ಮಾಜಿ ರೂಪದರ್ಶಿ ನಟಾಶಾ ಪಡುಬಿದ್ರಿ ಆತ್ಮಹತ್ಯೆ

ಕೆಲ ವರ್ಷಗಳ ಹಿಂದೆ ನಟಾಶಾ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರಿತಿಸಿಕೊಂಡಿದ್ದರು. ಭಾನುವಾರ ಮಧ್ಯಾಹ್ನ ವರ್ಸೋವಾದ ಪ್ರೆಟ್ರಿಕಾರ್ನ್ ಕಟ್ಟಡದ ತನ್ನ ಬೆಡ್ ರೂಮಿನಲ್ಲಿ ದುಪಟ್ಟವನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆಕೆಯ ಮನೆಯವರು ಎರಡು ಫ್ಲಾಟ್ ಗಳನ್ನು ಹೊಂದಿದ್ದರು. ಒಂದರಲ್ಲಿ ನಟಾಶಾ ಅವರು ಒಂಟಿ ಜೀವನ ನಡೆಸುತ್ತಿದ್ದರು.
ನಟಾಶಾ ಸಹೋದರ ಬಾಗಿಲು ಬಡಿಗಾದ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ಪೊಲೀಸರನ್ನು ಕರೆಸಿ ಬಾಗಿಲನ್ನು ಹೊಡೆದು ನೊಡಿದಾಗ ನಟಾಶಾ ಸಾವಿಗೆ ಶರಣಾಗಿದ್ದ್ದರು. ಆಕೆಯ ಸಾವಿಗೆ ಕಾರಣ ತಿಳಿದುಬಂದಿಲ್ಲ. ಆದರೆ ಆಕೆ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಪೊಲೀಸ್ ತನಿಖೆ ಮುಂದುವರಿದಿದೆ.
ನಟಾಶಾ ಪಡುಬಿದ್ರಿ ರೂಪದರ್ಶಿ ಆತ್ಮಹತ್ಯೆ ಅಪರಾಧ ಸುಸೈಡ್ ಮುಂಬೈ ಕಾಮಸೂತ್ರ ಮಾಡೆಲ್ ಖಿನ್ನತೆ natasha padbidri suicide mumbai crime depression


Click it and Unblock the Notifications