»   »  ಅಗ್ಯತವಿದ್ದಾಗ ಮಾತ್ರ ವಾಹನ ಬಳಸಿ: ಪುನೀತ್

ಅಗ್ಯತವಿದ್ದಾಗ ಮಾತ್ರ ವಾಹನ ಬಳಸಿ: ಪುನೀತ್

Subscribe to Filmibeat Kannada

ಬೆಂಗಳೂರಿನ ಟ್ರಾಫಿಕ್ ಪೊಲೀಸರನ್ನು ಶಪಿಸುವವರೇ ಹೆಚ್ಚು. ಒಂದಿಲ್ಲೊಂದು ಕಾರಣಕ್ಕೆ ನಿತ್ಯ ಅವರನ್ನು ಹಳಿಯುತ್ತಲೇ ಇರುತ್ತಾರೆ. ಆದರೆ ಹದಗೆಡುತ್ತಿರುವ ಇವರ ಆರೋಗ್ಯದ ಕಡೆಗೆ ಕನ್ನ್ನಡ ತಾರೆಗಳಾದ ಪುನೀತ್ ರಾಜ್ ಕುಮಾರ್ ಮತ್ತ್ತು ತಾರಾ ಇಂದು ಕಾಳಜಿ ವಹಿಸಿದರು. ಬೆಂಗಳೂರು ಪ್ರೆಜರ್ ಟೌನ್ ಪೊಲೀಸ್ ಠಾಣೆಯ ಸಂಚಾರಿ ಪೊಲೀಸರಿಗೆ ಮಾಸ್ಕ್ ಗಳನ್ನು ವಿತರಿಸಿದರು.

ಸಂಚಾರಿ ಪೊಲೀಸರಿಗೆ ಮಾಸ್ಕ್ ವಿತರಿಸಿದ ಬಳಿಕ ಮಾತನಾಡುತ್ತಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ, ನಮಗೆ ರಕ್ಷಣೆ ಕೊಡುವವರಿಗೆ ನಾವು ರಕ್ಷಣೆ ಕಲ್ಪಿಸಬೇಕಾಗಿದೆ. ಸಂಚಾರಿ ಪೊಲೀಸರ ಆರೋಗ್ಯದ ಕಡೆಗೆ ಎಲ್ಲರೂ ಕಾಳಜಿ ವಹಿಸಬೇಕಾಗಿದೆ. ಅವರು ಚೆನ್ನಾಗಿದ್ದರೆ ಅವರು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದರು.

ನಟ ಪುನೀತ್ ರಾಜ್ ಕುಮಾರ್ ಮಾತನಾಡುತ್ತಾ, ಸಂಚಾರಿ ಪೊಲೀಸರು ಮಾಲಿನ್ಯವನ್ನೂ ಲೆಕ್ಕಿಸದೆ ಸ್ವತಃ ನಿಂತು ಗೈಡ್ ಮಾಡುತ್ತಿರುತ್ತಾರೆ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕರ್ತವ್ಯ ಎಂದರು. ಅಗತ್ಯವಿದ್ದಾಗ ಮಾತ್ರ ವಾಹನಗಳನ್ನು ಬಳಸಿ. ಇದರಿಂದ ಟ್ರಾಫಿಕ್ ಸಮಸ್ಯೆ ಹಾಗೂ ಮಾಲಿನ್ಯವನ್ನು ತಡೆಗಟ್ಟಬಹುದು. ಎಲ್ಲ ಪೊಲೀಸ್ ಠಾಣೆಗಳಿಗೂ ಮಾಸ್ಕ್ ಗಳನ್ನು ವಿತರಿಸಬೇಕಾದ ಅಗತ್ಯವಿದೆ ಎಂದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada