»   »  'ಕಳ್ಳರಸಂತೆ'ಯಲ್ಲಿ ರಂಗೇರಿದ ಸಂಜೆ!

'ಕಳ್ಳರಸಂತೆ'ಯಲ್ಲಿ ರಂಗೇರಿದ ಸಂಜೆ!

By: *ಜಯಂತಿ
Subscribe to Filmibeat Kannada

ಸಂಜೆ ಕಪ್ಪಡರಿದ ನಂತರ ಸುದ್ದಿಗೋಷ್ಠಿ ನಡೆಸಬಾರದು ಎನ್ನುವ ನಿರ್ಮಾಪಕರ ಸಂಘದ ಫರ್ಮಾನು ಮುರಿಯಲಾಗಿದೆ! "ಕಳ್ಳರ ಸಂತೆ" ಚಿತ್ರದ ಸುದ್ದಿಗೋಷ್ಠಿ ರಂಗೇರಿದ್ದೇ ಇಳಿಸಂಜೆ 7ರ ನಂತರ. ಪಾನಗೋಷ್ಠಿ ಇಲ್ಲದೆ ರಂಗೇರಲು ಸಾಧ್ಯವೇ?

"ಕಳ್ಳರ ಸಂತೆ" ಚಿತ್ರದ ಸಂಜೆಗೋಷ್ಠಿಯ ಸುಳಿವು ಸಿಕ್ಕಿದ್ದೇ ನಿರ್ಮಾಪಕರ ಸಂಘದ ಅಧ್ಯಕ್ಷ ಕೆ.ಸಿ.ಎನ್.ಚಂದ್ರಶೇಖರ್ ನಿರ್ಮಾಪಕ ಅಗ್ನಿ ಶ್ರೀಧರ್‌ಗೆ ಫೋನಾಯಿಸಿದ್ದಾರೆ. "ನಿರ್ಮಾಪಕರ ಹಿತಾಸಕ್ತಿ ದೃಷ್ಟಿಯಿಂದಲೇ ಈ ನಿರ್ಣಯ ಕೈಗೊಂಡಿರುವುದು. ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ವೃಥಾ ವೆಚ್ಚ ತಗ್ಗಿಸಲು ಈ ಪಾನ ನಿಗ್ರಹದ ನಿರ್ಣಯ" ಎಂದು ಹೇಳಿದ್ದಾರೆ. ಚಂದ್ರು ಮಾತು ಶ್ರೀಧರ್‌ಗೆ ಸಮ್ಮತವಾಗಿಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ನಿರ್ಬಂಧಗಳನ್ನು ಹೇರುವುದು ಅನುಚಿತ. ಸಂಜೆ ಒಟ್ಟಿಗೆ ಕೂತು ಮಾತಾಡಿದರೆ, ಸಂತೋಷಕೂಟ ನಡೆಸಿದರೆ ತಪ್ಪೇನು? ಅದು ನಿರ್ಮಾಪಕರ ಇಷ್ಟ. ಅರ್ಥವಿಲ್ಲದ ನಿರ್ಬಂಧಗಳನ್ನು ಮುರಿಯಲೆಂದೇ ಈ ಗೋಷ್ಠಿ ನಡೆಸುತ್ತಿದ್ದೇನೆ. ಬೇರೆ ನಿರ್ಮಾಪಕರೂ ಇನ್ನುಮುಂದೆ ಸಂಜೆ ಕಾರ್ಯಕ್ರಮ ನಡೆಸುವರೆಂದು ಆಶಿಸೋಣ ಎಂದರು ಶ್ರೀಧರ್.

ಅರ್ಥವಿಲ್ಲದ ಚೌಕಟ್ಟುಗಳನ್ನು ಹಾಕಿಕೊಳ್ಳುವ ಬದಲು ಶಿಸ್ತಿನಿಂದ ಹಾಗೂ ಯೋಜನಾಬದ್ಧವಾಗಿ ಸಿನಿಮಾ ನಿರ್ಮಿಸಿದರೆ ನಷ್ಟದ ಮಾತಿಲ್ಲ ಎನ್ನುವುದು ಶ್ರೀಧರ್ ನಂಬಿಕೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada