For Quick Alerts
ALLOW NOTIFICATIONS  
For Daily Alerts

'ಸ್ನೇಹ ಲೋಕ ಕಪ್’ ಮುಡಿಗೇರಿಸಿಕೊಂಡ 'ಶಿವ'ಣ್ಣ

By Rajendra
|

ಭಾನುವಾರ (ಸೆ.11) ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಸ್ನೇಹಲೋಕ ಕ್ರಿಕೆಟ್ ಕಪ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೇತೃತ್ವದ 'ಶಿವ' ತಂಡದ ಪಾಲಾಗಿದೆ. ತನ್ನ ಎದುರಾಳಿ ಟೀಮ್ ಇನ್ಫಿನಿಟಿ ಇಲೆವೆನ್ ತಂಡವನ್ನು ಶಿವ ತಂಡ ಮಣ್ಣುಮುಕ್ಕಿಸಿತು.

ಡಾ.ವಿಷ್ಣುವರ್ಧನ್ ಮೆಮೋರಿಯಲ್ ಕಪ್ ಫೈನಲ್ ಪಂದ್ಯ ರೋಚಕ ಘಟ್ಟದಲ್ಲಿ ಅಂತ್ಯವಾಯಿತು. ಮೊದಲು ಬ್ಯಾಟ್ ಮಾಡಿದ'ಶಿವ' ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 97 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಇನ್ಫಿನಿಟಿ ಇಲೆವೆನ್ ತಂಡ ಕೇವಲ 61 ರನ್‌ಗಳಿಗೆ ಆಲೌಟ್ ಆಯಿತು.

ಶಿವ ತಂಡದಲ್ಲಿ ಕೆ ಪಿ ಶ್ರೀಕಾಂತ್ 17 ರನ್, ಲೋಕಿ 25 ರನ್ ಪೇರಿಸಿದರೆ ಶಿವರಾಜ್ ಕುಮಾರ್ ಒಂದು ರನ್ ಮಾಡಿ ರನ್‌ಔಟ್ ಆದರು. ಬ್ಯಾಟಿಂಗ್‌ನಲ್ಲಿ ಶಿವಣ್ಣ ವಿಫಲರಾದರೂ ಫೀಲ್ಡಿಂಗ್‌ನಲ್ಲಿ ಮಿಂಚಿದರು. ಎರಡು ಅದ್ಭುತ ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ಶಿವಣ್ಣ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

ಶಿವ ತಂಡಕ್ಕೆ ಬೆಸ್ಟ್ ಡಿಸಿಪ್ಲೀನ್ಡ್ ಟೀಮ್ ಎಂಬ ಪ್ರಶಸ್ತಿಯೂ ಸಿಕ್ಕಿತು. ಪಂದ್ಯ ಶ್ರೇಷ್ಠ (ಅನಂತ) ಹಾಗೂ ಸರಣಿ ಶ್ರೇಷ್ಠ (ಸುನಿಲ್) ಎರಡು ಪ್ರಶಸ್ತಿಗಳು ಶಿವ ತಂಡದ ಪಾಲಾದವು. ವಿಷ್ಣು ಅವರ ಪುತ್ರಿ ಕೀರ್ತಿ ಅವರು ಶಿವ ತಂಡಕ್ಕೆ ಪ್ರಶಸ್ತಿಯನ್ನು ವಿತರಿಸಿದರು. ಮಾಜಿ ಕ್ರಿಕೆಟಿಗೆ ವೆಂಕಟೇಶ್ ಪ್ರಸಾದ್, ಶಾಸಕ ವಿಜಯ್ ಕುಮಾರ್, ರಮೇಶ್ ಭಟ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Hat trick hero Shivarajakumar lead team Shiva has won the Tennis Ball ‘Sneha Loka Cup’ held at National college grounds, Jayanagara on Sept 11th, Sunday. Shiva’ team scored 98 runs in 20 over’s losing five wickets. Loki 25 and Srikanth 17 are the key scores.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more