»   » 'ಪ್ರೇಮಗಾಮಿ' ಕೆಂಪಾದವೋ ಎಲ್ಲ ಕೆಂಪಾದವೋ

'ಪ್ರೇಮಗಾಮಿ' ಕೆಂಪಾದವೋ ಎಲ್ಲ ಕೆಂಪಾದವೋ

Posted By:
Subscribe to Filmibeat Kannada

ಹಳೆಯ ಸುಮಧುರ ಹಾಗೂ ಅರ್ಥವತ್ತಾದ ಹಾಡುಗಳಲ್ಲಿ ಪಿ ಲಂಕೇಶ್ ರಚನೆಯ ''ಕೆಂಪಾದವೋ ಎಲ್ಲ ಕೆಂಪಾದವೋ...'' ಹಾಡು ಸಹ ಒಂದು. ಖ್ಯಾತ ಪತ್ರಕರ್ತ ಪಿ ಲಂಕೇಶ್ ನಿರ್ದೇಶಿಸಿದ್ದ 'ಎಲ್ಲಿಂದಲೋ ಬಂದವರು' ಚಿತ್ರದ ಆ ಸುಮಧುರ ಗೀತೆಗೆ ವಿಜಯ ಭಾಸ್ಕರ್ ಸಂಗೀತ ಸಂಯೋಜಿಸಿದ್ದರು. ಇದೀಗ ಅದೇ ಸಾಹಿತ್ಯವನ್ನು ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹೊಸ ಟ್ಯೂನ್ ನಲ್ಲಿ ಕೇಳಿಸಲಿದ್ದಾರೆ.

ಕೇವಲ ಟ್ಯೂನ್ ಅಷ್ಟೆ ಅಲ್ಲ ಸ್ವತಃ ಅನೂಪ್ ಸೀಳಿನ್ ಕಂಠದಲ್ಲಿ ಈ ಹಾಡು ಹೊರಹೊಮ್ಮಲಿದೆ. ಇತ್ತೀಚೆಗೆ ಸೆಟ್ಟೇರಿದ 'ಪ್ರೇಮ ಗಾಮಿ' ಚಿತ್ರದ ಕಾರ್ಯಕ್ರದಲ್ಲಿ ''ಕೆಂಪಾದವೋ ಎಲ್ಲ ಕೆಂಪಾದವೋ...'' ಹಾಡಿನ ಕೆಲವು ಚರಣಗಳನ್ನು ಭಿನ್ನ ಟ್ಯೂನ್ ನಲ್ಲಿ ಆಲಿಸಿ ಅನೂಪ್ ಪುಳಕಗೊಳಿಸಿದರು. 1980ರಲ್ಲಿ ತೆರೆಕಂಡ 'ಎಲ್ಲಿಂದಲೋ ಬಂದವರು' ಚಿತ್ರದಲ್ಲಿ ಲೋಕೇಶ್, ವಿಮಲಾ ನಾಯ್ಡು, ಸುರೇಶ್ ಹೆಬ್ಳೀಕರ್, ಮೀನ ಮತ್ತಿತರರು ನಟಿಸಿದ್ದನ್ನು ಸ್ಮರಿಸಬಹುದು.

ತಮ್ಮ ಚಿತ್ರದಲ್ಲಿ ಹಾಡನ್ನು ಅಳವಡಿಸಿಕೊಳ್ಳುತ್ತಿರುವ ಬಗ್ಗೆ ಶ್ರೀಮತಿ ಲಂಕೇಶ್ ಅವರಿಂದ 'ಪ್ರೇಮಗಾಮಿ' ಚಿತ್ರದ ನಿರ್ದೇಶಕ ಶ್ರೀನಿವಾಸ್ ಮತ್ತು ಅನೂಪ್ ಸೀಳಿನ್ ಈಗಾಗಲೆ ಅನುಮತಿಯನ್ನು ಪಡೆದಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ''ಬಾ ಚಕೋರಿ ಚಂದ್ರಮಂಚಕೆ...'' ಹಾಡನ್ನು ಅನೂಪ್ ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ.

'ಪ್ರೇಮಗಾಮಿ' ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು ಈ ಚಿತ್ರ ಮುಂದಿನ ಜನಾಂಗದ ಚಿತ್ರ ಎನ್ನುತ್ತಾರೆ ಸಂಗೀತ ನಿರ್ದೇಶಕ ಅನೂಪ್. ಒಟ್ಟಿನಲ್ಲಿ ಕನ್ನಡ ಚಿತ್ರರಂಗ ಹಳೆಯ ಹಾಡುಗಳ ಗುಂಗಿಗೆ ಹೊರಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಪ್ರೇಮಗಾಮಿ ತಾರಾಗಣದಲ್ಲಿ ಅರಿದ್ರಿತಾ, ಸಮಿ, ತೇಜು, ಸಿನ್ಹಾ, ಕೃಷ್, ಜಾನ್, ಅಭಿ ಮುಂತಾದವರು ಇದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada