯದಲ್ಲಿ ನಮ್ಮನ್ನು ಸಾಕಿ ಸಲುಹಿದವರಿಗೆ ನಾವು ಸಂತೋಷ ನೀಡುವ ಯಾವ ಅವಕಾಶವನ್ನು ತಪ್ಪಿಸಿಕೊಳ್ಳಬಾರದು. ಡಿಗ್ನಿಟಿ ಫೌಂಡೇಶನ್ ಹಿರಿಯರ ಬಗ್ಗೆ ಇಟ್ಟಿರುವ ಕಾಳಜಿಗೆ ನಾನು ಮನ ಸೋತಿದ್ದೇನೆ. ಇನ್ನೂ ಇಂತಹ ಅನೇಕ ಕಾರ್ಯಕ್ರಮಗಳನ್ನು ಜಯಪ್ರಕಾಶ್ ಅವರು ಹಮ್ಮಿಕೊಳ್ಳಲಿ ಅದಕ್ಕೆ ನನ್ನ ಸಹಕಾರ ಇದ್ದೇ ಇರುತ್ತದೆ ಎಂದು ಭಾವುಕರಾಗಿ ನುಡಿದರು.

ಒಂಟಿತನ ಹಾಗೂ ವೃದ್ಧಾಪ್ಯದ ಕೊರಗಿನಿಂದ ಹೊರ ಬರಲು ಇಂಥಾ ಕಾರ್ಯಕ್ರಮಗಳು ಅವಶ್ಯ. ಏನೇ ನೋವಿರಲಿ, ನಗು ನಗುತಾ ಬಾಳಬೇಕು.ಡಿಗ್ನಿಟಿ ಫೌಂಡೇಶನ್ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಹಿರಿಯ ಕಲಾವಿದೆ ಯಮನಾ ಮೂರ್ತಿ ಹೇಳಿದರು.

ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಭಾರತಿ ವಿಷ್ಣುವರ್ಧನ್, ಲೀಲಾವತಿ, ಆರತಿ, ವಿಕೆ ಮೂರ್ತಿ ಹಾಗೂ ನಟ ವಿನೋದ್ ರಾಜ್ ಅವರ ಆಗಮನದಿಂದ ಕಾರ್ಯಕ್ರಮ ಮತ್ತಷ್ಟು ರಂಗೇರಿತು. ಸೃಜನಶೀಲ ನಿರ್ದೇಶಕ ರಾಮು ಕಣಗಾಲ್ ಸಹ ಉಪಸ್ಥಿತರಿದ್ದರು. ಡಿಗ್ನಿಟಿ ಚಲನಚಿತ್ರೋತ್ಸವ ಏಪ್ರಿಲ್ 7 ರಿಂದ 11ರವರೆಗೆ ಕಬ್ಬನ್ ಪಾರ್ಕ್ ನ ಬಾಲ ಭವನ ಸಭಾಂಗಣದಲ್ಲಿ ನಡೆಯಿತು. 1950ರಿಂದ 1970 ರ ಅವಧಿಯಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾಗಳನ್ನು ಪ್ರದರ್ಶಿಸಲಾಯಿತು.

ಡಿಗ್ನಿಟಿ ಫೌಂಡೇಶನ್ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಎನ್ ಬಿ ಚಂದ್ರ ಶೇಖರ್ ಅದರ ನಿರ್ದೇಶಕರು. ಹಿರಿಯ ನಾಗರೀಕರ ನೋವು ನಲಿವಿಗೆ ಸ್ಪಂದಿಸಲು ಸದಾ ಸಿದ್ಧವಾಗಿರುವ ಸಂಸ್ಥೆಯ ಬೆಂಗಳೂರು ಕೇಂದ್ರ ಸಂಪರ್ಕ ಸಂಖ್ಯೆ (080)41511307. ಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada